ಮುಸ್ಲಿಮರ ಮನವೊಲಿಕೆಗೆ ಮುಂದಾದ ಎಂಟಿಬಿ ನಾಗರಾಜ್​; ಉರ್ದು‌ನಲ್ಲಿ ಭಾಷಣ, ಕವ್ವಾಲಿ ಗಾಯಕನ ಮೇಲೆ ಹಣದ ಮಳೆ

ಮುಸ್ಲಿಮರ ಮನವೊಲಿಕೆಗೆ ಸಚಿವ ಎಂಟಿಬಿ ಮತ್ತು ಪುತ್ರ ನಿತಿನ್ ಪುರುಷೋತ್ತಮ್​​ ಕವ್ವಾಲಿ ಕಾರ್ಯಕ್ರಮ ಆಯೋಜಿಸಿದ್ರು. ಹೊಸಕೋಟೆಯ ಚೆನ್ನಭೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಟೋಪಿ ಹಾಕಿಕೊಂಡು ಸಚಿವ ಎಂಟಿಬಿ ನಾಗರಾಜ್ ಭಾಗಿಯಾಗಿದ್ರು.

ಮುಸ್ಲಿಮರ ಮನವೊಲಿಕೆಗೆ ಮುಂದಾದ ಎಂಟಿಬಿ ನಾಗರಾಜ್​; ಉರ್ದು‌ನಲ್ಲಿ ಭಾಷಣ, ಕವ್ವಾಲಿ ಗಾಯಕನ ಮೇಲೆ ಹಣದ ಮಳೆ
ವೇದಿಕೆಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್
Follow us
| Updated By: ಆಯೇಷಾ ಬಾನು

