ಕರವೇ ನಾರಾಯಣಗೌಡಗೆ ತಪ್ಪಿಲ್ಲ ಸಂಕಷ್ಟ: ಅರೆಸ್ಟ್ ಆಗಿದ್ದು 1 ಕೇಸ್ ನಲ್ಲಿ, ಬಾಕಿ ಇವೆ 8 ಪ್ರಕರಣಗಳು
ಕರವೇ ನಾರಯಾಣಗೌಡ ಅವರ ವಿರುದ್ಧ ಇನ್ನೂ ಎಂಟು ಕೇಸ್ಗಳು ಬಾಕಿ ಇವೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ 6 ಪ್ರಕರಣ, ಯಲಹಂಕ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ಬಾಕಿ ಇವೆ. ಈ ಎಲ್ಲಾ ಪ್ರಕರಣಗಳಲ್ಲೂ ಪೊಲೀಸರು 41(A) ಅಡಿ ನೋಟಿಸ್ ನೀಡಲಿದ್ದಾರೆ.
ಬೆಂಗಳೂರು, ಜನವರಿ 12: ಕರ್ನಾಟಕ ರಕ್ಷಣಾ ವೇದಿಕೆ (Karave) ಕಳೆದ ವರ್ಷ ಡಿಸೆಂಬರ್ 27 ರಂದು ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಾಮಫಲಕ ಮಹಾ ಅಭಿಯಾನ ಕೈಗೊಂಡಿತ್ತು. ಅಂಗಡಿ-ಮುಗ್ಗಟ್ಟು, ಮಾಲ್ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಇಲ್ಲದಿದ್ದಕ್ಕೆ ಹೋರಾಟ ನಡೆಸಿದ್ದರು. ಅಂದು ಕನ್ನಡ ನಾಮಫಲಕವಿಲ್ಲದ (Kannada Board) ಕೆಲವು ಮಾಲ್ ಮತ್ತು ಅಂಗಡಿಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಿದ್ದಾರೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಕರವೇ ಅಧ್ಯಕ್ಷ ನಾರಾಯಣಗೌಡ (Narayangouda) ಸೇರಿದಂತೆ 29 ಜನರನ್ನು ಬಂಧಿಸಲಾಗಿತ್ತು.
ಈ ಪ್ರಕರಣದಲ್ಲಿ ಕರವೇ ನಾರಾಯಣಗೌಡ ಅವರಿಗೆ ಜಾಮೀನು ಸಿಕ್ಕಿದ್ದು, ಬಿಡುಗಡೆಯಾಗಿದ್ದರು. ಆದರೆ 2017ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರವೇ ನಾರಾಯಣಗೌಡ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದರು. ಈ ಪ್ರಕರಣದಲ್ಲೂ ಕರವೇ ನಾರಾಯಣಗೌಡ ಅವರಿಗೆ ಜಾಮೀನು ಸಿಕ್ಕಿದೆ. ಆದರೆ ನಾರಾಯಣಗೌಡ ಅವರ ವಿರುದ್ಧದ ಇನ್ನೂ ಅನೇಕ ಪ್ರಕರಣಗಳು ಬಾಕಿ ಇವೆ. ಇದರಿಂದ ಕರವೇ ನಾರಾಯಣಗೌಡ ಅವರು ಜೈಲಿಂದ ಬಿಡುಗಡೆಯಾದ್ರೂ ಸಂಕಷ್ಟ ತಪ್ಪಿಲ್ಲ.
ಇದನ್ನೂ ಓದಿ: 2017ರ ಪ್ರಕರಣದಲ್ಲೂ ಕರವೇ ಅಧ್ಯಕ್ಷ ನಾರಾಯಣಗೌಡಗೆ ಜಾಮೀನು ನೀಡಿದ ಕೋರ್ಟ್
ಕರವೇ ನಾರಯಾಣಗೌಡ ಅವರು ಬಂಧನವಾಗಿದ್ದು ಒಂದು ಪ್ರಕರಣದಲ್ಲಿ, ಆದರೆ ಇನ್ನೂ ಎಂಟು ಕೇಸ್ಗಳು ಬಾಕಿ ಇವೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ 6 ಪ್ರಕರಣ, ಯಲಹಂಕ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ಬಾಕಿ ಇವೆ. ಈ ಎಲ್ಲಾ ಪ್ರಕರಣಗಳಲ್ಲೂ ಪೊಲೀಸರು 41(A) ಅಡಿ ನೋಟಿಸ್ ನೀಡಲಿದ್ದಾರೆ. ಕರವೇ ನಾರಾಯಣಗೌಡ ಅವರು ಇಷ್ಟು ದಿನ ಜೈಲಲ್ಲಿದ್ದ ಕಾರಣ ಪೊಲೀಸರು ನೋಟೀಸ್ ನೀಡಿಲ್ಲ. ಇದೀಗ ಬಿಡುಗಡೆಯಾದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ.
ನಾರಾಯಣಗೌಡ ವಿರುದ್ಧ ಕೇಸ್ಗಳು
ಚಿಕ್ಕಜಾಲದಲ್ಲಿ ಒಟ್ಟು 6 ಕೇಸ್ಗಳು ಬಾಕಿ
1. ಬಿಎಂಟಿಸಿ ಬಸ್ಗೆ ಕಲ್ಲು ತೂರಾಟ
2. ಪೊಲೀಸ್ ಕಾನ್ಸ್ಟೇಬಲ್ಗೆ ಉಗಿದ ಪ್ರಕರಣ
3. ವಿವಿಧ ಕಡೆ ಹೆದ್ದಾರಿ ತಡೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಪ್ರಕರಣ ಸಂಬಂಧಿಸಿದಂತೆ 143, 145, 149, 283, 8B, 427 ಸೆಕ್ಷನ್ಗಳ ಅಡಿ ಎಫ್ಐಆರ್
ಯಲಹಂಕದಲ್ಲಿ 2 ಕೇಸ್ಗಳು
1. ಬಿಎಂಟಿಸಿ ಬಸ್ಗೆ ಡ್ಯಾಮೇಜ್ ಕೇಸ್
2. ಇಕೋ ಪೊಲೀಸ್ ಬೋರ್ಡ್ ಡ್ಯಾಮೇಜ್ ಕೇಸ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