ಉತ್ತರಾಖಂಡ ಚಾರಣಕ್ಕೆ ತೆರಳಿದ್ದ 9 ಜನ ಸಾವು; 13 ಪ್ರವಾಸಿಗರ ರಕ್ಷಣೆ, ಹೆಲ್ಪ್ಲೈನ್ ನಂಬರ್ ಸ್ಥಾಪನೆ
ಉತ್ತರಾಖಂಡ್ಗೆ ಚಾರಣಕ್ಕೆ ತೆರಳಿದ್ದ ರಾಜ್ಯದ 9 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸೇನಾ ಹೆಲಿಕಾಪ್ಟರ್‌ಗಳ ಮೂಲಕ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಮೂವರು ಶೆರ್ಪಾಗಳು ಮತ್ತು ನಾಲ್ವರು ಚಾರಣಿಗರ ಪಾರ್ಥಿವ ಶರೀರವನ್ನು ನಾಳೆ ಸ್ಥಳಾಂತರಿಸಲಾಗುವುದು.
ಬೆಂಗಳೂರು, ಜೂನ್.06: ಉತ್ತರಾಖಂಡ್ಗೆ (Uttarakhand) ಚಾರಣಕ್ಕೆ ತೆರಳಿದ್ದ ಕರ್ನಾಟಕ ರಾಜ್ಯದ 21 ಜನರ ಪೈಕಿ 9 ಜನರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಮಾಹಿತಿ ಸಿಕ್ಕಿದೆ. ಉತ್ತರಖಂಡದ ಉತ್ತರಕಾಶಿ ಜಿಲ್ಲೆಯ ಸಹಸ್ತ್ರ ತಾಲ್ ಟ್ರೆಕ್ಕಿಂಗ್ ವೇಳೆ ಕೆಟ್ಟ ಹವಾಮಾನದಿಂದಾಗಿ 9 ಪ್ರವಾಸಿಗರು ಮೃತಪಟ್ಟಿದ್ದು ಭಾರತೀಯ ವಾಯುಸೇನೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿಕೂಲ ಹವಾಮಾನದಲ್ಲಿ ಸಿಲುಕಿದ್ದ 15 ಚಾರಣಿಗರ ಪೈಕಿ ಮೂವರು ಬದುಕುಳಿದಿದ್ದು ಐವರ ಶವ ಯಶಸ್ವಿಯಾಗಿ ಸ್ಥಳಾಂತರ ಮಾಡಲಾಗಿದೆ. ಇನ್ನು IAS ಅಧಿಕಾರಿ ವಿಫುಲ್ ಬನ್ಸಾಲ್ ನೇತೃತ್ವದಲ್ಲಿ ಸಹಾಯವಾಣಿ ತೆರೆಯಲಾಗಿದೆ. ಉತ್ತರಕಾಶಿಯಲ್ಲಿರುವ ಐಎಎಸ್ ಅಧಿಖಾರಿ ವಿಫುಲ್ ಬನ್ಸಾಲ್ ಚಾರಣಿಗರು, ಪ್ರವಾಸಿಗರ ಸಹಾಯಕ್ಕೆ ಹೆಲ್ಪ್ ಲೈನ್ ಸ್ಥಾಪನೆ ಮಾಡಿದ್ದಾರೆ. ಹೆಲ್ಪ್ಲೈನ್ ನಂಬರ್ 9480474949 ಕರೆ ಮಾಡಲು ಮನವಿ ಮಾಡಿದ್ದಾರೆ.
ಎತ್ತರದ ಪ್ರದೇಶ ಮತ್ತು ಏರಿಳಿತದ ಭೂಪ್ರದೇಶ ಹಿನ್ನೆಲೆ ಎರಡು ಹಗುರ ತೂಕದ ಚೀತಾ ಹೆಲಿಕಾಪ್ಟರ್‌ಗಳ ಮೂಲಕ ಎತ್ತರದ ನೆಲದಿಂದ ಬೇಸ್ ಕ್ಯಾಂಪ್‌ಗೆ ಮತ್ತು ಮಧ್ಯಮ ಲಿಫ್ಟ್ Mi17 V5 ಹೆಲಿಕಾಪ್ಟರ್‌ಗಳೊಂದಿಗೆ ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ರಕ್ಷಣಾ ಕಾರ್ಯ ನಡೆಸಲಾಯಿತು. ಮೂವರು ಶೆರ್ಪಾಗಳು ಮತ್ತು ನಾಲ್ವರು ಚಾರಣಿಗರ ಪಾರ್ಥಿವ ಶರೀರವನ್ನು ನಾಳೆ ಸ್ಥಳಾಂತರಿಸಲಾಗುವುದು.