Updated on:Jan 17, 2023 | 2:53 PM

ಹೊಸಕೋಟೆ: ಹೊಸಕೋಟೆ ಅಂದ್ರೆ ರಾಜಕೀಯ. ರಾಜಕೀಯ ಅಂದ್ರೆ ಹೊಸಕೋಟೆ ‌ಅನ್ನುವ ರೀತಿ ಕಳೆದ ಹಲವು ದಶಕಗಳಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರ ಗುರುತಿಸಿಕೊಂಡಿದೆ. ಅದ್ರಲ್ಲೂ ಹೊಸಕೋಟೆಯಲ್ಲಿ ಎಂಟಿಬಿ(MTB Nagaraj) ಮತ್ತು ಬಚ್ಚೇಗೌಡ(Sharath Bachegowda) ಕುಟುಂಬದ ರಾಜಕೀಯ ಕೆಸರೆರಚಾಟ ಜೋರಾಗಿದ್ದು ಈ‌ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲೆಬೇಕು(Karnataka Assembly Elections 2023) ಅಂತ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ಪಣತೊಟ್ಟಿದ್ದಾರೆ. ಹೀಗಾಗಿ‌ ಚುನಾವಣೆ ಘೋಷಣೆಗೂ ಮುನ್ನವೆ ಇದೀಗ ಹೊಸಕೋಟೆಯಲ್ಲಿ ರಾಜಕೀಯ ಬೇಟೆ ಶುರುಮಾಡಿದ್ದು ಸಚಿವ ಎಂಟಿಬಿ ನಾಗರಾಜ್ ಹಾಗೂ ಪುತ್ರ ನಿತಿನ್ ಪುರುಷೋತ್ತಮ್ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತ ಹಲವು ಕಾರ್ಯಕ್ರಮಗಳನ್ನ ಆಯೋಜನೆ ಮಾಡ್ತಿದ್ದಾರೆ‌. ಅದೇ ರೀತಿ ಹೊಸಕೋಟೆಯಲ್ಲಿ ನಿನ್ನೆ ಸಹ ಮುಸ್ಲಿಂ ಸಮುದಾಯದ ಮುಖಂಡರಿಗಾಗಿ ಕವ್ವಾಲಿ ಕಾರ್ಯಕ್ರಮವನ್ನ ಸಚಿವ ಎಂಟಿಬಿ ನಾಗರಾಜ್ ಕಡೆಯವರು ಆಯೋಜ‌ನೆ ಮಾಡಿದ್ರು. ಹೀಗಾಗಿ‌ ಕಳೆದ ರಾತ್ರಿ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದ ಕವ್ವಾಲಿ ಕಾರ್ಯಕ್ರಮಕ್ಕೆ ಸಚಿವ ಎಂಟಿಬಿ ನಾಗರಾಜ್ ಮತ್ತು ಪುತ್ರ ನಿತಿನ್ ಪುರುಷೋತ್ತಮ್ ಭಾಗಿಯಾಗಿದ್ರು. ಆದ್ರೆ ಕಾರ್ಯಕ್ರಮದ ಉದ್ದಕ್ಕೂ ಸಚಿವ ಎಂಟಿಬಿ ನಾಗರಾಜ್ ಮತ್ತು ಪುತ್ರ ನಿತಿನ್ ಪುರುಷೋತ್ತಮ್ ಟೋಪಿ ಧರಿಸಿಯೆ ಭಾಗಿಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಹಿಂದುತ್ವದ ಅಜೆಂಡ ಇಟ್ಟುಕೊಂಡು ಚುನಾವಣಾ ಪ್ರಚಾರ ಮಾಡ್ತಿದ್ರೆ ಇತ್ತ ಬಿಜೆಪಿ ಸಚಿವರೆ ಕವ್ವಾಲಿ ಕಾರ್ಯಕ್ರಮ ಆಯೋಜನೆ ಮಾಡುವುದರ ಜೊತೆಗೆ ಟೋಪಿ ಧರಿಸಿ ಭಾಗವಹಿಸಿರುವುದು ಎಷ್ಟರ ಮಟ್ಟಿಗೆ ಸರಿ ಅಂತ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ‌. ದಿನ ಬೆಳಗಾದ್ರೆ ಬಿಜೆಪಿ ನಾಯಕರು ಮುಸ್ಲಿಂ ಸಮುದಾಯ ಮತ್ತು ಕಾಂಗ್ರೆಸ್ ಪಕ್ಷವನ್ನೆ ಟೀಕೆ ಮಾಡಿಕೊಂಡು ಮಾತನಾಡ್ತರೆ ಸಿದ್ದರಾಮಯ್ಯಗೆ ಸಿದ್ದರಾಮುಲ್ಲ ಖಾನ್ ಎಂದು ಹೆಸರಿಡುತ್ತಾರೆ ಆದ್ರೆ ಇದೀಗ ಸ್ವತಃಹ ಬಿಜೆಪಿ ಸರ್ಕಾರದ ಸಚಿವ ಮತ್ತು ಅವರ ಪುತ್ರ ಮುಸ್ಲಿಂ ಟೋಪಿ ಧರಿಸಿ ಭಾಗವಹಿಸಿದ್ದು ಎಷ್ಟರ ಮಟ್ಟಿಗೆ ಸರಿ ಇದಕ್ಕೆ ಬಿಜೆಪಿ ನಾಯಕರು ಏನಂತಾರೆ ಅಂತ ಚರ್ಚೆ ಮಾಡ್ತಿದ್ದಾರೆ. ಅಲ್ಲದೆ ಕಾರ್ಯಕ್ರಮದಲ್ಲಿ ಎರಡು ಮೂರು ಗಂಟೆಗಳ ಕಾಲ ಇದ್ದ ಸಚಿವರು ಮತ್ತು ಪುತ್ರ ಉರ್ದುನಲ್ಲೇ ಭಾಷಣ ಸಹ ಮಾಡಿ ಮುಸ್ಲಿಂ ಸಮುದಾಯದ ಓಲೈಕೆ ಮಾಡುವ ಕೆಲಸ ಮಾಡಿದ್ದಾರೆ ಎನ್ನುವ ಟೀಕೆಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಬಂದು ಹೋದರೂ ಡಿಕೆ ಶಿವಕುಮಾರ ಮತ್ತು ಸಿದ್ದರಾಮಯ್ಯ ಮಾತ್ರ ‘ನಾನೊಂದು ತೀರ ನೀನೊಂದು ತೀರ!’

