AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಆಗಬೇಕಂದ್ರೆ ಮತಾಂತರವಾಗು: ಬೆಂಗಳೂರಲ್ಲಿ ಆಂಧ್ರ ಮೂಲದ ಯುವತಿಗೆ ಲವ್​ ಸೆಕ್ಸ್​ ದೋಖಾ?

ಬೆಂಗಳೂರಿನ ಮುಸ್ಲಿಂ ಯುವಕನೋರ್ವನ ವಿರುದ್ಧ ಆಂಧ್ರ ಪ್ರದೇಶ ಮೂಲದ ಹಿಂದೂ ಯುವತಿ ಲವ್​ ಸೆಕ್ಸ್​ ದೋಖಾ ಆರೋಪ ಮಾಡಿದ್ದಾಳೆ. ಮದುವೆಯಾಗಬೇಕು ಎಂದರೆ ಮತಾಂತರವಾಗುವಂತೆ ಆರೋಪಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಆರೋಪಿ ಯುವಕನಿಗೆ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಕೂಡ ನಡೆದಿದ್ದು, ನನಗೆ ಮೋಸ ಆಗಿದೆ ಎಂದು ದೂರಿನಲ್ಲಿ ಯುವತಿ ಅಲವತ್ತುಕೊಂಡಿದ್ದಾಳೆ. ಈ ಬಗ್ಗೆ HSR ಲೇಔಟ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆ ಆಗಬೇಕಂದ್ರೆ ಮತಾಂತರವಾಗು: ಬೆಂಗಳೂರಲ್ಲಿ ಆಂಧ್ರ ಮೂಲದ ಯುವತಿಗೆ ಲವ್​ ಸೆಕ್ಸ್​ ದೋಖಾ?
ಆರೋಪಿ ಮೊಹಮ್ಮದ್ ಇಶಾಕ್
Shivaprasad B
| Updated By: ಪ್ರಸನ್ನ ಹೆಗಡೆ|

Updated on:Oct 23, 2025 | 12:44 PM

Share

ಬೆಂಗಳೂರು, ಅಕ್ಟೋಬರ್​ 23: ಪ್ರೀತಿಯ ಹೆಸರಲ್ಲಿ ಹಿಂದೂ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳಸಿ ಆಕೆ ಮತಾಂತರ ಆಗಲು ಒಪ್ಪದ ಹಿನ್ನಲೆ ಮದುವೆಗೆ ಮುಸ್ಲಿಂ ಯುವಕ ನಿರಾಕರಿಸಿರುವ ಆರೋಪ ಬೆಂಗಳೂರಲ್ಲಿ (Bengaluru) ಕೇಳಿಬಂದಿದೆ. ಈ ಬಗ್ಗೆ ಯುವತಿ HSR ಲೇಔಟ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಮಹಮ್ಮದ್ ಇಶಾಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನಿಗೆ ಈಗ ಬೇರೊಬ್ಬ ಯುವತಿ ಜೊತೆ ನಿಶ್ಚಿತಾರ್ಥ ನಡೆದಿದೆ ಎಂದು ಆರೋಪಿಸಲಾಗಿದ್ದು, ಪ್ರಕರಣವೀಗ ಲವ್​ ಜಿಹಾದ್​ ರೂಪ ಪಡೆದುಕೊಂಡಿದೆ.

ಯುವತಿ ನೀಡಿದ ದೂರಿನಲ್ಲಿ ಏನಿದೆ?

