ಬಳ್ಳಾರಿ ರಸ್ತೆ, ಮೇಖ್ರಿ ವೃತ್ತದಿಂದ ಎಂವಿಐಟಿ ಕ್ರಾಸ್‌ವರೆಗೆ ಭಾರಿ ವಾಹನ, ಖಾಸಗಿ ಬಸ್ ಸಂಚಾರ ನಿಷೇಧ
ಏರೋ ಇಂಡಿಯಾ 2025 ರ ವೈಮಾನಿಕ ಪ್ರದರ್ಶನಕ್ಕಾಗಿ ಬೆಂಗಳೂರಿನಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ವಾಹನ ಸಂಚಾರ ನಿರ್ಬಂಧ ಹಾಗೂ ಪಾರ್ಕಿಂಗ್ ವ್ಯವಸ್ಥೆಗಳ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ವಾಹನ ಸಂಚಾರ ನಿರ್ಬಂಧಿಸಲಾದ ಪ್ರದೇಶಗಳು, ಏಕಮುಖ ಸಂಚಾರ ವ್ಯವಸ್ಥೆ, ಉಚಿತ ಹಾಗೂ ಪಾವತಿಸುವ ಪಾರ್ಕಿಂಗ್ ಸ್ಥಳಗಳು ಮತ್ತು ಪರ್ಯಾಯ ಮಾರ್ಗಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದ್ದಾರೆ. ಜಿಕೆವಿಕೆ ಕ್ಯಾಂಪಸ್‌ನಲ್ಲಿ ಉಚಿತ ಪಾರ್ಕಿಂಗ್ ಸೌಲಭ್ಯವಿದೆ ಮತ್ತು ಬಿಎಂಟಿಸಿ ಉಚಿತ ಶಟಲ್ ಬಸ್ ಸೇವೆಯನ್ನು ಒದಗಿಸುತ್ತದೆ.

ಬೆಂಗಳೂರು, ಫೆಬ್ರವರಿ 10: ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರವರಿ 10 ರಿಂದ 14ರವರೆಗೆ ಏರೋ ಇಂಡಿಯಾ-2025 (Aero India) ವೈಮಾನಿಕ ಪ್ರದರ್ಶನವನ್ನು (Air show) ಹಮ್ಮಿಕೊಳ್ಳಲಾಗಿದೆ. ಈ ವೈಮಾನಿಕ ಪ್ರರ್ದಶನಕ್ಕೆ ಸೋಮವಾರ (ಫೆ.10) ಬೆಳಗ್ಗೆ 9ಗಂಟೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಲವಾರು ಗಣ್ಯರು ಹಾಗು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಈ ಸಂಬಂಧ ಬೆಂಗಳೂರು ನಗರದಲ್ಲಿ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ, ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ನಿಷೇಧಿಸಲಾಗಿದೆ. ಈ ಕುರಿತು ಬೆಂಗಳೂರು ಸಂಚಾರಿ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್ ಮುಖಾಂತರ ಮಾಹಿತಿ ನೀಡಿದ್ದಾರೆ.
ವಾಹನ ಸಂಚಾರ ನಿರ್ಬಂಧ
ಫೆಬ್ರವರಿ 10ರಿಂದ 14ರವರೆಗೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10-00 ರವರೆಗೆ ಮೇಖ್ರಿ ವೃತ್ತದಿಂದ ಎಂವಿಐಟಿ ಕ್ರಾಸ್‌ವರೆಗೆ, ಬಳ್ಳಾರಿ ರಸ್ತೆಯಲ್ಲಿ, ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಹೆಣ್ಣೂರು ಕ್ರಾಸ್‌ವರೆಗೆ ಹಾಗೂ ನಾಗವಾರ ಜಂಕ್ಷನ್‌ನಿಂದ ರೇವಾ ಕಾಲೇಜ್ ಜಂಕ್ಷನ್ವರೆಗೆ ಮತ್ತು ಹೆಸರಘಟ್ಟ, ಚಿಕ್ಕಬಾಣಾವರ ಕಡೆಯಿಂದ ಬೆಂಗಳೂರು ಕಡೆಗೆ ತೆರಳುವ ಲಾರಿ, ಟ್ರಕ್, ಖಾಸಗಿ ಬಸ್ಸುಗಳು ಹಾಗೂ ಇತರೆ ಭಾರೀ ಸರಕು ಸಾಗಾಣಿಕೆಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಏಕಮುಖ ಸಂಚಾರ ವ್ಯವಸ್ಥೆ
- ನಿಟ್ಟೆ ಮೀನಾಕ್ಷಿ ಕಾಲೇಜ್ ರಸ್ತೆ (ಪೂರ್ವದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ)
- ಬಾಗಲೂರು ಮುಖ್ಯ ರಸ್ತೆ (ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ)
ವಾಹನ ನಿಲುಗಡೆ ವ್ಯವಸ್ಥೆ
ಜಿಕೆವಿಕೆ ಕ್ಯಾಂಪಸ್‌ನಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಇರುತ್ತದೆ.
