ವರ್ಷದ ಹಿಂದೆ ಮದುವೆ ಮನೆಯಲ್ಲಿ ಬಳೆ ಶಾಸ್ತ್ರಕ್ಕೆ ತೊಡಿಸಿದ್ದ ಬಳೆ: ಹಣ ಕೇಳಿದಕ್ಕೆ ಮಹಿಳೆ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ವರ್ಷದ ಹಿಂದೆ ಮದುವೆ ಮನೆಯಲ್ಲಿ ಬಳೆ ಶಾಸ್ತ್ರಕ್ಕೆ ತೊಡಿಸಿದ್ದ ಬಳೆ: ಹಣ ಕೇಳಿದಕ್ಕೆ ಮಹಿಳೆ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು
ಸಾಂದರ್ಭಿಕ ಚಿತ್ರ

ಮದುವೆ ಮನೆಯಲ್ಲಿ ಬಳೆ ಶಾಸ್ತ್ರದ ವೇಳೆ ತೊಡಿಸಿದ ಬಳೆ ಹಣ ಕೇಳಿದಕ್ಕೆ ಸಂತೋಷ್ ಎಂಬುವವರು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಪದ್ಮಮ್ಮ(50) ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

TV9kannada Web Team

| Edited By: Ayesha Banu

Dec 29, 2021 | 12:28 PM

ಬೆಂಗಳೂರು: ಮದುವೆ ಮನೆಯಲ್ಲಿ ತೊಡಿಸಿದ ಬಳೆ ಬಿಲ್ಲು ಕೇಳಿದ್ದಕ್ಕೆ ಮಹಿಳೆಗೆ ಹಲ್ಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಣಚಿನಕುಪ್ಪೆ ಗ್ರಾಮದಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ತೋಣಚಿನಕುಪ್ಪೆ ಗ್ರಾಮದ ಸಂತೋಷ್ ಹಲ್ಲೆ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ.

ಮದುವೆ ಮನೆಯಲ್ಲಿ ಬಳೆ ಶಾಸ್ತ್ರದ ವೇಳೆ ತೊಡಿಸಿದ ಬಳೆ ಹಣ ಕೇಳಿದಕ್ಕೆ ಸಂತೋಷ್ ಎಂಬುವವರು ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಪದ್ಮಮ್ಮ(50) ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದುವರೆ ವರ್ಷದ ಹಿಂದೆ ಪದ್ಮಮ್ಮ ಮನೆಯ ಪಕ್ಕದ ಮನೆಯಲ್ಲಿರುವ ಸಂತೋಷ್ ಮದುವೆ ಸಂದರ್ಭದಲ್ಲಿ, ಪದ್ಮಮ್ಮ ಮದುವೆ ಹೆಣ್ಣಿಗೆ ಹಾಗೂ ಮದುವೆಗೆ ಬಂದವರಿಗೆ ಬಳೆ ಶಾಸ್ತ್ರದ ವೇಳೆ ಬಳೆ ತೊಡಿಸಿದ್ದರು. ಒಟ್ಟು 3ಸಾವಿರದ ಬಿಲ್ ಆಗಿತ್ತು. ಮದುವೆ ದಿನವೇ ಒಂದು ಸಾವಿರ ಹಣ ಕೊಟ್ಟು ಉಳಿದ ಹಣ ಕೊಡುವುದಾಗಿ ಹೇಳಿ ಸುಮ್ಮನಾಗಿದ್ರು. ಹೀಗಾಗಿ ಉಳಿದ 2 ಸಾವಿರ ಹಣಕ್ಕಾಗಿ ಪದ್ಮಮ್ಮ ಆಗಾಗಾ ಸಂತೋಷ್ ಬಳಿ ಕೇಳುತ್ತಿದ್ದರು. ಆದ್ರೆ ಕೊಡುವುದಾಗಿ ಕೇಳಿ ಸಂತೋಷ್ ಸುಮ್ಮನಾಗಿದ್ದ.

ಅದರಂತೆ ಎರಡು ದಿನ ಹಿಂದೆ ರಾತ್ರಿ 9 ಗಂಟೆ ಸುಮಾರಿಗೆ ಪದ್ಮಮ್ಮ ಮತ್ತೆ ಸಂತೋಷ್ ಬಳಿ ಬಾಕಿ ಹಣ ಕೊಡುವುದಾಗಿ ಕೇಳಿದ್ದಾರೆ. ಖರ್ಚುಗೆ ಹಣವಿಲ್ಲ ಸ್ವಲ್ಪ ಹಣವಾದ್ರು ಕೊಡಿ ಅಂತ ಕೇಳಿದ್ದಕ್ಕೆ ಸಂತೋಷ್, ಜನರೆದುರು ಮರ್ಯಾದೆ ಹೋಯಿತೆಂದು ರೊಟ್ಟಿ ಹೆಂಚಿನಿಂದ ಹಲ್ಲೆ ಮಾಡಿದ್ದಾರೆ ಎಂದು ಪದ್ಮಮ್ಮ ದೂರು ದಾಖಲಿಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Puneeth Rajkumar: ಪುನೀತ್ ನಿವಾಸಕ್ಕೆ ಪ್ರಭಾಸ್ ಭೇಟಿ; ಕುಟುಂಬದವರಿಗೆ ಸಾಂತ್ವನ ಹೇಳಿದ ನಟ

Follow us on

Related Stories

Most Read Stories

Click on your DTH Provider to Add TV9 Kannada