ಇನ್ಸ್ಟಾಗ್ರಾಂ ಮೂಲಕ ಮೊಹಮ್ಮದ್ ಇಶಾಕ್ ಬಿನ್ ಅಬ್ದುಲ್ ರಸೂಲ್ ಎಂಬಾತ ಯುವತಿಗೆ ಪರಿಚಯವಾಗಿದ್ದು, ಆ ಬಳಿಕ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಇದಾದ ಬಳಿಕ 2024ರ ಅಕ್ಟೋಬರ್​ 30ರಂದು ಬೆಂಗಳೂರಿನ ಧಣಿಸಂದ್ರದಲ್ಲಿರುವ ಎಲಿಮೆಂಟ್ಸ್ ಮಾಲ್ ಹತ್ತಿರ ಇಬ್ಬರೂ ಭೇಟಿಯಾಗಿದ್ದು, ಮದುವೆ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು. ಅಲ್ಲಿಂದ ಆತ ಯುವತಿಯನ್ನ ಖಾಸಗಿ ಲಾಡ್ಜ್​ ಗೆ ಕರೆದೊಯ್ದಿದ್ದು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಇದೇ ರೀತಿ ಇಬ್ಬರೂ ಹಲವುಬಾರಿ ಪರಸ್ಪರ ಲೈಂಗಿಕಕ್ರಿಯೆ ನಡೆಸಿದ್ದಾರೆ. ಆದರೆ ಮೊಹಮ್ಮದ್‌ ಇಶಾಕ್ ಹಲವು ಹುಡುಗಿಯರ ಜೊತೆಗೆ ಸಂಪರ್ಕದಲ್ಲಿ ಇರೋದು 2025ರ ಸೆಪ್ಟಂಬರ್​ ವೇಳೆಗೆ ಯುವತಿಗೆ ಗೊತ್ತಾಗಿದೆ. ಹೀಗಾಗಿ ಮದುವೆಯಾಗುವಂತೆ ಆತನನ್ನು ಕೇಳಿದ್ದಾಳೆ. ಆದರೆ ಆತ ನೆಪ ಹೇಳಿ ದಿನಗಳನ್ನು ಮುಂದೂಡುತ್ತಿದ್ದ. ಹೀಗಿರುವಾಗ ಆತನಿಗೆ ಬೇರೆ ಮುಸ್ಲಿಂ ಹುಡುಗಿ ಜೊತೆ ನಿಶ್ಚಿತಾರ್ಥ ನಡೆದಿದೆ. ಇದನ್ನು ಪ್ರಶ್ನಿಸಿದಾಗ ನಿನ್ನ ದಾರಿ ನೀನು ನೋಡಿಕೋ ಎಂದು ಆತ ಯುವತಿಗೆ ಹೇಳಿದ್ದಾನೆ. ನನ್ನ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಡಾ.ಕೃತಿಕಾರೆಡ್ಡಿ ಕೊಲೆ ಕೇಸ್​: ತಪ್ಪೊಪ್ಪಿಕೊಂಡ ಪತಿ; ಮಹೇಂದ್ರರೆಡ್ಡಿ ಪ್ಲ್ಯಾನ್​ ಹೇಗಿತ್ತು?

‘ಮತಾಂತರಕ್ಕೆ ಒತ್ತಡ’

ಇದೇ ವಿಚಾರವಾಗಿ ಸಂತ್ರಸ್ತ ಯುವತಿ ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದು, ಈ ವೇಳೆ ಇಶಾಕ್​ ಕುಟುಂಬದವರು ಕರೆಮಾಡಿದ್ದರು ಎನ್ನಲಾಗಿದೆ. ಸೂಸೈಡ್​, ಕೇಸ್​ ಮಾಡುವಂತಹ ನಿರ್ಧಾರ ಬೇಡ. ಮಾತಾಡಿ ಎಲ್ಲವನ್ನೂ ಬಗೆಹರಿಸಿಕೊಳ್ಳೋಣ ಎಂದಿದ್ದರು. ಇಶಾಕ್ ಅಣ್ಣ, ಭಾವ ಬಂದು ಮದುವೆ ಆಗಬೇಕಂದರೆ ನೀನು ಕನ್ವರ್ಟ್​ ಆಗಬೇಕು. 40 ದಿನ ಸಮಯಾವಕಾಶ ಇರಲಿದ್ದು, ನಮಾಜ್​ ಮಾಡಲು ಕೂಡ ಕಲಿಯಬೇಕು. ಮೊದಲು ಮತಾಂತರ ಆಗು, ಆ ಬಳಿಕ ಮದುವೆ ಬಗ್ಗೆ ಮಾತಾಡೋಣ ಎಂದಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:44 pm, Thu, 23 October 25