ಸಿಎಂ ಸಚಿವಾಲಯದ ಕರ್ತವ್ಯದಿಂದ 30 ಸಿಬ್ಬಂದಿ ವಜಾ

| Updated By: ಸುಷ್ಮಾ ಚಕ್ರೆ

Updated on: Apr 01, 2025 | 10:31 PM

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವಾಲಯದಿಂದ ಏಕಾಏಕಿ 30 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಿ ಆದೇಶ ಹೊರಡಿಸಲಾಗಿದೆ. ಅವರ ಸೇವೆಯ ಅಗತ್ಯವಿಲ್ಲ ಎಂಬ ಕಾರಣ ನೀಡಿ ಅವರನ್ನ ಇಂದಿನಿಂದಲೇ ಕೆಲಸದಿಂದ ಬಿಡುಗಡೆ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಈ 30 ಮಂದಿ ಇದೀಗ ಕೆಲಸ ಕಳೆದುಕೊಂಡಿದ್ದಾರೆ. ಅವರ ನೇಮಕಾತಿಯನ್ನು ಇಂದು ಮಧ್ಯಾಹ್ನದಿಂದಲೇ ರದ್ದುಗೊಳಿಸಲಾಗಿದೆ.

ಸಿಎಂ ಸಚಿವಾಲಯದ ಕರ್ತವ್ಯದಿಂದ 30 ಸಿಬ್ಬಂದಿ ವಜಾ
Siddaramaiah
Follow us on

ಬೆಂಗಳೂರು, ಏಪ್ರಿಲ್ 1: ಕರ್ನಾಟಕದ ಸರ್ಕಾರದ (Karnataka Government) ಸಿಎಂ ಸಚಿವಾಲಯದ ಕರ್ತವ್ಯದಿಂದ 30 ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸ್ತಿದ್ದ 30 ಸಿಬ್ಬಂದಿಯನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಇಂದು ಅಪರಾಹ್ನದಿಂದಲೇ ಕರ್ತವ್ಯದಿಂದ 30 ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರದ ಸಹಾಯಕರು, ಕಿರಿಯ ಸಹಾಯಕರು ದಲಾಯತ್ ಹುದ್ದೆಯಲ್ಲಿದ್ದವರು ಸೇವೆಯಿಂದ ವಜಾಗೊಂಡಿದ್ದಾರೆ.

ಈ ಬಗ್ಗೆ ಸಿಎಂ ಸಚಿವಾಲಯದಿಂದ ಆದೇಶ ಹೊರಡಿಸಲಾಗಿದೆ. 30 ಗುತ್ತಿಗೆ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದ್ದು, ಅವರ ಸೇವೆ ಅವಶ್ಯಕತೆ ಇಲ್ಲದ ಕಾರಣ ಕರ್ತವ್ಯದಿಂದ ಏಕಾಏಕಿ ತೆಗೆದುಹಾಕಲಾಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 30 ಸಿಬ್ಬಂದಿಗೆ ಇಂದು ಮಧ್ಯಾಹ್ನದಿಂದಲೇ ಕೆಲಸಕ್ಕೆ ಬಾರದಂತೆ ಸೂಚಿಸಲಾಗಿದೆ.

ಸಿಎಂ ಸಚಿವಾಲಯದ ಕರ್ತವ್ಯದಿಂದ 30 ಸಿಬ್ಬಂದಿ ವಜಾ

ಸಿಎಂ ಸಚಿವಾಲಯದ ಕರ್ತವ್ಯದಿಂದ 30 ಸಿಬ್ಬಂದಿ ವಜಾ

ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ರಾಮನಗರ, ತುಮಕೂರು, ಬೆಳಗಾವಿ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳ ಸಿಬ್ಬಂದಿ ಸಿಎಂ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ 30 ಜನರನ್ನು ಇಂದು ವಜಾಗೊಳಿಸಲಾಗಿದೆ.

ಇದನ್ನೂ ಓದಿ
ಬಿಜೆಪಿಯ 18 ಶಾಸಕರ ಅಮಾನತು ಹಿಂಪಡೆಯಬೇಕು: ಸ್ಪೀಕರ್​ಗೆ ಆರ್​ ಅಶೋಕ ಪತ್ರ
ಕರ್ನಾಟಕ ಸರ್ಕಾರದಿಂದ ಜನರಿಗೆ ಮತ್ತೊಂದು ಬರೆ: ಡೀಸೆಲ್​​ ದರ ಏರಿಕೆ
ಕೃಷ್ಣಾ, ಭೀಮಾ ನದಿಗೆ ನೀರು ಹರಿಸುವಂತೆ ಮಹಾ ಸಿಎಂಗೆ ಸಿದ್ದರಾಮಯ್ಯ ಪತ್ರ
ನಮ್ಮ ಮೆಟ್ರೋ ಟಿಕೆಟ್​ ದರ ಏರಿಕೆ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್​ ವಜಾ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 pm, Tue, 1 April 25