ಕಿಟಕಿಯಿಂದ ಕೈ ಹಾಕಿ ಮನೆ ಬಾಗಿಲು ತೆಗೆದ ಖದೀಮರು; ನೆಲಮಂಗಲದಲ್ಲಿ 3 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಚಿನ್ನಾಭರಣ ಕಳ್ಳತನ

ಮನೆಯಲ್ಲಿ ಬಸವರಾಜು ಮತ್ತು ಅವರ ಹೆಂಡತಿ ವಾಸವಿದ್ದಾರೆ. ಇವರಿಗೆ ಸುಮಾರು 30 ವರ್ಷಗಳ ಹಿಂದೆ ಮದುವೆಯಾಗಿದ್ದು, ಮಕ್ಕಳಿಲ್ಲ. 2017ರಲ್ಲಿ ಬಸವರಾಜುಗೆ ಸ್ಟ್ರೋಕ್ ಆಗಿ ಬೆಡ್ ರೆಸ್ಟ್​ನಲ್ಲಿ ಇದ್ದಾರೆ.

ಕಿಟಕಿಯಿಂದ ಕೈ ಹಾಕಿ ಮನೆ ಬಾಗಿಲು ತೆಗೆದ ಖದೀಮರು; ನೆಲಮಂಗಲದಲ್ಲಿ 3 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಚಿನ್ನಾಭರಣ ಕಳ್ಳತನ
ಮಾದನಾಯಕನಹಳ್ಳಿ ಪೋಲಿಸ್ ಠಾಣೆ
Follow us
TV9 Web
| Updated By: sandhya thejappa

Updated on: Aug 07, 2021 | 11:56 AM

ನೆಲಮಂಗಲ: ಕಿಟಕಿಯಿಂದ ಕೈ ಹಾಕಿದ ಖದೀಮರು ಬಾಗಿಲಿನ ಲಾಕ್ ತೆಗೆದು ಕಳ್ಳತನ (Theft) ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ. ಗೋವಿಂದಪುರ ಬಸವರಾಜು ಎಂಬುವವರ ಮನೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಚಿನ್ನಾಭರಣಗಳನ್ನು ಕದ್ದು, ಆ ಬಳಿಕ ಯಥಾವತ್ತಾಗಿ ಲಾಕ್ ಹಾಕಿಕೊಂಡು ದುಷ್ಕರ್ಮಿಗಳು ತೆರಳಿದ್ದಾರೆ. ಮಾದನಾಯಕನಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ನೆಲಮಂಗಲ ಭಾಗದಲ್ಲಿ ನಡೆಯುವ ಕಳ್ಳತನಕ್ಕೆ ಬೇಸತ್ತ ಜನ ಪೋಲಿಸರ ವಿರುದ್ಧ ಕಿಡಿಕಾರಿದ್ದಾರೆ.

ಮನೆಯಲ್ಲಿ ಬಸವರಾಜು ಮತ್ತು ಅವರ ಹೆಂಡತಿ ವಾಸವಿದ್ದಾರೆ. ಇವರಿಗೆ ಸುಮಾರು 30 ವರ್ಷಗಳ ಹಿಂದೆ ಮದುವೆಯಾಗಿದ್ದು, ಮಕ್ಕಳಿಲ್ಲ. 2017ರಲ್ಲಿ ಬಸವರಾಜುಗೆ ಸ್ಟ್ರೋಕ್ ಆಗಿ ಬೆಡ್ ರೆಸ್ಟ್​ನಲ್ಲಿ ಇದ್ದಾರೆ. ಮನೆಯ ಬಾಗಿಲು ಮತ್ತು ಗೇಟ್ ಬೀಗವನ್ನು ಹಾಕಿಕೊಂಡು ಬಸವರಾಜುಗೆ ಇಂಜೆಕ್ಷನ್ ಕೊಡಿಸಲು ಅವರ ಹೆಂಡತಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಿಂದ ಬಂದ ನಂತರ ಮನೆಯ ರೂಂಗಳಲ್ಲಿದ್ದ ಬೀರುಗಳ ಬಾಗಿಲು ತೆಗೆದಿತ್ತು.

ಕಳ್ಳತನ ಮಾಡಿದ ಖದೀಮರು ಮನೆ ಬಾಗಿಲು ಮತ್ತು ಗೇಟ್​ನ ತೆಗೆದು ನಂತರ ಹಾಗೇ ಹಾಕಿ ಹೋಗಿದ್ದರು. ಬೀರುವಿನಲ್ಲಿದ್ದ ಒಂದು ಜೊತೆ ಚಿನ್ನದ ಬಳೆ, ನೆಕ್ಲೆಸ್, ಓಲೆ, ಉಂಗುರ ಸೇರಿ ಒಟ್ಟು 3 ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಚಿನ್ನಾಭರಣವನ್ನು ಕದ್ದಿದ್ದಾರೆ ಎಂದು ಬಸವರಾಜು ಪತ್ನಿ ದೂರು ನೀಡಿದ್ದಾರೆ.

ದೇವಾಲಯಲ್ಲಿ ಚಿನ್ನಾಭರಣ ಕಳವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮದಗೊಂಡನಹಳ್ಳಿಯ ಚೌಡೇಶ್ವರಿ ಮತ್ತು ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. 16 ಗ್ರಾಂ ತೂಕದ ಎರಡು ತಾಳಿ, ಬೆಳ್ಳಿಯ ಮುಖವಾಡ, ಸೇರಿದಂತೆ 50 ಸಾವಿರ ಬೆಲೆಬಾಳುವ ವಸ್ತುಗಳು ಕಾಣೆಯಾಗಿದ್ದು, ದೇವಾಲಯದ ಅರ್ಚಕ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚೌಡೇಶ್ವರಿ ದೇವಿ

ಇದನ್ನೂ ಓದಿ

Karnataka Cabinet: 29 ಸಚಿವರಿಗೆ ಖಾತೆ ಹಂಚಿಕೆ; ಹಣಕಾಸು ಮತ್ತು ಬೆಂಗಳೂರು ಅಭಿವೃದ್ಧಿ ಖಾತೆ ತನ್ನಲ್ಲಿಯೇ ಉಳಿಸಿಕೊಂಡ ಸಿಎಂ ಬೊಮ್ಮಾಯಿ

ರಾಜಧಾನಿಯಲ್ಲಿ ಸದ್ದಿಲ್ಲದೇ ಎಂಟ್ರಿ ಕೊಡ್ತಿದೆ ಡೆಡ್ಲಿ ವೈರಸ್; ಈ ವಾರ್ಡ್​​​ಗಳ ಕಡೆ ಹೋಗುವ ಮುನ್ನ ಇರಲಿ ಎಚ್ಚರ

(More than three lakhs worth of jewelry is theft at nelamangala)