ಪ್ರಬುದ್ಧ ಯೋಜನೆಗೆ ಕತ್ತರಿ; ಪರಿಶಿಷ್ಟರ ಕನಸಿಗೆ ಕಲ್ಲು ಹಾಕಿದ ಸರ್ಕಾರದ ವಿರುದ್ದ ಬಿವೈ ವಿಜಯೇಂದ್ರ ಆಕ್ರೋಶ

|

Updated on: Jul 20, 2024 | 7:43 PM

ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್​ಡಿ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದ ಎಸ್.ಸಿ-ಎಸ್.ಟಿ ಸಮುದಾಯಗಳ ಸಂಶೋಧನಾ ವಿದ್ಯಾರ್ಥಿಗಳಿಗೆ 'ಪ್ರಬುದ್ಧ' ಯೋಜನೆ ಅಡಿ ನೀಡುತ್ತಿದ್ದ ಸಹಾಯಧನವನ್ನೇ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ, ಪರಿಶಿಷ್ಟ ಸಮುದಾಯಗಳ ವಿರೋಧಿ ಎಂಬುದು ಬಹಿರಂಗವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಪ್ರಬುದ್ಧ ಯೋಜನೆಗೆ ಕತ್ತರಿ; ಪರಿಶಿಷ್ಟರ ಕನಸಿಗೆ ಕಲ್ಲು ಹಾಕಿದ ಸರ್ಕಾರದ ವಿರುದ್ದ ಬಿವೈ ವಿಜಯೇಂದ್ರ ಆಕ್ರೋಶ
ಸರ್ಕಾರದ ವಿರುದ್ದ ಬಿವೈ ವಿಜಯೇಂದ್ರ ಆಕ್ರೋಶ
Follow us on

ಬೆಂಗಳೂರು, ಜು.20: ಪರಿಶಿಷ್ಟ ಜಾತಿ ಮತ್ತು ಪಂಗಡದ ಪಿ.ಹೆಚ್.ಡಿ(P.H.D) ಪಡೆಯುವ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಸಮಾಜ ಕಲ್ಯಾಣ ಇಲಾಖೆಯು  ‘ಪ್ರಬುದ್ಧ’ ಯೋಜನೆಯಡಿ ನೀಡುತ್ತಿದ್ದ ಸಹಾಯಧನವನ್ನು ಸರ್ಕಾರ ರದ್ದುಪಡಿಸಿದೆ. ಈ ಹಿನ್ನಲೆ ಕಿಡಿಕಾರಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) “ಪ್ರಬುದ್ಧ ಯೋಜನೆಯಲ್ಲಿ ಪಿ.ಹೆಚ್.ಡಿ ಪಡೆಯುವ ಪರಿಶಿಷ್ಟರ ಕನಸಿಗೆ ಸರ್ಕಾರ ಕಲ್ಲು ಹಾಕಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ​ ಕಾಂಗ್ರೆಸ್​ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

‘ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್​ಡಿ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದ ಎಸ್.ಸಿ-ಎಸ್.ಟಿ ಸಮುದಾಯಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ‘ಪ್ರಬುದ್ಧ’ ಯೋಜನೆ ಅಡಿ ನೀಡುತ್ತಿದ್ದ ಸಹಾಯಧನವನ್ನೇ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದೆ. ಇವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಕೊಳ್ಳೆ ಹೊಡೆದು, ಪರಿಶಿಷ್ಟ ಜಾತಿ, ಸಮುದಾಯಗಳ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಹಣವನ್ನೆಲ್ಲಾ ಅನ್ಯ ಕಾರ್ಯಕ್ಕೆ ಬಳಸಿಕೊಂಡು, ಇದೀಗ ಈ ಶೋಷಿತ ಸಮುದಾಯಗಳ ವಿದ್ಯಾರ್ಥಿಗಳು ಹೊರ ದೇಶದಲ್ಲಿ ಪಿ.ಹೆಚ್.ಡಿ ಮಾಡುವ ಅವಕಾಶಕ್ಕೂ ತಿಲಾಂಜಲಿ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಸಮುದಾಯಗಳ ವಿರೋಧಿ ಎಂಬುದು ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗೆ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ‌ಹಣ ಬಳಸುತ್ತಿರುವುದಕ್ಕೆ ವಿರೋಧವಿದೆ ಎಂದ ಮಾವಳ್ಳಿ ಶಂಕರ್

ಬಿವೈ ವಿಜಯೇಂದ್ರ ಟ್ವೀಟ್​

ಇನ್ನು ಈ ಕುರಿತು ಆದೇಶಿಸಿರುವ ಇಲಾಖೆ, ‘ಪಿ.ಎಚ್.ಡಿಯ ಒಬ್ಬ ಅಭ್ಯರ್ಥಿಗೆ ನೀಡುವ ಸಹಾಯಧನದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುವ ಕನಿಷ್ಠ ಇಬ್ಬರು ಅಥವಾ ಮೂವರು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬಹುದು’ ಎಂದು ಉಲ್ಲೇಖಿಸಿದೆ. ತಳ ಸಮುದಾಯದ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಿಸುವಷ್ಟು ಸಬಲರಾಗಿಲ್ಲ, ಹೀಗಾಗಿ ಸರ್ಕಾರದಿಂದ ಬರುತ್ತಿದ್ದ ಸಹಾಯಧನವನ್ನು ಪಡೆದು, ಅವರು ಕಂಡಂತಹ ಕನಸನ್ನು ಈಡೇರಿಸಿಕೊಳ್ಳುತ್ತಿದ್ದರು. ಇದೀಗ ಸರ್ಕಾರ ಅದಕ್ಕೂ ಕಲ್ಲು ಹಾಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