AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nelamangala News: ನೌಕರಿ ಡಾಟ್ ಕಾಮ್ ಹೆಸರಲ್ಲಿ ಕರೆ, ಉಪನ್ಯಾಸಕನಿಗೆ ಸಾವಿರಾರು ರೂ. ವಂಚನೆ

ನೌಕರಿ ಡಾಟ್ ಕಾಮ್ ಹೆಸರಲ್ಲಿ ಕರೆ ಮಾಡಿ ಉಪನ್ಯಾಸಕನಿಗೆ ವಂಚನೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.

Nelamangala News: ನೌಕರಿ ಡಾಟ್ ಕಾಮ್ ಹೆಸರಲ್ಲಿ ಕರೆ, ಉಪನ್ಯಾಸಕನಿಗೆ ಸಾವಿರಾರು ರೂ. ವಂಚನೆ
ಸೋಲದೇವನಹಳ್ಳಿ ಪೊಲೀಸ್ ಠಾಣೆ
TV9 Web
| Updated By: ವಿವೇಕ ಬಿರಾದಾರ|

Updated on: Jul 02, 2023 | 10:52 AM

Share

ನೆಲಮಂಗಲ: ನೌಕರಿ ಡಾಟ್ ಕಾಮ್ ಹೆಸರಲ್ಲಿ ಕರೆ ಮಾಡಿ ಉಪನ್ಯಾಸಕನಿಗೆ (Lecturer) ವಂಚನೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನಲ್ಲಿ ನಡೆದಿದೆ. ವೆಂಕಟೇಶ್ ವಂಚನೆಯೊಳಗಾದ ಉಪನ್ಯಾಸಕ. ನೆಲಮಂಗಲದ ಪ್ರತಿಷ್ಟಿತ ಕಾಲೇಜುವೊಂದರ ಶಿಕ್ಷಕನಿಗೆ ಆರೋಪಿ ನೌಕರಿ ಡಾಟ್ ಕಾಮ್ ಹೆಸರಲ್ಲಿ ಕರೆ ಮಾಡಿ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ನಂತರ ಹೆಸರು ನೋಂದಾಯಿಸಲು 10 ರೂ. ನೀಡುವಂತೆ ವಂಚಕ ತಿಳಿಸಿದ್ದಾನೆ. 10 ರೂ. ಪಾವತಿ ಬಳಿಕ ವೆಂಕಟೇಶ್ ಬಳಿ ಒಟಿಪಿ ಪಡೆದಿದ್ದಾನೆ.

ಆನ್​ಲೈನ್​ ಟ್ರಾನ್ಸಾಕ್ಷನ್ ಮೂಲಕ ಮೊದಲನೇ ಬಾರಿ 4,980.95 ರೂ. ನಂತರ 4,999 ರೂ. ಮತ್ತು 10,063.55 ರೂ. ಗಳಂತೆ 3ಬಾರಿ ಖಾತೆಯಲ್ಲಿದ್ದ 20 ರೂ. ಸಾವಿರ ಹಣವನ್ನು ದೋಚಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಉಪನ್ಯಾಸಕ ವೆಂಕಟೇಶ ದೂರು ನೀಡಿದ್ದಾನೆ.

ಇದನ್ನೂ ಓದಿ: ಅನುಕಂಪದ ಮೇಲೆ ಕೆಲಸ ಗಿಟ್ಟಿಸಿಕೊಂಡಿದ್ದ ತಹಶೀಲ್ದಾರ್ ಅಜಿತ್ ರೈ ಕೋಟಿ ಒಡೆಯ, ಇಲ್ಲಿದೆ ಮನೆಯಲ್ಲಿ ಸಿಕ್ಕ ವಸ್ತುಗಳ ವಿವರ

ನೆಲಮಂಗಲ: ಬೆಂಗಳೂರು ಉತ್ತರ ತಾಲ್ಲೂಕಿನ ಅಂದ್ರಹಳ್ಳಿ (ಸರ್ವೆ ನಂ112) ಸರ್ಕಾರಿ ಸ್ಮಶಾನ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಬೃಹತ್ ವಾಣಿಜ್ಯ ಮಳಿಗೆಯನ್ನು ಹೈಕೋರ್ಟ್ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ.

ತೆರವು ಕಾರ್ಯಚರಣೆ ವೇಳೆ ಮಾಲಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.  ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಡರಹಳ್ಳಿ ಪೊಲೀಸರ ನಿಯೋಜಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