BMTC: ಮಹಿಳಾ ದಿನಾಚರಣೆಯಂದು ಫ್ರೀಯಾಗಿ ಎಷ್ಟು ಮಹಿಳೆಯರು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದರು? ಇಲ್ಲಿದೆ ಅಂಕಿ-ಸಂಖ್ಯೆ
International Woman's Day: ಮಾರ್ಚ್ 8 ರಂದು ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮಹಿಳೆಯರಿಗೆ ಒಂದು ದಿನ ಉಚಿತ ಪ್ರಯಾಣಕ್ಕಾಗಿ ಅವಕಾಶ ನೀಡಿದ್ದು, ಅಂದು ಬಿಎಂಟಿಸಿ ಬಸ್ಗಳಲ್ಲಿ ಬರೊಬ್ಬರಿ 21 ಲಕ್ಷ ಮಹಿಳೆಯರು ಸಂಚರಿಸಿದ್ದಾರೆ.
ಬೆಂಗಳೂರು: ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ (International Womans Day) ಅಂಗವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಹಿಳೆಯರಿಗೆ ಒಂದು ದಿನ ಉಚಿತ ಪ್ರಯಾಣಕ್ಕಾಗಿ ಅವಕಾಶ ನೀಡಿತ್ತು. ಅಂದು ಬಿಎಂಟಿಸಿ ಬಸ್ಗಳಲ್ಲಿ ಬರೊಬ್ಬರಿ 21 ಲಕ್ಷ ಮಹಿಳೆಯರು ಸಂಚರಿಸಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ದಿ ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ. ಬೆಂಗಳೂರು ಪಶ್ಚಿಮದಲ್ಲಿ ಅತಿ ಹೆಚ್ಚು 5 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ. ಇನ್ನು ಮಾರ್ಚ್ 8 ರಂದು ಬಿಎಂಟಿಸಿ ಬಸ್ಗಳಲ್ಲಿ 33 ಲಕ್ಷ ಜನ ಸಂಚರಿಸಿದ್ದಾರೆ ಎಂದು ವರದಿಯಾಗಿದೆ.
ಮಾರ್ಚ್ 8 ರಂದು ಮಹಿಳಾ ದಿನಾಚರಣೆ ಹಿನ್ನೆಲೆ ಬಿಬಿಎಂಟಿಸಿ ಮಹಿಳೆಯರಿಗೆ ಎಸಿ ವಜ್ರ ಮತ್ತು ವಾಯುವಜ್ರ ಸೇರಿದಂತೆ ಎಲ್ಲ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕಾಗಿ ಅವಕಾಶ ಮಾಡಿಕೊಟ್ಟಿತ್ತು. ಪೂರ್ವ ವಲಯದಲ್ಲಿ 3.4 ಲಕ್ಷಕ್ಕೂ ಹೆಚ್ಚು ಮಹಿಳೆಯರು, ಉತ್ತರ ವಲಯದಲ್ಲಿ 4.7 ಲಕ್ಷ, ದಕ್ಷಿಣ ವಲಯದಲ್ಲಿ 3.8 ಲಕ್ಷ, ಈಶಾನ್ಯ ವಲಯದಲ್ಲಿ 3.9 ಲಕ್ಷ ಮತ್ತು ಕೇಂದ್ರ ವಲಯದಲ್ಲಿ 90,000 ಮಹಿಳೆಯರು ಬಸ್‌ನಲ್ಲಿ ಪ್ರಯಾಣಿಸಿದ್ದಾರೆ.
ಇದನ್ನೂ ಓದಿ: ಚಾಲಕರ ಜೇಬಿನಿಂದಲೇ ರಿಯಾಯ್ತಿ ಟ್ರಾಫಿಕ್ ದಂಡ ಪಾವತಿಗೆ ಮುಂದಾದ ಬಿಎಂಟಿಸಿ, ಕೆರಳಿ ಕೆಂಡವಾದ ಸಿಬ್ಬಂದಿ!
ಬಿಎಂಟಿಸಿಯಲ್ಲಿ 6,600 ಬಸ್ಗಳಿದ್ದು, 5,567 ಬಸ್ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿನಿತ್ಯ ಇವು 10.84 ಲಕ್ಷ ಕಿಮೀ ಕ್ರಮಿಸುತ್ತವೆ. ಇನ್ನು ಪ್ರತಿದಿನ 29 ಲಕ್ಷ ಜನರು ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Fri, 10 March 23