ಕವ್ವಾಲಿ ಕಾರ್ಯಕ್ರಮದಲ್ಲಿ ಸಚಿವರ ಮುಂದೆಯೆ ಹಣದ ಮಳೆ

ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕವ್ವಾಲಿ ಕಾರ್ಯಕ್ರಮಕ್ಕೆ ಪ್ರಸಿದ್ದ ಕವ್ವಾಲಿ ಗಾಯಕರನ್ನ ಆಹ್ವಾನಿಸಿದ್ದ ಕಾರಣ ಸಾವಿರಾರು ಜನರು ಮಧ್ಯರಾತ್ರಿವರೆಗೂ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ರು. ಹೀಗಾಗಿ ಮಧ್ಯರಾತ್ರಿ ವರಗೂ ಗಾನ ಬಜಾನದಲ್ಲಿ ಮಿಂದೆದ್ದ ಸಚಿವ ಎಂಟಿಬಿ ನಾಗರಾಜ್, ಪುತ್ರ ನಿತಿನ್ ಪುರುಷೋತ್ತಮ್ ಮತ್ತು ಸಾವಿರಾರು ಜನ ಕಾರ್ಯಕರ್ತರು ಕವ್ವಾಲಿ ಕಾರ್ಯಕ್ರಮವನ್ನ ಎಂಜಾಯ್ ಮಾಡಿದ್ರು. ಅಲ್ಲದೆ ಪ್ರಸಿದ್ದ ಗಾಯಕರ‌‌ ಮೇಲೆ‌‌ ಮುಸ್ಲಿಂ ಸಮುದಾಯದ ಮುಖಂಡರು ದುಡ್ಡಿನ ಮಳೆ‌‌‌ ಸುರಿಸಿದ್ರು. ಸಚಿವರ ಪುತ್ರ ನಿತಿನ್ ಪುರುಷೋತ್ತಮ್ ಮತ್ತು ಗಾಯಕರಿಂದ ಹಣದಿಂದ ದೃಷ್ಟಿ ತೆಗೆದು ಹಣದ‌‌ ಮಳೆ ಸುರಿಸಿರುವುದು ಸಹ ಒಂದಷ್ಟು ಟೀಕೆ ಮತ್ತು ಚರ್ಚೆಗೆ ಕಾರಣವಾಗಿದೆ.

ಕಾರ್ಯಕ್ರಮ ಜಾಗದ ವಿಚಾರಕ್ಕೂ ಹೊಸಕೋಟೆಯಲ್ಲಿ ರಾಜಕೀಯ ಕೆಸರೆರಚಾಟ

ನಿನ್ನೆ ರಾತ್ರಿ ಹೊಸಕೋಟೆ ನಗರದ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ನಡೆದ ಕವ್ವಾಲಿ ಕಾರ್ಯಕ್ರಮ ಮೊದಲಿಗೆ ನಗರದ ಈದ್ಗಾ ಮೈದಾನದಲ್ಲಿ ನಡೆಸಲು ತೀರ್ಮಾನಿಸಿ ಹಲವು ಸಿದ್ದತಾ ಕಾರ್ಯಕ್ರಮಗಳನ್ನು ಸಹ ಮಾಡಿಕೊಂಡಿದ್ರು. ಆದ್ರೆ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದ ಬೆನ್ನಲ್ಲೆ‌ ಕೆಲವರು ಜಾಗ ಮತ್ತು ಕಾರ್ಯಕ್ರಮದ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮಕ್ಕೆ ತಡೆಯಾಜ್ಞೆ ತಂದಿದ್ರು. ಹೀಗಾಗಿ ಕೆಲಕಾಲ ಗೊಂದಲದ ವಾತಾವರಣ ‌ನಿರ್ಮಾಣವಾಗಿದ್ದು ನಂತರ ಕೊನೆ ಕ್ಷಣದಲ್ಲಿ ಚೆನ್ನಬೈರೆಗೌಡ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ರು. ಹೀಗಾಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್ ಪುತ್ರ ನಿತಿನ್ ಪುರುಷೋತ್ತಮ್ ಹಲವರು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದ್ರು ಎಷ್ಟು ಅದ್ಬುತವಾಗಿ ನಡೆದಿದೆ. ಅಡ್ಡಿಪಡಿಸಿದವರಿಗೆ ಮುಂದೆ ಗೊತ್ತಾಗುತ್ತೆ ಅಂತ ಶಾಸಕ ಶರತ್ ಬಚ್ಚೇಗೌಡ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:53 pm, Tue, 17 January 23

ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಸಿಎಂ, ಡಿಸಿಎಂ ಸಿಟಿ ರೌಂಡ್ಸ್​ ಹಾಕಿದರೂ ದುರಸ್ತಿಯಾಗದ ಬೆಂಗಳೂರು ರಸ್ತೆಗಳು
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ಬುಂಡೆಸ್ಲಿಗಾ 7ನೇ ದಿನದ ಪಂದ್ಯ; ಟಾಪ್ 5 ಗೋಲ್​ಗಳನ್ನು ಮಿಸ್ ಮಾಡಬೇಡಿ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ವಿರೋಧಪಕ್ಷಗಳ ನಾಯಕರಿಗೆ ನನ್ನನ್ನು ಕಂಡು ಹೊಟ್ಟೆಯುರಿ: ಸಿದ್ದರಾಮಯ್ಯ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ
ಪ್ರಧಾನಿ ಮೋದಿಯವರಿಗೋಸ್ಕರ ಎಲ್ಲವನ್ನು ಸಹಿಸಿಕೊಂಡಿದ್ದೇವೆ: ಕುಮಾರಸ್ವಾಮಿ