AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಟ್ರಾಫಿಕ್ ನನ್ನನ್ನು ಆರೋಗ್ಯವಂತನನ್ನಾಗಿ ಮಾಡಿದೆ: 8 ಕೆಜಿ ತೂಕ ಇಳಿಸಿಕೊಂಡ ಟೆಕ್ಕಿ

ಬೆಂಗಳೂರು ಟ್ರಾಫಿಕ್‌ನಿಂದ ಬೇಸತ್ತ ಟೆಕ್ ಉದ್ಯೋಗಿಯೊಬ್ಬರು ತಮ್ಮ ಅನಾರೋಗ್ಯಕರ ಜೀವನಶೈಲಿಯನ್ನು ಬದಲಾಯಿಸಿಕೊಂಡು ಆರೋಗ್ಯವಂತರಾದ ಕಥೆ ವೈರಲ್ ಆಗಿದೆ. ನಿತ್ಯ 90 ನಿಮಿಷಗಳ ಪ್ರಯಾಣ, ಒತ್ತಡ, ವ್ಯಾಯಾಮದ ಕೊರತೆಯಿಂದ ಬಳಲುತ್ತಿದ್ದ ಇವರು ವರ್ಕ್ ಫ್ರಮ್ ಹೋಮ್, ನಡೆದುಕೊಂಡು ಹೋಗಿ ಊಟ ಮಾಡುವುದು, ಜಿಮ್ ಸೇರುವ ಮೂಲಕ 8 ಕೆಜಿ ತೂಕ ಇಳಿಸಿ, ಹೃದಯ ಬಡಿತ ಸುಧಾರಿಸಿಕೊಂಡಿದ್ದಾರೆ. ಆದರೆ, ಆರೋಗ್ಯ ಸುಧಾರಣೆಗೆ ಟ್ರಾಫಿಕ್ ಕಾರಣವೋ ಅಥವಾ ಜೀವನಶೈಲಿಯ ಬದಲಾವಣೆಯೋ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಟ್ರಾಫಿಕ್ ನನ್ನನ್ನು ಆರೋಗ್ಯವಂತನನ್ನಾಗಿ ಮಾಡಿದೆ: 8 ಕೆಜಿ ತೂಕ ಇಳಿಸಿಕೊಂಡ ಟೆಕ್ಕಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Jan 23, 2026 | 4:25 PM

Share

ಬೆಂಗಳೂರು, ಜ.23: ಜನದಟ್ಟಣೆಗೆ ವಿಶ್ವಪ್ರಸಿದ್ಧಯನ್ನು ಪಡೆದಿರುವ ಬೆಂಗಳೂರು ಟ್ರಾಫಿಕ್ (Bengaluru traffic health)​​​​​​ ಅನೇಕರಿಗೆ ಕಿರಿಕಿರಿಯನ್ನು ಉಂಟು ಮಾಡಿದ್ರೆ, ಈ ವ್ಯಕ್ತಿಯನ್ನು ಮಾತ್ರ ಆರೋಗ್ಯವಂತನಾಗಿ ಮಾಡಿದೆ ಎಂದು ಹೇಳಿದ್ದಾರೆ. ಜೀವನದಲ್ಲಿ ಆಗುವ ನಕಾರಾತ್ಮಕ ವಿಚಾರಗಳ ಬಗ್ಗೆ ತುಂಬಾ ತಲೆಬಿಸಿ ಮಾಡಿಕೊಳ್ಳಬಾರದು. ಅಂತಹ ವಿಷಯಗಳಿಂದ ಹೊಸ ದಾರಿಯನ್ನು ಕಂಡುಕೊಳ್ಳಬೇಕು ಎಂಬುದಕ್ಕೆ ಈ ವ್ಯಕ್ತಿ ಉದಾಹರಣೆ ನೋಡಿ.  ಟ್ರಾಫಿಕ್‌ ತನ್ನನ್ನು ಆರೋಗ್ಯವಂತನನ್ನಾಗಿ ಮಾಡಿದೆ ಎಂದು ಈ ವ್ಯಕ್ತಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಟೆಕ್ ಉದ್ಯೋಗಿ ಆಗಿರುವ ಇವರು, ವೈಟ್‌ಫೀಲ್ಡ್‌ನಿಂದ ಕೋರಮಂಗಲಕ್ಕೆ ದಿನನಿತ್ಯ 90 ನಿಮಿಷಗಳ ಕಾಲ ಟ್ರಾಫಿಕ್​ ಮಧ್ಯೆ ಪ್ರಯಣ ಮಾಡುತ್ತಾರೆ. ಇದರಿಂದ ಬೇಸತ್ತು ಟ್ರಾಫಿಕ್ ವಿರುದ್ಧ ಹೋರಾಟ ನಿಲ್ಲಿಸಿ ತಮ್ಮ ಜೀವನಶೈಲಿಯನ್ನೇ ಬದಲಾಯಿಸಿದ್ದಾರೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇದೊಂದು ಒಳ್ಳೆಯ ದಾರಿ ಎಂದು ನೆಟ್ಟಿಗರು ಹೇಳಿದ್ದಾರೆ.

