AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಲಮಂಗಲ: ಅಂತ್ಯಕ್ರಿಯೆಗೆ ಬರುವಂತೆ ಪ್ರಿಯತಮೆಗೆ ಆಹ್ವಾನಿಸಿ ಲೈವ್ ವಿಡಿಯೋ ಮಾಡುತ್ತಲೇ ಪ್ರಾಣ ಬಿಟ್ಟ ಪ್ರೇಮಿ

ರೇಬೀಸ್ ರೋಗ ಉಲ್ಬಣಗೊಂಡು ನಿಮಾನ್ಸ್ ಸೇರಿದ್ದ ಯುವಕ ಕಿರಣ್ ಆಸ್ಪತ್ರೆಯ ಬೆಡ್​ ಮೇಲೆಯೇ ಲೈವ್ ವಿಡಿಯೋ ಮಾಡಿ ತನ್ನ ಲವ್ವರ್​ಗೆ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನ ನೀಡಿದ್ದಾನೆ. ಹಾಗೂ ಅದೇ ಲೈವ್ ವಿಡಿಯೋದಲ್ಲಿ ಪ್ರಾಣಬಿಟ್ಟಿದ್ದಾನೆ.

ನೆಲಮಂಗಲ: ಅಂತ್ಯಕ್ರಿಯೆಗೆ ಬರುವಂತೆ ಪ್ರಿಯತಮೆಗೆ ಆಹ್ವಾನಿಸಿ ಲೈವ್ ವಿಡಿಯೋ ಮಾಡುತ್ತಲೇ ಪ್ರಾಣ ಬಿಟ್ಟ ಪ್ರೇಮಿ
ಕಿರಣ್
ಬಿ ಮೂರ್ತಿ, ನೆಲಮಂಗಲ
| Updated By: ಆಯೇಷಾ ಬಾನು|

Updated on:Aug 13, 2023 | 12:13 PM

Share

ನೆಲಮಂಗಲ, ಆ.13: ಪ್ರೇಮಿಯೊಬ್ಬ ವಿಡಿಯೋ ರೆಕಾರ್ಡ್ ಮಾಡಿ ತನ್ನ ಸಾವಿಗೆ ಪ್ರಿಯತಮೆಗೆ ಆಹ್ವಾನ ನೀಡಿ ಲೈವ್​ನಲ್ಲೇ(Live Video) ಪ್ರಾಣಬಿಟ್ಟಿದ್ದಾನೆ(Lover Death). ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಿರಣ್(22) ಎಂಬ ಯುವಕ ಲೈವ್ ವಿಡಿಯೋ ಮಾಡಿ ಪ್ರಾಣ ಬಿಟ್ಟಿದ್ದಾನೆ. ಆಗಸ್ಟ್​​​ 9 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುವಕ ಕಿರಣ್ ತನ್ನ ಲೈವ್ ವಿಡಿಯೋದಲ್ಲಿ ತನ್ನ ಲವ್ವರ್​ಗೆ ತನ್ನ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನ ನೀಡಿದ್ದಾನೆ. ಹಾಗೂ ಅದೇ ಲೈವ್ ವಿಡಿಯೋದಲ್ಲಿ ಪ್ರಾಣಬಿಟ್ಟಿದ್ದಾನೆ. “ಹಾಯ್” ಬಂಗಾರಿ ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ ಕಣೆ, “ನಿಮ್ಮ ಅಪ್ಪ ಹೇಳಿದ ಹಾಗೆ ಒಳ್ಳೆಯ ಹುಡುಗನನ್ನ ನೋಡಿ ಮದುವೆ ಆಗು”. ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರೇ ಇಡಬೇಕು. ಇದು ನನ್ನ ಆಕಸ್ಮಿಕ ಸಾವು. ದಯವಿಟ್ಟು ಅಂತ್ಯಕ್ರಿಯೆಗೆ ಬಂದು ಹೋಗು. ನನ್ನ ಸಾವಿಗೆ ನಿನ್ನ ತಂಗಿಯನ್ನು ಕರೆದುಕೊಂಡು ಬಾ. ಒಳ್ಳೆಯದಾಗಲಿ ನಿಮ್ಮ ಕುಟುಂಬಕ್ಕೆ. ಹೀಗೆ ಚನ್ನಾಗಿರಿ ಎಂದು ಕಿರಣ್ ಲೈವ್​​ನಲ್ಲೇ ಕೈ ಮುಗಿದು ಪ್ರಾಣ ಬಿಟ್ಟಿದ್ದಾನೆ.

ಮೃತ ಕಿರಣ್, ಆಗಸ್ಟ್ 3ರಂದು ತಾನು ಪ್ರೀತಿಸುತ್ತಿದ್ದ ಹುಡುಗಿಗೆ ರಿಂಗ್, ಕಾಲು ಚೈನ್ ಕೊಡಿಸಿದ್ದನಂತೆ. ಈ ವಿಷಯ ತಿಳಿದ ಯುವತಿಯ ತಂದೆ ಇವರಿಬ್ಬರ ಪ್ರಿತಿಯನ್ನು ನಿರಾಕರಿಸಿದ್ದರು. ಹೀಗಾಗಿ ಯುವತಿ ಮನೆಯವರೆ ಏನೋ ಮಾಡಿ ನನ್ನ ಮಗನ ಸಾವಿಗೆ ಕಾರಣರಾಗಿದ್ದಾರೆಂದು ಕಿರಣ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇನ್ನು ರೇಬೀಸ್ ರೋಗ ಉಲ್ಬಣಗೊಂಡು ಯುವಕ ನಿಮಾನ್ಸ್ ಸೇರಿದ್ದ. ನಿಮಾನ್ಸ್ ಆಸ್ಪತ್ರೆಯ ಬೆಡ್ ಮೇಲೆಯೇ ವಿಡಿಯೋ ಮಾಡುತ್ತ ಪ್ರಾಣಬಿಟ್ಟಿದ್ದಾನೆ.

ಇದನ್ನು ಓದಿ: ಸೊಂಟಕ್ಕೆ ಮಗು ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ: ಗಂಡ ಸತ್ತ ದಿನವೇ ಘೋರ ದುರಂತ

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಇನ್ನು ಬೆಂಗಳೂರಿನ ಅಮೃತಹಳ್ಳಿಯ ಟೆಲಿಕಾಂ ಲೇಔಟ್‌ನ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವಕ ಸುಭಾಷ್ ಕುಮಾರ್(30) ಶವ ಪತ್ತೆಯಾಗಿದೆ. ಪೊಲೀಸರು ಬರುವ ಮುನ್ನವೇ ಶವವನ್ನು ಕೆಳಗಿಳಿಸಿ ನೇಣುಬಿಗಿದುಕೊಂಡಿದ್ದ ಹಗ್ಗವನ್ನು ಕತ್ತರಿಸಿ ಸಹೋದರ ಜಿತೇಂದ್ರ ಎಸೆದಿದ್ದರಿಂದ ಕೊಲೆ ಶಂಕೆ ವ್ಯಕ್ತವಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:49 am, Sun, 13 August 23