ಹಿಂದೂ ಸಮಾಜೋತ್ಸವದ ವೇಳೆ ಆತಂಕ ಮೂಡಿಸಿದ ಡ್ರೋನ್ ಪೊಲೀಸ್ ವಶಕ್ಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪಾಲನಜೋಗಹಳ್ಳಿಯ ಖಾಲಿ ಜಮೀನಿನಲ್ಲಿ ಅಪರಿಚಿತ ಡ್ರೋನ್ ಪತ್ತೆಯಾಗಿದ್ದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಯ ವೇಳೆ ಡ್ರೋನ್ ಪತ್ತೆಯಾಗಿರುವುದು ಸದ್ಯ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಡ್ರೋನ್ ಅನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ.

ದೇವನಹಳ್ಳಿ, ಜನವರಿ 29: ಅಪರಿಚಿತ ಡ್ರೋನ್ವೊಂದು (drone) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ನಗರದ ಪಾಲನಜೋಗಹಳ್ಳಿಯಲ್ಲಿ ಪತ್ತೆ ಆಗಿದೆ. ಖಾಲಿ ಜಮೀನಿನಲ್ಲಿ ಬಿದ್ದಿದ್ದ ಡ್ರೋನ್ ಕಂಡು ಸ್ಥಳೀಯರಲ್ಲಿ ಆತಂಕ ಮೂಡಿದೆ. ಸದ್ಯ ಡ್ರೋನ್ ಪರಿಶೀಲನೆ ಮಾಡಿದ ಪೊಲೀಸ್ ಅಧಿಕಾರಿಗಳು, ಬಳಿಕ ವಶಕ್ಕೆ ಪಡೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸಿದ್ದಾರೆ.
ವಿಮಾನ ಮಾದರಿಯ ಡ್ರೋನ್ ಪತ್ತೆ
ದೊಡ್ಡಬಳ್ಳಾಪುರ ನಗರದ ಪಾಲನಜೋಗಹಳ್ಳಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಿಂದೂ ಸಮಾಜೋತ್ಸವದ ಶೋಭಾಯಾತ್ರೆ ನಡೆಯುತ್ತಿದ್ದ ವೇಳೆ ವಿಮಾನ ಮಾದರಿಯ ಡ್ರೋನ್ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಮನೆ ಸಮೀಪ ಡ್ರೋನ್ ಬಿದ್ದಿರುವುದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ದುರಂತಗಳು ಸಂಭವಿಸಿದ್ರೂ ಎಚ್ಚೆತ್ತುಕೊಳ್ಳದ ಬಸ್ ಮಾಲೀಕರು: ಸ್ಲೀಪರ್ ಕೋಚ್ನಲ್ಲಿ ಗೂಡ್ಸ್ ಸಾಗಾಟ, ಬಸ್ ಸೀಜ್
ಬ್ಯಾಟರಿಗಳು ಸೇರಿದಂತೆ ಎಲೆಕ್ಟ್ರಿಕ್ ವೈರ್‌ಗಳು ಜೋಡಿಸಲ್ಪಟ್ಟಿದ್ದ ಡ್ರೋನ್ ಪತ್ತೆಯಾಗಿದ್ದು, ಡ್ರೋನ್‌ನಲ್ಲಿ ಯಾವುದೇ ಸ್ಪೋಟಕ ವಸ್ತುಗಳಿವೆಯೇ ಎಂಬ ಬಗ್ಗೆ ಪೊಲೀಸ್ ಎಕ್ಸ್‌ಪರ್ಟ್ಸ್ ತಂಡ ಸ್ಥಳಕ್ಕೆ ಆಗಮಿಸಿ ಸುಮಾರು ಎರಡು-ಮೂರು ಗಂಟೆಗಳ ಕಾಲ ಸೂಕ್ಷ್ಮ ಪರಿಶೀಲನೆ ಮಾಡಿದ್ದಾರೆ. ಬಳಿಕ ಡ್ರೋನ್ ವಶಕ್ಕೆ ಪಡೆದುಕೊಂಡಿದ್ದಾರೆ. ಡ್ರೋನ್ ಎಲ್ಲಿಂದ ಬಂತ್ತು, ಯಾರಿಗೆ ಸೇರಿದೆ ಮತ್ತು ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಸದ್ಯ ನಗರದಲ್ಲಿ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆ ಹಿನ್ನೆಲೆ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಕಾರಿನ ಸನ್‌ರೂಫ್ ಓಪನ್ ಮಾಡಿ ಮಕ್ಕಳನ್ನು ಕೂರಿಸಿ ಚಾಲನೆ: 1000 ರೂ. ದಂಡ
ಕಾರಿನ ಸನ್‌ರೂಫ್ ಓಪನ್ ಮಾಡಿ ಮಕ್ಕಳನ್ನು ಕೂರಿಸಿ ಚಾಲನೆ ಮಾಡಿದ ಕಾರು ಚಾಲಕನಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಂಚಾರಿ ಪೊಲೀಸರು 1000 ರೂ. ದಂಡ ವಿಧಿಸಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ಕಾರವಾರ ನೌಕಾನೆಲೆಗೆ ಹಾರಿಬಂದ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ
ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸನ್‌ರೂಫ್ ಓಪನ್ ಮಾಡಿ ಕಾರು ಚಾಲನೆ ಮಾಡಲಾಗಿತ್ತು. ವಿಡಿಯೋ ವೈರಲ್ ಬೆನ್ನಲ್ಲೇ ಕಾರು ವಶಕ್ಕೆ ಪಡೆದು ದಂಡ ಹಾಕಿ ಕಳಿಸಿದ್ದಾರೆ. ಮತ್ತೊಮ್ಮೆ ಅಪಾಯಕಾರಿಯಾಗಿ ಕಾರು ಚಲಾಯಿಸದಂತೆ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.