ಬೆಂಗಳೂರಿನ ಟ್ರಾಫಿಕ್ ನನ್ನನ್ನು ನಿಜವಾಗಿಯೂ ಆರೋಗ್ಯವಂತರನ್ನಾಗಿ ಮಾಡಿದೆ ಎಂದು ತಾವು ಹಂಚಿಕೊಂಡಿರುವ ಪೋಸ್ಟ್​​​ನಲ್ಲಿ ಹೇಳಿದ್ದಾರೆ. “ನಾನು ವೈಟ್‌ಫೀಲ್ಡ್‌ನಿಂದ ಕೋರಮಂಗಲಕ್ಕೆ ಪ್ರತಿದಿನ ಪ್ರಯಾಣಿಸುತ್ತೇನೆ. ಈ ಮಾರ್ಗದಲ್ಲಿ ಹೋಗಬೇಕಾದರೆ 90 ನಿಮಿಷ ಬೇಕಾಗುತ್ತಿತ್ತು. ಇದರಿಂದ ನಿರಂತರ ಒತ್ತಡ, ಊಟ ಕೂಡ ಸರಿಯಾಗಿ ಮಾಡುತ್ತಿರಲಿಲ್ಲ, ವ್ಯಾಯಾಮಕ್ಕೂ ಕೂಡ ಸಮಯವೇ ಇರಲಿಲ್ಲ. ಈ ಅನಾರೋಗ್ಯಕರ ಜೀವನಶೈಲಿಯಿಂದ ಬೇಸತ್ತು. ವಾರದಲ್ಲಿ ಮೂರು ದಿನ ಮನೆಯಿಂದಲೇ ಕೆಲಸ (WFH) ಮಾಡಲು ನಿರ್ಧರಿಸಿದೆ.  ಡೆಲಿವರಿ ಆರ್ಡರ್ ಮಾಡುವ ಬದಲು ಹತ್ತಿರದ ರೆಸ್ಟೋರೆಂಟ್‌ಗಳಿಗೆ ನಡೆದುಕೊಂಡು ಹೋಗಿ ಊಟ ಮಾಡಲಾರಂಭಿಸಿದೆ. ಜೊತೆಗೆ, ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಮನೆಯ ಸಮೀಪದ ಜಿಮ್‌ಗೆ ಹೋಗುವ ಅಭ್ಯಾಸವನ್ನು ಕೂಡ ಬೆಳೆಸಿಕೊಂಡೆ. ಈ ರೀತಿಯ ಜೀವನಶೈಲಿಯಿಂದ ನನ್ನ ಆರೋಗ್ಯದಲ್ಲಿ ಬದಲಾವಣೆ ಆಗಿದೆ. ಆದರೆ ಟ್ರಾಫಿಕ್ ಸುಧಾರಿಸಲಿಲ್ಲ, ಅದರ ವಿರುದ್ಧ ಹೋರಾಡುವುದನ್ನು ನಿಲ್ಲಿಸಿ, ನಮ್ಮ ಆರೋಗ್ಯದ ಬಗ್ಗೆ ಗಮನ ನೀಡಿದೆ. ನನ್ನ ಈ ಜೀವನಶೈಲಿಯಿಂದ ಹೃದಯ ಬಡಿತ 82ರಿಂದ 64ಕ್ಕೆ ಇಳಿದಿದೆ. ಯಾವುದೇ ವಿಶೇಷ ಪ್ರಯತ್ನವಿಲ್ಲದೆ 8 ಕೆಜಿ ತೂಕವೂ ಕಡಿಮೆ ಮಾಡಿಕೊಂಡಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರೇ 3 ದಿನದ ರಜೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು: KSTDCನಿಂದ ವಿಶೇಷ ಪ್ಯಾಕೇಜ್

