ಬಯೋಮೆಟ್ರಿಕ್ ಸ್ಲ್ಯಾನ್ ಬಳಸಿ ವಂಚಿಸುತ್ತಿದ್ದ ಬೃಹತ್ ಜಾಲ ಪತ್ತೆ, ಪೊಲೀಸ್ ಕಮಿಷನರ್ ದಯಾನಂದ್ ಹೇಳಿದ್ದೇನು?
ಸೈಬರ್ ವಂಚಕರು ಸಂತ್ರಸ್ತರ ಗಮನಕ್ಕೆ ಬಾರದ ರೀತಿ ಖಾತೆಗೆ ಕನ್ನ ಹಾಕುತ್ತಿದ್ದ ಜಾಲ ಪತ್ತೆಯಾಗಿದೆ. ಸೈಬರ್ ವಂಚನೆಯಲ್ಲಿ ಬಯೋಮೆಟ್ರಿಕ್ ಸ್ಲ್ಯಾನ್ ಬಳಸಿ ಮಹಾ ವಂಚನೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಅವರು ತಿಳಿಸಿದ್ದಾರೆ. ಬಯೋಮೆಟ್ರಿಕ್ ಸ್ಲ್ಯಾನ್ ಬಳಸಿ ವಂಚಿಸುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದೆ.
ಬೆಂಗಳೂರು, ಅ.31: ಬಯೋಮೆಟ್ರಿಕ್ ಸ್ಲ್ಯಾನ್ (Biometric Scan) ಬಳಸಿ ವಂಚಿಸುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದೆ. ವಂಚಕರು ಗ್ರಾಹಕರ ಗಮನಕ್ಕೆ ಬಾರದೆ ಖಾತೆಯಲ್ಲಿ ಹಣ ಕದಿಯುತ್ತಿದ್ದರು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ (Police Commissioner Dayanand) ಅವರು ಮಾಹಿತಿ ನೀಡಿದ್ದಾರೆ. ಆಧಾರ್, ಬಯೋಮೆಟ್ರಿಕ್ ಆಧಾರದಲ್ಲಿ ಹಣ ಡ್ರಾ ಮಾಡಬಹುದು. ಇದೇ ತಂತ್ರಜ್ಞಾನವನ್ನ ಬಳಸಿ ಖಾತೆಗಳಲ್ಲಿ ಹಣ ದೋಚುತ್ತಿದ್ದ ತಂಡ ಪತ್ತೆಯಾಗಿದೆ. ವಂಚಕರು ಸರ್ಕಾರದ ಈ ತಂತ್ರಜ್ಞಾನ ಕದ್ದು ಅಚ್ಚು ತಯಾರಿಸಿದ್ದರು. ಮೈಕ್ರೋ ಎಟಿಎಂ ಮೂಲಕ ಅಕ್ರಮವಾಗಿ ಹಣ ಡ್ರಾ ಮಾಡಿದ್ದರು. ಕಾವೇರಿ ವೆಬ್ಸೈಟ್ ಮೂಲಕ ಎಇಪಿಎಸ್ ಸಾಧನ ಬಳಸಿ ವಂಚನೆ ಮಾಡ್ತಿದ್ದರು. ಸದ್ಯ ವಂಚಕರನ್ನು ಅರೆಸ್ಟ್ ಮಾಡಿ ಹಣ, ಕೃತ್ಯಕ್ಕೆ ಬಳಸಿದ್ದ ಸಲಕರಣೆ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು, ಸೈಬರ್ ವಂಚಕರು ಸಂತ್ರಸ್ತರ ಗಮನಕ್ಕೆ ಬಾರದ ರೀತಿ ಖಾತೆಗೆ ಕನ್ನ ಹಾಕುತ್ತಿದ್ದ ಜಾಲ ಪತ್ತೆಯಾಗಿದೆ. ಸೈಬರ್ ವಂಚನೆಯಲ್ಲಿ ಬಯೋಮೆಟ್ರಿಕ್ ಸ್ಲ್ಯಾನ್ ಬಳಸಿ ಮಹಾ ವಂಚನೆ ಮಾಡಲಾಗುತ್ತಿದೆ. ಸರ್ಕಾರ ಆಧಾರ್ ಎನೆಬಲ್ ಪೇಮೆಂಟ್ ಸೇವೆ ಜಾರಿ ಮಾಡಿದೆ. ಆಧಾರ್ ಮತ್ತು ಬಯೋಮೆಟ್ರಿಕ್ ಆಧಾರದಲ್ಲಿ ಹಣ ಡ್ರಾ ಮಾಡಬಹುದು. ಆದರೇ ಇದರದ್ದೆ ತಾಂತ್ರಿಕ ವಿಚಾರ ದುರುದ್ದೇಶಕ್ಕೆ ಬಳಕೆಯಾಗುತ್ತಿದೆ. ಸರ್ಕಾರದ ರೆಕಾರ್ಡ್ ನ್ನು ಡೌನ್ ಲೋಡ್ ಮಾಡಿಕೊಂಡು ಅಚ್ಚನ್ನು ತಯಾರಿಸಿ ಹಣ ಡ್ರಾ ಮಾಡುತಿದ್ದಾರೆ ಎಂದರು.
