Ugramm Manju Marriage: ಸಂಧ್ಯಾ ಜೊತೆ ಮದುವೆ ಆದ ಉಗ್ರಂ ಮಂಜು; ಇಲ್ಲಿದೆ ಸುಂದರ ಆಲ್ಬಂ
ಉಗ್ರಂ ಮಂಜು-ಸಂಧ್ಯಾ ವಿವಾಹ ಫೋಟೋಗಳು: ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಉಗ್ರಂ ಮಂಜು ಅವರು ಮದುವೆ ಆಗಿದ್ದಾರೆ. ಸಂಧ್ಯಾ ಜೊತೆ ಅವರು ಹೊಸ ಬಾಳು ಆರಂಭಿಸಿದ್ದಾರೆ. ಈ ಸಂದರ್ಭದ ಫೋಟೋಗಳು ಗಮನ ಸೆಳೆದಿವೆ. ಅವರ ವಿವಾಹದ ಆಲ್ಬಂ ಇಲ್ಲಿದೆ ನೋಡಿ.
Updated on:Jan 23, 2026 | 1:33 PM

ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಉಗ್ರಂ ಮಂಜುಗೆ ಇಂದು (ಜನವರಿ 23) ವಿವಾಹ ಸಂಭ್ರಮ. ಅವರ ಮದುವೆ ಧರ್ಮಸ್ಥಳದಲ್ಲಿ ಸರಳವಾಗಿ ನಡೆದಿದೆ. ಸಂಧ್ಯಾ ಜೊತೆ ಅವರು ಹಸೆಮಣೆ ಏರಿದ್ದಾರೆ.

ಮಂಜು ಅವರು ಬಿಗ್ ಬಾಸ್ಗೆ ಬರೋದಕ್ಕೂ ಮೊದಲು ಅವರ ಜೀವನ ಶೈಲಿ ಬೇರೆ ಇತ್ತು. ಬಿಗ್ ಬಾಸ್ ಬಳಿಕ ಅವರ ಜೀವನ ಶೈಲಿ ಬದಲಾಯಿತು. ಈಗ ಮದುವೆ ಆಗಿ ಹೊಸ ಬಾಳು ಆರಂಭಿಸುತ್ತಿದ್ದಾರೆ. ಅವರಿಗೆ ಎಲ್ಲರೂ ಶುಭಕೋರಿದ್ದಾರೆ.

ಧರ್ಮಸ್ಥಳದಲ್ಲಿ ಮಂಜು ಹಾಗೂ ಸಂಧ್ಯಾ ಮದುವೆ ನಡೆದಿದೆ. ಆಪ್ತರು ಹಾಗೂ ಕುಟುಂಬದವರು ಮಾತ್ರ ಮದುವೆಗೆ ಹಾಜರಿ ಹಾಕಿದ್ದರು. ಪ್ರಮೋದ್ ಶೆಟ್ಟಿ ಸೇರಿದಂತೆ ಚಿತ್ರರಂಗದ ಅನೇಕರು ಮದುವೆಗೆ ಹಾಜರಿ ಹಾಕಿದ್ದರು.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಬೇರೆ ಕಡೆ ಮದುವೆ ಆದರೆ ಬೆಂಗಳೂರಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ನಡೆಸುತ್ತಾರೆ. ಮಂಜು ಕೂಡ ಹಾಗೆಯೇ ಮಾಡಬಹುದು ಎಂದು ಹೇಳಲಾಗುತ್ತಾ ಇದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಉಗ್ರಂ ಮಂಜು ಅವರಿಗೆ ಸುದೀಪ್ ಜೊತೆ ಒಳ್ಳೆಯ ಒಡನಾಟ ಇದೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ಆ ಬಳಿಕ ಬಿಗ್ ಬಾಸ್ಗೆ ಬಂದರು ಮಂಜು. ಸುದೀಪ್ ಅವರನ್ನು ಕೂಡ ಮದುವೆಗೆ ಕರೆದಿದ್ದರು ಎನ್ನಲಾಗಿದೆ. ವಿವಾಹದ ಬಳಿಕ ಸಿಕ್ಕಿ ಇವರು ಸುದೀಪ್ ಆಶೀರ್ವಾದ ಪಡೆಯಬಹುದು.
Published On - 12:32 pm, Fri, 23 January 26