ಇಲ್ಲಿದೆ ನೋಡಿ ವೈರಲ್​​ ಪೋಸ್ಟ್​:

Beat Bengaluru Traffic

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಈ ಬಗ್ಗೆ ಹಲವು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ನಿಮ್ಮ ಈ ಬದಲಾವಣೆಗೆ ಟ್ರಾಫಿಕ್ ಕಾರಣವಲ್ಲ, ವರ್ಕ್ ಫ್ರಮ್ ಹೋಮ್ ಮತ್ತು ಜೀವನಶೈಲಿ ಬದಲಾವಣೆಯೇ ಆರೋಗ್ಯ ಸುಧಾರಣೆಗೆ ಕಾರಣ ಎಂದು ಹೇಳಿದ್ದಾರೆ. ಟ್ರಾಫಿಕ್ ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡಲಿಲ್ಲ ವರ್ಕ್ ಫ್ರಮ್ ಹೋಮ್ ನಿಮ್ಮ ಆರೋಗ್ಯವನ್ನು ಬದಲಾವಣೆ ಮಾಡಿದೆ. ನಿಮ್ಮ ಆಹಾರ ಪದ್ಧತಿ, ಹಾಗೂ ಜಿಮ್​​​ ಮಾಡಲು ಸಮಯ ಸಿಕ್ಕಿದೆ. ಆ ಕಾರಣ ಈ ಬದಲಾವಣೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ನಾನು ನನ್ನ ಬೈಕ್ ಮಾರಿದ್ದೇನೆ. ಈಗ ಎಲ್ಲೆಡೆ ನಡೆದುಕೊಂಡೇ ಹೋಗುತ್ತೇನೆ. ನನ್ನ ಕೊಲೆಸ್ಟ್ರಾಲ್ ಮಟ್ಟಗಳು ಸಹಜ ಸ್ಥಿತಿಗೆ ಬಂದಿವೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
ಹವಾಮಾನ ಇಲಾಖೆಯ ಯಾವ ಅಲರ್ಟ್ ಏನನ್ನು ಸೂಚಿಸುತ್ತೆ?
ಹವಾಮಾನ ಇಲಾಖೆಯ ಯಾವ ಅಲರ್ಟ್ ಏನನ್ನು ಸೂಚಿಸುತ್ತೆ?
ಯುವ ರೈತ ಚೇತನ್ ನಟನೆಯ ‘ದೇವಿ’ ಸಿನಿಮಾಗೆ ಸಿಕ್ತು ಹಿರಿಯರ ಆಶೀರ್ವಾದ
ಯುವ ರೈತ ಚೇತನ್ ನಟನೆಯ ‘ದೇವಿ’ ಸಿನಿಮಾಗೆ ಸಿಕ್ತು ಹಿರಿಯರ ಆಶೀರ್ವಾದ
ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ
ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಅಮಿತ್ ಶಾ