ಇದನ್ನೂ ಓದಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು, ಕಾರಣವೇನು?
ಮೈಕ್ರೋ ಎಟಿಎಂ ಮುಖಾಂತರ 10 ಸಾವಿರದಂತೆ ಹಣ ಡ್ರಾ ಮಾಡಿಕೊಂಡು ವಂಚಿಸಿದ್ದಾರೆ. ಈ ರೀತಿ ಹಣ ಕಳೆದುಕೊಂಡವರು 100ಕ್ಕೂ ಅಧಿಕ ಮಂದಿ ಇದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಮಾಡಲಾಗಿದೆ. ಈಶಾನ್ಯ ಪೊಲೀಸರು ಬಿಹಾರ ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಹಣ, ಕೃತ್ಯಕ್ಕೆ ಬಳಸಿದ್ದ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ. ಸರ್ಕಾರದ ಕಾವೇರಿ ವೆಬ್ ಸೈಟ್ ಮುಖಾಂತರ ಎಇಪಿಎಸ್ ಸಾಧನ ಬಳಸಿ ಸಾರ್ವಜನಿಕರ ಖಾತೆಗೆ ಕನ್ನ ಹಾಕಲಾಗುತ್ತಿತ್ತು. ಸದ್ಯ ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಮಾನವಕಳ್ಳ ಸಾಗಣೆ, 14 ಆರೋಪಿಗಳು ಅರೆಸ್ಟ್
ಅಡ್ಮೀಷನ್ ಸಮಯ ಇದು. ಈ ವೇಳೆ ಹಲವು ವಂಚನೆ ನಡೆಯುವ ಸಾಧ್ಯತೆ ಇದೆ. ಇದೆ ಮಾದರಿ ಸಂಜಯ್ ನಗರದಲ್ಲಿ ವಂಚನೆ ಮಾಡಿದ್ದ ಆರೋಪಿ ಬಂಧಿಸಲಾಗಿದೆ. ಪ್ರತಿಷ್ಠಿತ ಕಾಲೇಜಿನಲಿ ಎಂಬಿಎ ಮಾಡಿದ್ದ ಆರೋಪಿ, ಬಳಿಕ ತನ್ನದೇ ಕಂಪನಿ ತೆರೆದು ಸೀಟ್ ಕೊಡಿಸುವುದಾಗಿ ವಂಚನೆ ಮಾಡಿದ್ದಾನೆ. ಆರೋಪಿ ಬಂಧಿಸಿ ಹಣ ವಶಕ್ಕೆ ಪಡೆಯಲಾಗಿದೆ. ಮಾನವಕಳ್ಳ ಸಾಗಣೆ ಸಂಬಂಧ ಸಿಸಿಬಿಯಿಂದ ಕಾರ್ಯಾಚರಣೆ ಮಾಡಲಾಗಿದೆ. 14 ಆರೋಪಿಗಳನ್ನು ಬಂಧಿಸಲಾಗಿದೆ. 20 ಮಂದಿ ನೊಂದ ಮಹಿಳೆಯರನ್ನು ರಕ್ಷಿಸಲಾಗಿದೆ. ರಕ್ಷಣೆಗೊಳಗಾದ ಮಹಿಳೆಯರಲ್ಲಿ 4 ಮಂದಿ ವಿದೇಶಿ ಮಹಿಳೆಯರು ಇದ್ದಾರೆ ಎಂದು ತಿಳಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