ಬೆಂಗಳೂರಿನಲ್ಲಿ ಮಾರಾಟಕ್ಕಿಟ್ಟಿದ್ದ ಗಣಪತಿ ಮೂರ್ತಿಗೆ ಡಿಕ್ಕಿ ಹೊಡೆದ ಟಿಪ್ಪರ್; ತಪ್ಪಿದ ಅನಾಹುತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 29, 2024 | 4:20 PM

ನಿಂತಿದ್ದ ಟಿಪ್ಪರ್ ಲಾರಿ ಚಲಿಸಿ ಒಂದು ಲೈಟ್ ಕಂಬ ಹಾಗೂ ರಸ್ತೆ ಬದಿ ಮಾರಾಟಕ್ಕೆ ಇಟ್ಟಿದ್ದ ಗಣಪತಿ ಮೂರ್ತಿಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್(Wilson Garden)​ನಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ವಾಹನ ಓಡಾಟ ಇಲ್ಲದಿರುವುದರಿಂದ ಅನಾಹುತ ತಪ್ಪಿದೆ.

ಬೆಂಗಳೂರಿನಲ್ಲಿ ಮಾರಾಟಕ್ಕಿಟ್ಟಿದ್ದ ಗಣಪತಿ ಮೂರ್ತಿಗೆ ಡಿಕ್ಕಿ ಹೊಡೆದ ಟಿಪ್ಪರ್; ತಪ್ಪಿದ ಅನಾಹುತ
ಬೆಂಗಳೂರಿನಲ್ಲಿ ಮಾರಾಟಕ್ಕಿಟ್ಟಿದ್ದ ಗಣಪತಿ ಮೂರ್ತಿಗೆ ಡಿಕ್ಕಿ ಹೊಡೆದ ಟಿಪ್ಪರ್
Follow us on

ಬೆಂಗಳೂರು, ಸೆ.29: ನಗರದ ವಿಲ್ಸನ್ ಗಾರ್ಡನ್(Wilson Garden)​ನಲ್ಲಿ ನಿಂತಿದ್ದ ಟಿಪ್ಪರ್ ಲಾರಿ ಚಲಿಸಿ ಒಂದು ಲೈಟ್ ಕಂಬ ಹಾಗೂ ರಸ್ತೆ ಬದಿ ಮಾರಾಟಕ್ಕೆ ಇಟ್ಟಿದ್ದ ಗಣಪತಿ ಮೂರ್ತಿಗೆ ಡಿಕ್ಕಿ ಹೊಡೆದಿದೆ. ಹೌದು, ರಾತ್ರಿ 1.30 ಸುಮಾರಿಗೆ ಟಿಪ್ಪರ್ ಲಾರಿ ಚಾಲಕ, ಜಲ್ಲಿ ಕಲ್ಲು ಅನ್ ಲೋಡ್ ಮಾಡಲು ಟಿಪ್ಪರ್ ನಿಲ್ಲಿಸಿ ಜಲ್ಲಿ ಕಲ್ಲಿನ ಫೋಟೋ ತೆಗೆದುಕೊಳ್ಳುತ್ತಿದ್ದ , ಈ ವೇಳೆ ಬ್ರೇಕ್ ಫೇಲ್ ಆಗಿ ಟಿಪ್ಪರ್ ಏಕಾಏಕಿ ಚಲಿಸಿದ್ದು, ರಸ್ತೆ ದಾಟಿ ಎದುರುಗಡೆಗೆ ಹೋಗಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ವಾಹನ ಓಡಾಟ ಇಲ್ಲದಿರುವುದರಿಂದ ಅನಾಹುತ ತಪ್ಪಿದೆ.

ಇದೀಗ  ಲೈಟ್ ಕಂಬವನ್ನು ಬೆಸ್ಕಾಂ ಸಿಬ್ಬಂದಿ ತೆರವು ಗೊಳಿಸಿದ್ದು, ಸ್ಥಳಕ್ಕೆ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ಕುರಿತು ಮಾತನಾಡಿದ ಗಣೇಶ ವ್ಯಾಪಾರಸ್ಥ ಚೇತನ್ ಕುಮಾರ್, ‘ ಇದು ರಾತ್ರಿ 1 ಗಂಟೆಗೆ ನಡೆದಿದೆ. ಚಾಲಕ ಅದಾಗೆ ಬಂದುಬಿಡ್ತು ಎನ್ನುತ್ತಿದ್ದಾರೆ. ಗಣೇಶ ಮೂರ್ತಿಗೆ ಡ್ಯಾಮೆಜ್ ಆಗಿದೆ. ಈ ಗಣೇಶ ಮೂರ್ತಿಗೆ 75 ಸಾವಿರ ರೂಪಾಯಿ ಕೊಟ್ಟು ಬುಕಿಂಗ್ ಕೂಡ ಆಗಿದೆ. ಇವತ್ತು ಸಂಜೆಗೆ ತಗೊಂಡು ಹೋಗುತ್ತಿದ್ದರು. ಅಷ್ಟರಲ್ಲಿ ಮಧ್ಯರಾತ್ರಿ ಈ ರೀತಿಯಾಗಿದೆ. ಈ ಕುರಿತು ದೂರು ದಾಖಲು ಮಾಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆ: ನಿದ್ದೆ ಮಂಪರಿನಿಂದ ಕ್ಯಾಂಟರ್​ಗೆ ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರ ಸಾವು

ಪಂಪ್​ಸೆಟ್​ ದುರಸ್ತಿ ವೇಳೆ ವಿದ್ಯುತ್​ ಪ್ರವಹಿಸಿ ವ್ಯಕ್ತಿ ದುರ್ಮರಣ

ರಾಯಚೂರು: ಜಿಲ್ಲೆಯ ಲಿಂಗಸಗೂರು ತಾಲೂಕಿನ ಮರಳಿ ಗ್ರಾಮದಲ್ಲಿ ಪಂಪ್ ಸೆಟ್ ದುರಸ್ತಿ ವೇಳೆ ಕರೆಂಟ್ ಶಾಕ್ ಹೊಡೆದು 33 ವರ್ಷದ ನಾಗಲಾಪುರ ಗ್ರಾಮದ ನಿವಾಸಿ ಶಿವು ಎಂಬಾತ ಸಾವನ್ನಪ್ಪಿದ್ದಾನೆ. ಟ್ರಾಕ್ಟರ್​ನ ಹೈಡ್ರಾಲಿಕ್ ಡಿಪ್ಪರ್ ಮೂಲಕ ಪಂಪ್ ಸೆಟ್ ದುರಸ್ತಿ ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್​ಗೆ ಅಳವಡಿಸಲಾಗಿದ್ದ ಡಿಪ್ಪರ್ ಮೈನ್ ಲೈನ್ ತಾಗಿ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