ಗ್ರಾಮದಿಂದ ಬರುತ್ತಿದ್ದಾಗ ಅಪಘಾತ ಮಾಡಿ ಯುವ ಜಿಮ್ ಕೋಚ್​​ ಬರ್ಬರ ಹತ್ಯೆ

ಶಿವಕುಮಾರ್ ಇಂದು ಮುಂಜಾನೆ ಬೈಕ್​​ನಲ್ಲಿ ತಮ್ಮ ಗ್ರಾಮದಿಂದ ಬರುವಾಗ ಹಿಂಬದಿಯಿಂದ ಬಂದು ಅಪಘಾತ ಮಾಡಲಾಗಿದೆ. ಈ ವೇಳೆ ಬೈಕ್​​ನಿಂದ ಕೆಳಗೆ ಬಿದ್ದ‌ ಜಿಮ್ ಕೋಚ್​ ಶಿವುಗೆ ಚಾಕುವಿನಿಂದು ಇರಿದು ಕೊಲೆ ಮಾಡಲಾಗಿದೆ.

ಗ್ರಾಮದಿಂದ ಬರುತ್ತಿದ್ದಾಗ ಅಪಘಾತ ಮಾಡಿ ಯುವ ಜಿಮ್ ಕೋಚ್​​ ಬರ್ಬರ ಹತ್ಯೆ
ಗ್ರಾಮದಿಂದ ಬರುತ್ತಿದ್ದಾಗ ಅಪಘಾತ ಮಾಡಿ ಯುವ ಜಿಮ್ ಕೋಚ್​​ ಬರ್ಬರ ಹತ್ಯೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 27, 2021 | 12:27 PM

ದೇವನಹಳ್ಳಿ: ವಿಜಯಪುರ ಬಳಿಯ ಬೈರಾಪುರ ರಸ್ತೆಯಲ್ಲಿ ಅಪಘಾತವೆಸಗಿ ಜಿಮ್ ಕೋಚ್ ಒಬ್ಬರ​​ ಬರ್ಬರ ಹತ್ಯೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ವಿಜಯಪುರ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಬೈರಾಪುರದ ಜಿಮ್ ಕೋಚ್ ಶಿವಕುಮಾರ್(28) ಹತ್ಯೆಗೀಡಾದ ಯುವಕ.

ಶಿವಕುಮಾರ್ ಇಂದು ಮುಂಜಾನೆ ಬೈಕ್​​ನಲ್ಲಿ ತಮ್ಮ ಗ್ರಾಮದಿಂದ ಬರುವಾಗ ಹಿಂಬದಿಯಿಂದ ಬಂದು ಅಪಘಾತ ಮಾಡಲಾಗಿದೆ. ಈ ವೇಳೆ ಬೈಕ್​​ನಿಂದ ಕೆಳಗೆ ಬಿದ್ದ‌ ಜಿಮ್ ಕೋಚ್​ ಶಿವುಗೆ ಚಾಕುವಿನಿಂದು ಇರಿದು ಕೊಲೆ ಮಾಡಲಾಗಿದೆ. ಕೊಲೆಗೆ‌ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಜಯಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Also Read:

Sidlaghatta: ಗಂಡನ ಮೇಲೆ ಶೂಟೌಟ್​, ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿ ಸೇರಿ 6 ಆರೋಪಿಗಳು ಅಂದರ್

ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; ಎಫ್​ಐಆರ್ ದಾಖಲಿಸಿಕೊಂಡ ಪೊಲೀಸರು

(gym trainer murdered in bike accident near vijayapura devanahalli taluk)