ಬೆಂಗಳೂರು ಗ್ರಾಮಾಂತರ: ಕಿಡಿಗೇಡಿಗಳು ಅರಣ್ಯ ಪ್ರದೇಶಕ್ಕೆ ಬೆಂಕಿ (fire) ಹಚ್ಚಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿರುವಂತಹ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಳೆದ ಅರ್ಧ ಗಂಟೆಗೂ ಹೆಚ್ಚುಕಾಲದಿಂದ ಬೆಂಕಿ ಉರಿಯುತ್ತಿದ್ದು, ಬೆಂಕಿಯ ಕೆನ್ನಾಲಿಗೆಗೆ ಮರ ಗಿಡ ಸೇರಿ ಅರಣ್ಯ ಸಂಪತ್ತು ನಾಶವಾಗಿದೆ. ಹೆದ್ದಾರಿಯಲ್ಲಿ ಬಂದ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಿಯರಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಸಿಬ್ಬಂದಿ ಕಾರ್ಯಾಚರಣೆಯಿಂದ ಅರಣ್ಯ ಪ್ರದೇಶ ನಾಶ ತಪ್ಪಿದೆ. ಸಕಾಲದಲ್ಲಿ ಬೆಂಕಿ ನಂದಿಸಿದ ಕಾರಣ ಅರಣ್ಯಕ್ಕೆ ಹಾನಿಯಾಗಿಲ್ಲ ಅಂತ ಅರಣ್ಯಾಧಿಕಾರಿ ಪುಪ್ಪಲತಾ ಟಿವಿ9 ಗೆ ಹೇಳಿಕೆ ನೀಡಿದ್ದಾರೆ.
ವಿಜಯಪುರ: ಹೊಟೇಲ್‌ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿರುವಂತಹ ಘಟನೆ ನಗರದ ಗೋದಾವರಿ ಹೊಟೇಲ್‌ನಲ್ಲಿ ನಡೆದಿದೆ. ಬೆಳಗಿನ ಜಾವ 3ಗಂಟೆಗೆ ಬೆಂಕಿ ಹೊತ್ತಿಕೊಂಡಿದ್ದು, ಹೊಟೇಲ್‌ನಲ್ಲಿ ಮಲಗಿದ್ದ ಇಬ್ಬರಿಗೆ ಗಾಯಗಾಳಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ದಾಖಲಾಗಿದೆ.
ಇದನ್ನೂ ಓದಿ: ವಿಜಯಪುರ: ಗುಡಿಸಲಿಗೆ ಆಕಸ್ಮಿಕ ಬೆಂಕಿ, ಮಲಗಿದ್ದಲ್ಲೇ ಸುಟ್ಟು ಕರಕಲಾದ ವೃದ್ಧ ದಂಪತಿ
ರಾಯಚೂರು: ಶಾರ್ಟ್ ಸರ್ಕ್ಯೂಟ್ನಿಂದ 9 ಗುಡಿಸಲು ಬೆಂಕಿಗಾಹುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಟ್ಟಮರಡಿ ಜೆಸ್ಕಾಂನ ಜೆಸ್ಕಾಂನ ಓರ್ವ ಜೆಇ, ಇಬ್ಬರು ಲೈನ್ಮ್ಯಾನ್ ವಿರುದ್ಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಜಾಗಟಕಲ್ ಗ್ರಾಮದಲ್ಲಿ ಫೆಬ್ರವರಿ 25ರಂದು 9 ಗುಡಿಸಲು, ಹತ್ತಿ ರಾಶಿಗೆ ಬೆಂಕಿ ತಗುಲಿದ್ದು, ಇದೇ ವೇಳೆ ಗುಡಿಸಲಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ದುರಂತ ಸಂಭವಿಸಿತ್ತು.
ಘಟನೆಯಲ್ಲಿ ಸುಮಾರು 500 ಕ್ವಿಂಟಾಲ್ ಹತ್ತಿ, 9 ಗುಡಿಸಲು, 2 ಬೈಕ್ಗಳು, ದವಸ ಧಾನ್ಯ, ಬಟ್ಟೆ, ಕ್ರಿಮಿನಾಶಕ ಸೇರಿದಂತೆ ಇತರೆ ವಸ್ತುಗಳು ನಾಶವಾಗಿದ್ದವು. 77.49 ಲಕ್ಷ ಮೌಲ್ಯದ ಆಸ್ತಿ ಹಾನಿ ಆಗಿದೆ ಎಂದು ತಾಲೂಕು ಆಡಳಿತ ಅಂದಾಜಿಸಿದೆ. ಸದ್ಯ ದೇವದುರ್ಗ ತಾಲೂಕು ಆಡಳಿತದಿಂದ ಸಂತ್ರಸ್ತರಿಗೆ ಫುಡ್ ಕಿಟ್ ಸೇರಿದಂತೆ ಉಪ ಜೀವನಕ್ಕೆ ಬೇಕಾದ ವಸ್ತುಗಳ ವಿತರಣೆ ಮಾಡಲಾಗಿದೆ.
ಇದನ್ನೂ ಓದಿ: ಪ್ರಜ್ಞೆ ತಪ್ಪಿ ಬಿದ್ದು ಪ್ರತಿಭಟನಾನಿರತ ವಿದ್ಯಾರ್ಥಿ ಸಾವು: ಸುಳ್ಳು ಆರೋಪವೆಂದ ಅಜೀಂ ಪ್ರೇಮ್ ಜಿ ವಿವಿ
ಹಾವೇರಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ್ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಬೆಲ್ಟ್ಗೆ ಸಿಲುಕಿ 19 ವರ್ಷದ ಯುವ ಕಾರ್ಮಿಕ ದಾರುಣ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕೋಣನಕೇರಿಯಲ್ಲಿರುವ ವಿಐಪಿಎನ್ ಡಿಸ್ಟಲರಿಸ್ ಕಾರ್ಖಾನೆಯಲ್ಲಿ ನಡೆದಿದೆ. ನವೀನ ಬಸಪ್ಪ ಚಲವಾದಿ(19) ಮೃತ ಕಾರ್ಮಿಕ. ಕೆಲಸ ಮಾಡುತ್ತಿದ್ದ ವೇಳೆ ನಿನ್ನೆ ಶನಿವಾರ ಸಂಜೆ ಕಬ್ಬಿನ ಪುಡಿ ತುಂಬುತ್ತಿದ್ದಾಗ ದುರ್ಘಟನೆ ನಡೆದಿದೆ. ಯಾವುದೇ ಸುರಕ್ಷಾ ಕ್ರಮ ಅಳವಡಿಸದ ಹಿನ್ನೆಲೆ ಘಟನೆ ಸಂಭವಿಸಿದೆ. ಕಾರ್ಖಾನೆ ಮಾಲೀಕ ಸೇರಿ ಆರು ಜನರ ವಿರುದ್ಧ ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:05 pm, Mon, 27 February 23