
ದೇವನಹಳ್ಳಿ, ಮೇ 31: ಸಾಂಬಾರ್ ವಿಚಾರಕ್ಕೆ ದಂಪತಿ (couple) ನಡುವೆ ಉಂಟಾದ ಕಲಹ ಪತ್ನಿ ಸಾವಿನಲ್ಲಿ (death) ಅಂತ್ಯವಾಗಿರುವಂತಹ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರತ್ನ (38) ಸಾವನ್ನಪಿದ ಗೃಹಿಣಿ. ಮನೆಯಲ್ಲಿ ನೇಣಿ ಬಿಗಿದುಕೊಂಡ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಆಗಿದೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮಗಳದ್ದು ಆತ್ಮಹತ್ಯೆಯಲ್ಲ, ಕೊಲೆ ಅಂತ ಮಹಿಳೆಯ ತವರು ಮನೆಯವರ ಆರೋಪ ಮಾಡಿದ್ದಾರೆ. ಹಣಕಾಸಿನ ವಿಚಾರಕ್ಕೆ ಗಂಡ ಕೊಲೆ ಮಾಡಿದ್ದಾನೆ ಅಂತ ಮೃತಳ ಅಣ್ಣ ಮತ್ತು ತಾಯಿ ಆರೋಪಿಸಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಸಾಂಬಾರ್ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಗಂಡ ಮತ್ತು ಮಕ್ಕಳು ಹೇಳುತ್ತಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಾಜಿ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮಡಿಕೇರಿಯ ಮಹಿಳಾ ಸಮಾಜದ ಗೋದಾಮಿಯಲ್ಲಿ ನಡೆದಿದೆ. ದೇವಜನ ಜಗದೀಶ್(56) ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧ.
ಇದನ್ನೂ ಓದಿ: ಬೆಂಗಳೂರು: ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಗ್ಯಾಂಗ್ ಸಿಕ್ಕಿಬಿತ್ತು, ಮಾಡಿದ್ದೇನು ಗೊತ್ತಾ?
ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿರುವ ಜಗದೀಶ್, ಆರ್ಥಿಕ ಸಮಸ್ಯೆ, ಮೈಕ್ರೋ ಫೈನಾನ್ಸ್ನಿಂದ ಕಿರಿಕಿರಿ ಎಂದು ಉಲ್ಲೇಖಿಸಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡು ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿದೆ. ವಿರೂಪಾಕ್ಷಯ್ಯ ಚಿಕ್ಕಮಠ (40) ಆತ್ಮಹತ್ಯೆ ಮಾಡಿಕೊಂಡ ರೈತ. ಕೆವಿಜಿ ಬ್ಯಾಂಕನಲ್ಲಿ 2 ಲಕ್ಷ 50 ಸಾವಿರ ರೂ, ಕೈಗಡವಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಮಕ್ಕಳ ಜಗಳ ಬಿಡಿಸಲು ಹೋದ ತಾಯಿ ದುರಂತ ಸಾವು, ಜನ್ಮ ಕೊಟ್ಟವಳಿಗೆ ಇರಿದು ಕೊಂದ ಮಗ
ಮೂರು ಎಕರೆ ಜಮೀನಲ್ಲಿ ಸರಿಯಾಗಿ ಬೆಳೆಬಾರದಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ದೊರೆತಿದೆ. ಗ್ರಾಮದ ಹೊರ ವಲಯದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.