ನೆಲಮಂಗಲ, ಫೆಬ್ರವರಿ 06: ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ (fire accident) ಸಂಭವಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೀಗೆಹಳ್ಳಿ ಗೇಟ್ ಬಳಿ ನಡೆದಿದೆ. ಉತ್ತರ ಪ್ರದೇಶ ಮೂಲದ ಉದಯ್ ಭಾನು(40) ಮತ್ತು ಬಿಹಾರ ಮೂಲದ ರೋಷನ್(23) ಮೃತ ಕಾರ್ಮಿಕರು. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗುತ್ತಿಗೆದಾರ ಮತ್ತು ಇಂಜಿನಿಯರ್ ಸತೀಶ್ಗೆ ಸೇರಿದ ಶಿವಾನಿ ಗ್ರೀನ್ ಲೇಔಟ್ನಲ್ಲಿರುವ 3 ಅಂತಸ್ತಿನ ಕಟ್ಟಡದಲ್ಲಿ ಘಟನೆ ನಡೆದಿದೆ. ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ವುಡ್ ವರ್ಕ್ಸ್ ಕೆಲಸ ಮಾಡಲಾಗುತ್ತಿತ್ತು. ಮರ ಫಾಲೀಷ್ ಮಾಡಲು ಥಿನ್ನರ್ ಬಳಕೆ ಮಾಡಲಾಗಿದೆ. ಕೆಮಿಕಲ್ ಕೂಡ ಸಮೀದಲ್ಲೇ ಶೇಕರಣೆ ಮಾಡಲಾಗಿತ್ತು. ಈ ವೇಳೆ ನಿರ್ಮಾಣ ಹಂತದ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಅವಘಡ ಸಂಭವಿಸಿದೆ. ನೀರಿನ ಟ್ಯಾಂಕರ್ ಮೇಲೆ ಕುಳಿತುಕೊಂಡುದ್ದ ಕಾರ್ಮಿಕನೊಬ್ಬನ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: ಥಿನ್ನರ್ ಸೇವಿಸಿ ಬಾಲಕ ಸಾವು: ಜಾತ್ರೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.
ಮೈಸೂರು: ಹುಣಸೂರು ತಾಲೂಕಿನ ಹನಗೋಡು ಗ್ರಾಮದಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಭತ್ತ, ರಾಗಿ ಹುಲ್ಲಿನ ಬಣವೆ ಸುಟ್ಟು ಕರಕಲಾಗಿರುವಂತಹ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲೆಗೆಗೆ ಶುಂಠಿ ಹೊಲದ ಶೆಡ್ ಮತ್ತು ತೆಂಗಿನ ಮರಕ್ಕೆ ಹಾನಿಯಾಗಿದೆ.
ಇದನ್ನೂ ಓದಿ: ಮಂಕೀ ಕ್ಯಾಪ್ ಧರಿಸಿ ಕಳ್ಳತನ ಮಾಡಲು ಕಾರಲ್ಲಿ ಬರುತ್ತಿದ್ದ ತಮಿಳುನಾಡು ಮೂಲದ ಕಳ್ಳರ ಬಂಧನ
ಹನಗೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಲಕ್ಷ್ಮೀ, ರೈತ ಪೊನ್ನುಸ್ವಾಮಿ, ಮಹದೇವ್, ಮಂಜು, ರಮೇಶ್, ಮರಿಯಯ್ಯ, ವೆಂಕಟೇಶ್, ಚಿಕ್ಕ ಮುದ್ದುಶೆಟ್ಟಿಗೆ ಸೇರಿದ ಬಣವೆಗಳು, ಹೆಚ್.ಎಲ್.ರಾಜಣ್ಣಗೆ ಸೇರಿದ ಶುಂಠಿ ಹೊಲದ ಶೆಡ್ ನಾಶವಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:46 pm, Thu, 6 February 25