ಈ ಘೋರ ದುರಂತದಲ್ಲಿ 9 ಪ್ರವಾಸಿಗರು ಮೃತಪಟ್ಟಿದ್ದಾರೆ. ಮೇ 29 ರಂದು ಒಟ್ಟು 22 ಜನ ಟ್ರಕ್ಕಿಂಗ್ ಆರಂಭಿಸಿದ್ದರು. ಜೂನ್ 7 ಕ್ಕೆ ವಾಪಾಸ್ ಬರಲು ನಿರ್ಧಾರವಾಗಿತ್ತು. ಸಿಲ್ಲಾ ಕುಷ್ಕಲ್ಯಾಣದಿಂದ ಸಹಸ್ತ್ರತಾಲ್ಗೆ 35 ಕೀ.ಮೀ ದೂರದ ಟ್ರಕ್ಕಿಂಗ್ಗೆ ಈ ಟೀಂ ಹೋಗಿತ್ತು. ಕರ್ನಾಟಕದ ಐವರು, ಮಹಾರಾಷ್ಟ್ರದ ಮೂವರು, ಇನ್ನೊಬ್ಬರ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇವ್ರನ್ನೊಳಗೊಂಡ ಒಟ್ಟು 9 ಜನರು ಮೃತಪಟ್ಟಿದ್ದಾರೆ. ಈವರೆಗೆ ಐವರ ಮೃತದೇಹಗಳ ಸ್ಥಳಾಂತರ ಮಾಡಲಾಗಿದೆ.
22 ಜನರ ಪೈಕಿ 13 ಪ್ರವಾಸಿಗರನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಡೆಹ್ರಾಡೂನ್ ಗೆ 8 ಜನ, ಬಟ್ವಾಡಿಗೆ ಮೂವರು, ಸಿಲ್ಲಾ ಗ್ರಾಮಕ್ಕೆ ಇಬ್ಬರು ಸೇರಿ ಒಟ್ಟು 13 ಪ್ರವಾಸಿಗರನ್ನ ಭಾರತೀಯ ವಾಯುಸೇನೆ ಹಾಗೂ SDRF ರಕ್ಷಣೆ ಮಾಡಿದೆ.
ಇದನ್ನೂ ಓದಿ: ಉತ್ತರಾಖಂಡ್ ಚಾರಣಕ್ಕೆ ತೆರಳಿದ್ದ ಕರ್ನಾಟಕದ 9 ಜನ ಸಾವು: ಮೃತರ ಗುರುತು ಪತ್ತೆ
ರಕ್ಷಣೆಗೊಳಗಾಗಿ ಡೆಹ್ರಾಡೂನ್ಗೆ ಸ್ಥಳಾಂತರಗೊಂಡ ಪ್ರವಾಸಿಗರ ವಿವರ
- ಸೌಮ್ಯ ಕನಾಳೆ
- ಸ್ಮೃತಿ ಡೊಲಾಸ್
- ಸೀನಾ ಲಕ್ಷ್ಮಿ
- ಎಸ್ ಶಿವಜ್ಯೋತಿ
- ಅನೀಲ್ ಭಟ್
- ಭರತ್ ಬೊಮ್ಮನಗೌಡರ್
- ಮಧು ಕಿರಣ್ ರೆಡ್ಡಿ
- ಜಯಪ್ರಕಾಶ್ ಬಿ ಎಸ್
ರಕ್ಷಣೆಗೊಳಗಾಗಿ ಬಟ್ವಾಡಿ ಪ್ರದೇಶದಲ್ಲಿ ತಂಗಿರುವ ಪ್ರವಾಸಿಗರ ವಿವರ
- ಎಸ್ ಸುಧಾಕರ್
- ವಿನಾಯಕ್ ಎಂಕೆ
- ವಿವೇಕ್ ಶ್ರೀಧರ್
ಸಿಲ್ಲಾ ಹಳ್ಳಿಗೆ ಮರಳಿದ ಪ್ರವಾಸಿಗರ ವಿವರ
- ನವೀನ್ ಎ
- ರಿತಿಕಾ ಜಿಂದಾಲ್
ಮೃತ ದೇಹಗಳ ಸ್ಥಳಾಂತರಗೊಂಡವರ ವಿವರ
- ಸಿಂದು ವೆಕೆಕಲಂ
- ಆಶಾ ಸುಧಾಕರ್
- ಸುಜಾತ ಮುನ್ಗೂರ್ವಾಡಿ
- ವಿನಾಯಕ್ ಮುನ್ಗೂರ್ವಾಡಿ
- ಚೈತ್ರಾ ಪ್ರಣೀತ್
ಇವರೆಗೆ ಸಿಗದ ಮೃತದೇಹಗಳು
- ಅನಿತಾ ರಂಗಪ್ಪ
- ಪದ್ಮಿನಿ ಹೆಗ್ಡೆ
- ವೆಂಕಟೇಶ್ ಪ್ರಸಾದ್ ಕೆ.ಎನ್
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:52 am, Thu, 6 June 24