ದೇವನಹಳ್ಳಿ: ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ; ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಚಿನ್ನಸಾಗಣೆಗೆ ಯತ್ನಿಸಿದ ಆರೋಪಿ ಬಂಧನ

ಅಬುಧಾಬಿಯಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕ, ಬೆಂಗಳೂರಿನಿಂದ ಚೆನ್ನೈಗೆ ಹೋಗಲು ಮುಂದಾಗಿದ್ದ. ಈ ವೇಳೆ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಆತನ ಬ್ಯಾಗ್​ ಜೊತೆ ಕ್ರೆಡಿಟ್ ಕಾರ್ಡ್, ಲ್ಯಾಪ್‌ಟಾಪ್ ಮೊಬೈಲ್ ಫೋನ್ ಪರಿಶೀಲನೆ ವೇಳೆ ಚಿನ್ನ ಪತ್ತೆಯಾಗಿದೆ.

ದೇವನಹಳ್ಳಿ: ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ; ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಚಿನ್ನಸಾಗಣೆಗೆ ಯತ್ನಿಸಿದ ಆರೋಪಿ ಬಂಧನ
ಕೆಂಪೇಗೌಡ ವಿಮಾನ ನಿಲ್ದಾಣ
Follow us
ನವೀನ್ ಕುಮಾರ್ ಟಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 22, 2023 | 11:25 AM

ಬೆಂಗಳೂರು ಗ್ರಾಮಾಂತರ, ಸೆ.22: ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ಚಿನ್ನಸಾಗಣೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport)ದಲ್ಲಿ ನಡೆದಿದೆ. ಅಬುಧಾಬಿಯಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕ, ಬೆಂಗಳೂರಿನಿಂದ ಚೆನ್ನೈಗೆ ಹೋಗಲು ಮುಂದಾಗಿದ್ದ. ಈ ವೇಳೆ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಆತನ ಬ್ಯಾಗ್​ ಜೊತೆ ಕ್ರೆಡಿಟ್ ಕಾರ್ಡ್, ಲ್ಯಾಪ್‌ಟಾಪ್ ಮೊಬೈಲ್ ಫೋನ್ ಪರಿಶೀಲನೆ ವೇಳೆ ಚಿನ್ನ ಪತ್ತೆಯಾಗಿದೆ. ಬಂಧಿತನಿಂದ ಸುಮಾರು 55.60 ಗ್ರಾಂ ಹಾಗೂ ಪ್ರಯಾಣಿಕನಿಂದ 28 ಲ್ಯಾಪ್‌ಟಾಪ್ ಗಳು, 30 ಐಫೋನ್​ಗಳು ಹಾಗೂ ಕ್ರೆಡಿಟ್ ಕಾರ್ಡ್ಸ್ ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿದ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ಪೊಲೀಸ್ ಜೀಪ್‌ಗೆ ಡಿಕ್ಕಿ ಹೊಡೆದ ಮರುಳು ತುಂಬಿದ ಲಾರಿ

ಕೋಲಾರ: ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಹನುಮನಹಳ್ಳಿ ಟೋಲ್ ಬಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿವೈಎಸ್ಪಿ ಗೋಪಾಲ್ ನಾಯ್ಕ್ ಅವರ ಪೊಲೀಸ್ ಜೀಪಿಗೆ ಹಿಂಬದಿಯಿಂದ ರಭಸವಾಗಿ ಬಂದ ಮರಳು ತುಂಬಿದ ಲಾರಿ ಡಿಕ್ಕಿ ಹೊಡೆದಿದೆ. ಮುಳಬಾಗಲು ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಆಗುತ್ತಿದ್ದ ವೇಳೆ ಟೋಲ್ ಗೇಟ್‌ನಲ್ಲಿ ಡಿವೈಎಸ್‌ಪಿ ಇದ್ದ ಪೊಲೀಸ್ ಜೀಪ್‌ಗೆ ಲಾರಿ ಡಿಕ್ಕಿಯಾಗಿ, ಬಳಿಕ ಮುಂದೆ ಇದ್ದ ಟಾಟಾ ಏಸ್‌ಗೆ ಡಿಕ್ಕಿಯಾಗಿದೆ. ಅದೃಷ್ಠವಶಾತ್ ಟಾಟಾ ಏಸ್​ನಲ್ಲ್ಲಿದ್ದ ಚಾಲಕ, ಪೊಲೀಸ್ ಜೀಪ್​ನಲ್ಲಿದ್ದ ಅಧಿಕಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದಾಖಲೆ ಪ್ರಮಾಣದ ಮಾವು ರಫ್ತು; ಬರೋಬ್ಬರಿ ಶೇ 124ರಷ್ಟು ಹೆಚ್ಚಳ

