Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಣಾ ಮಂತ್ರಿ ಬರುವ ವೇಳೆ ನುಗ್ಗಿ ಕಾನ್ ಸ್ಟೇಬಲ್ ಕಾಲು ಮುರಿದಿದ್ದ ಬೈಕ್ ಸವಾರ ಅರೆಸ್ಟ್

ಅದೇನೋ ಗೊತ್ತಿಲ್ಲ ಕೆಲ ಜನ ಎಲ್ಲಾದ್ರು ಹೋಗಬೇಕೆಂದರೆ ಏನ್ ಅರ್ಜೆಂಟ್ ಮಾಡ್ತಾರಪ್ಪ.. ಟ್ರಾಫಿಕ್ ಟೈಮ್,‌ ವಿವಿಐಪಿ ಮೂಮೆಂಟ್ ಟೈಮ್ ಅಲ್ಲಿ ಅರ್ಜೆಂಟಾಗಿ ಹೋಗುವುದಕ್ಕೆ ನೋಡುತ್ತಾರೆ. ಕೆಲವೊಮ್ಮೆ ಆ್ಯಂಬುಲೆನ್ಸ್ ಗೂ ದಾರಿ ಬಿಡಲ್ಲ ಅಂತಾರೆ. ಹೀಗೆ ಅರ್ಜೆಂಟ್ ಆಗಿ ಹೋಗೋ ಬರದಲ್ಲಿ ರಕ್ಷಣಾ ಮಂತ್ರಿ ಮಿನಿಸ್ಟರ್ ಕಾನ್ವೇ ವೇಳೆ ನುಗ್ಗಿದ್ದ ಓರ್ವ ಯುವಕ ಅರೆಸ್ಟ್ ಆಗಿದ್ದಾನೆ.

ರಕ್ಷಣಾ ಮಂತ್ರಿ ಬರುವ ವೇಳೆ ನುಗ್ಗಿ ಕಾನ್ ಸ್ಟೇಬಲ್ ಕಾಲು ಮುರಿದಿದ್ದ ಬೈಕ್ ಸವಾರ ಅರೆಸ್ಟ್
Follow us
Prajwal Kumar NY
| Updated By: ರಮೇಶ್ ಬಿ. ಜವಳಗೇರಾ

Updated on: Feb 19, 2025 | 9:08 PM

ಬೆಂಗಳೂರು, (ಫೆಬ್ರವರಿ 19): ಇತ್ತೀಚೆಗೆ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ನಮ್ಮ ಬೆಂಗಳೂರಿಗೆ ಬಂದಿದ್ದರು. ಏರ್ ಶೋ, ಇನ್ವೆಸ್ಟ್ ಕರ್ನಾಟಕ ಸೇರಿ ಒಂದಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಈ ವೇಳೆ ಪ್ರೋಟೋಕಾಲ್ ಹಿನ್ನೆಲೆ ರಾಜನಾಥ್ ಸಿಂಗ್ ರ ಮೂಮೆಂಟ್ ಸಂದರ್ಭದಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೀಗೆ ಬಂದೋಬಸ್ತ್ ನಲ್ಲಿ ತಡೆಯುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸ್ ಕಾನ್ ಸ್ಟೇಬಲ್ ಓರ್ವರಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸವಾರ ಡಿಕ್ಕಿ ಹೊಡೆದಿದ್ದ. ಇದೀಗ ಆ ಸವಾರನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಅಂದ್ಹಾಗೆ ಈ ಘಟನೆ ನಡೆದಿದ್ದು ಕಳೆದ 9ನೇ ತಾರೀಖು. ಅನಿಲ್ ಕುಂಬ್ಳೆ ಸರ್ಕಲ್ ಬಳಿ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಮೂಮೆಂಟ್ ಇತ್ತು. ಈ ವೇಳೆ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಶಿವಾಜಿನಗರ ಸಂಚಾರಿ ಠಾಣೆ ಹೆಡ್ ಕಾನ್ ಸ್ಟೇಬಲ್ ದಿನೇಶ್ ರನ್ನ ಕರ್ತವ್ಯಕ್ಕೆ ನೇಮಿಸಲಾಗಿತ್ತು. ಅನಿಲ್ ಕುಂಬ್ಳೆ ಸರ್ಕಲ್ ಕಡೆಯಿಂದ ಆರ್.ವಿ ಜಂಕ್ಷನ್ ಕಡೆ ಹೋಗ್ತಿದ್ದ ವಾಹನಗಳನ್ನ ತಡೆಯುತ್ತಿದ್ದರು. ಈ ವೇಳೆ ಸ್ನೇಹಿತನನ್ನ ಡ್ರಾಪ್ ಮಾಡುವುದಕ್ಕೆ ಎಂದು ಸ್ಕೂಟರ್ ನಲ್ಲಿ ಹೋಗ್ತಿದ್ದ ಅಹ್ಮದ್ ದಿಲ್ವರ್ ಹುಸೇನ್ ಎಂಬಾತನನ್ನ ತಡೆದಿದ್ದರು. ರಕ್ಷಣಾ ಮಂತ್ರಿಯವರ ಮೂಮೆಂಟ್ ಇದೆ ಸ್ವಲ್ಪ ಹೊತ್ತು ಬಿಟ್ಟು ಹೋಗಿ ಎಂದು ಹೇಳಿದ್ದರು. ಆದರೂ ಅಹ್ಮದ್, ಕಾನ್ಸ್​ಟೇಬಲ್​ ದಿನೇಶ್ ಗೆ ಡಿಕ್ಕಿ ಹೊಡೆದುಕೊಂಡು ಎಸ್ಕೇಪ್ ಆಗಿದ್ದ.

ಘಟನೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಕಾಲಿಗೆ ಗಾಯಗಳಾಗಿತ್ತು. ಇದೀಗ ಕೃತ್ಯ ಎಸಗಿದ್ದ ಅಹಮ್ಮದ್ ದಿಲ್ವರ್ ಹುಸೇನ್ ನನ್ನ ಕಬ್ಬನ್ ಪಾರ್ಕ್ ಪೊಲೀಸ್ರು ಬಂಧಿಸಿದ್ದಾರೆ.. ಇನ್ನು ಆರೋಪಿಯನ್ನ ವಿಚಾರಣೆ ನಡೆಸಿದಾಗ ಸ್ನೇಹಿತನನ್ನ ಡ್ರಾಪ್ ಮಾಡುವ ಅರ್ಜೆಂಟ್ ನಲ್ಲಿ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ.

ಅಸ್ಸಾಂ ಮೂಲದ ಆರೋಪಿ ಕೋರಮಂಗಲದಲ್ಲಿ ವಾಸ ಮಾಡುತ್ತಿದ್ದ. ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಮಾಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಅವತ್ತು ಬೆಳಗ್ಗೆ ಸ್ನೇಹಿತನನ್ನ ಡ್ರಾಪ್ ಮಾಡುವಾಗ ಕೃತ್ಯ ಎಸಗಿದ್ದಾನೆ. ಸದ್ಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಆರೋಪಿಯನ್ನ ಬಂಧಿಸಿರುವ ಪೊಲೀಸರು ತನಿಖೆ ನಡೆಸ್ತಿದ್ದಾರೆ..