ಮರಳು ಲಾರಿ ಆಂಧ್ರ ಪ್ರದೇಶದಿಂದ ಸಿಲಿಕಾ ಸ್ಯಾಂಡ್ ಹೊತ್ತು ಬೆಂಗಳೂರಿನತ್ತ ತೆರಳುತ್ತಿದ್ದು, ರಾಜ್ಯದಲ್ಲಿ ಸಿಲಿಕಾ ಸ್ಯಾಂಡ್ ನಿಷೇಧಿಸಲಾಗಿದೆ. ಆದರೂ ಅಧಿಕಾರಿಗಳ ಕಣ್ಣು ತಪ್ಪಿಸಿ ಸಮುದ್ರದ ಮರಳು ಸಾಗಾಟ ಮಾಡುತ್ತಿರುವುದು ಹಾಗೂ ಪೊಲೀಸ್ ಅಧಿಕಾರಿಯ ಜೀಪ್‌ಗೆ ಡಿಕ್ಕಿ ಹೊಡೆದಿರುವುದು ಹಲವು ಹನುಮಾನಗಳಿಗೆ ಕಾರಣವಾಗಿದೆ. ಇನ್ನು ಕೋಲಾರದಲ್ಲಿ ಕಳೆದ 8 ರಿಂದ10 ವರ್ಷಗಳ ಹಿಂದೆ ನಡೆಯುತ್ತಿದ್ದ ಮರಳು ಮಾಪಿಯಾಗೆ ಅದೆಷ್ಟೂ ಜನರು, ಅಧಿಕಾರಿಗಳು ಬಲಿಯಾಗಿದ್ದಾರೆ. ಆದ್ರೆ, ಇನ್ನೇನು ಜಿಲ್ಲೆಯಲ್ಲಿ ಮರಳು ಮಾಫಿಯಾ ನಿಂತಿದೆ ಅಂದುಕೊಂಡಿದ್ದವರಿಗೆ ಮರಳು ಮಾಫಿಯಾ ಸಂಪೂರ್ಣವಾಗಿ ನಿಂತಿಲ್ಲ ಅದು ಕದ್ದು ಮುಚ್ಚಿ ನಡೆಯುತ್ತಿದೆ ಅನ್ನೋದು ಗೊತ್ತಾಗಿದೆ.

ಒಟ್ಟಾರೆ ಕೋಲಾರದಲ್ಲಿ ಒಂದು ಕಾಲದಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾದ ಘಟನೆ ಮತ್ತೆ ನೆನಪಿಸಿದೆ. ಮರಳು ಲಾರಿಯೊಂದು ಪೊಲೀಸ್ ಅಧಿಕಾರಿಯ ಜೀಪಿಗೆ ಡಿಕ್ಕಿಹೊಡೆಯುವ ಮೂಲಕ ಜಿಲ್ಲೆಯಲ್ಲಿ ಇನ್ನು ಮರಳು ಮಾಫಿಯಾ ಕದ್ದು ಮುಚ್ಚಿ ನಡೆಯುತ್ತಿದೆ ಎನ್ನುವುದು ತಿಳಿದು ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