ಅಡ್ವಾ ಪಾರ್ಕಿಂಗ್ಗೆ ಗೇಟ್ ನಂ 8 ಮತ್ತು 9ರ ಮುಖಾಂತರ ಪ್ರವೇಶಿಸಬೇಕು.
ಡೊಮೆಸ್ಟಿಕ್ ಪಾರ್ಕಿಂಗ್ಗೆ ಗೇಟ್ ನಂ. 5ರ ಮುಖಾಂತರ ಪ್ರವೇಶಿಸಬೇಕು. ಅಡ್ವಾ ಪಾರ್ಕಿಂಗ್ ಮತ್ತು ಡೊಮೆಸ್ಟಿಕ್ ಪಾರ್ಕಿಂಗ್ನಲ್ಲಿ ಸಾರ್ವಜನಿಕರು ಪಾವತಿಸಿ ವಾಹನ ನಿಲುಗಡೆ ಮಾಡಬೇಕು.
ಸೂಚಿಸಲಾದ ಮಾರ್ಗಗಳು
- ಬೆಂಗಳೂರು ಪೂರ್ವ ದಿಕ್ಕಿನಿಂದ ಅಡ್ವಾ ಕಡೆಗೆ ಬರುವ ವಾಹನಗಳು: ಕೆ.ಆರ್. ಪುರ- ನಾಗವಾರ ಜಂಕ್ಷನ್ನಲ್ಲಿ ಬಲತಿರುವು ಪಡೆದು – ಥಣಿಸಂದ್ರ – ನಾರಾಯಣಪುರ ಕ್ರಾಸ್ನಲ್ಲಿ ಎಡ ತಿರುವು ಪಡೆದು – ಟೆಲಿಕಾಂ ಲೇಔಟ್ – ಜಕ್ಕೂರು ಕ್ರಾಸ್ನಲ್ಲಿ ಬಲ ತಿರುವು ಪಡೆದು – ಯಲಹಂಕ ಬೈಪಾಸ್ – ಯಲಹಂಕ ಕಾಫಿ ಡೇ – ಪಾಲನಹಳ್ಳಿ ಗೇಟ್ ಸರ್ವಿಸ್ ರಸ್ತೆ – ಫೋರ್ಡ ಷೋರೂಂನಲ್ಲಿ ಎಡ ತಿರುವು ಪಡೆದು ನಿಟ್ಟೇ ಮೀನಾಕ್ಷಿ ಕಾಲೇಜು ರಸ್ತೆ ಮೂಲಕ ಬರಬಹುದಾಗಿದೆ.
- ಬೆಂಗಳೂರು ಪೂರ್ವ ದಿಕ್ಕಿನಿಂದ ಡೊಮೆಸ್ಟಿಕ್ ಕಡೆಗೆ ಬರುವ ವಾಹನಗಳು: ಕೆ.ಆರ್. ಪುರಂ – ಹೆಣ್ಣೂರು ಕ್ರಾಸ್ – ಕೊತ್ತನೂರು – ಗುಬ್ಬಿ ಕ್ರಾಸ್ ಕಣ್ಣೂರು ವಾಗಲೂರು ಬಾಗಲೂರು ಲೇಔಟ್ – ರಜಾಕ್ ಪಾಳ್ಯ – ವಿದ್ಯಾನಗರ ಕ್ರಾಸ್- ಹುಣಸಮಾರನಹಳ್ಳಿ ಮುಖಾಂತರ ಬರಬಹುದು.
- ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಆಡ್ವಾ ಪಾರ್ಕಿಂಗ್ ಕಡೆಗೆ ಬರುವವರು: ಗೊರಗುಂಟೆಪಾಳ್ಯ – ಬಿ.ಇ.ಎಲ್ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್ ಪಾಳ್ಯ ಸರ್ಕಲ್- ಉನ್ನಿಕೃಷ್ಣನ್ ರಸ್ತೆ – ಮದರ್ ಡೈರಿ ಜಂಕ್ಷನ್ – ಉನ್ನಿಕೃಷ್ಣನ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು – ದೊಡ್ಡಬಳ್ಳಾಪುರ ರಸ್ತೆ – ನಾಗೇನಹಳ್ಳಿ ಗೇಟ್ನಲ್ಲಿ ಬಲ ತಿರುವು ಪಡೆದು – ಹಾರೋಹಳ್ಳಿ – ಗಂಟೆಗಾನಹಳ್ಳಿ ಸರ್ಕಲ್ನಲ್ಲಿ ಬಲ ತಿರುವು ಪಡೆದು ಬರಬಹುದು.
- ಬೆಂಗಳೂರು ಪಶ್ಚಿಮ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರು: ಗೊರಗುಂಟೆಪಾಳ್ಯ – ಬಿ.ಇ.ಎಲ್ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್ ಪಾಳ್ಯ ಸರ್ಕಲ್ – ಉನ್ನಿಕೃಷ್ಣನ್ ರಸ್ತೆ – ಮದರ್ ಡೈರಿ ಜಂಕ್ಷನ್ – ಉನ್ನಿಕೃಷ್ಣನ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ದೊಡ್ಡಬಳ್ಳಾಪುರ ರಸ್ತೆ – ರಾಜಾನುಕುಂಟೆಯಲ್ಲಿ ಬಲ ತಿರುವು ಪಡೆದು – ಅದ್ವಿಗಾನಹಳ್ಳಿ – ತಿಮ್ಮಸಂದ್ರ – ಎಂ.ವಿ.ಐ.ಟಿ ಕ್ರಾಸ್ – ವಿದ್ಯಾನಗರ ಕ್ರಾಸ್ನಲ್ಲಿ ಯು ತಿರುವು – ಹುಣಸಮಾರನಹಳ್ಳಿ ಮೂಲಕ ಬರಬಹುದು.
- ಬೆಂಗಳೂರು ದಕ್ಷಿಣ ದಿಕ್ಕಿನಿಂದ ಆಡ್ವಾ ಪಾರ್ಕಿಂಗ್ ಕಡೆಗೆ ಬರುವವರು: ಮೈಸೂರು ರಸ್ತೆ – ನಾಯಂಡನಹಳ್ಳಿ-ಚಂದ್ರಾಲೇಔಟ್ – ಗೊರಗುಂಟೆಪಾಳ್ಯ – ಬಿ.ಇ.ಎಲ್ ವೃತ್ತ – ಗಂಗಮ್ಮ ವೃತ್ತ -ಎಂ.ಎಸ್ ಪಾಳ್ಯ ಸರ್ಕಲ್ – ಮದರ್ ಡೈರಿ ಜಂಕ್ಷನ್ – ಉನ್ನಿಕೃಷ್ಣನ್ ಜಂಕ್ಷನ್ – ದೊಡ್ಡಬಳ್ಳಾಪುರ ಮುಖ್ಯ ರಸ್ತೆ – ನಾಗೇನಹಳ್ಳಿ ಗೇಟ್ನಲ್ಲಿ ಬಲ ತಿರುವು ಪಡೆದು – ಹಾರೋಹಳ್ಳಿ ಗಂಟಿಗಾನಹಳ್ಳಿ ಸರ್ಕಲ್ ಮೂಲಕ ಬರಬಹುದು.
- ಬೆಂಗಳೂರು ದಕ್ಷಿಣ ದಿಕ್ಕಿನಿಂದ ಡೊಮೆಸ್ಟಿಕ್ ಪಾರ್ಕಿಂಗ್ ಕಡೆಗೆ ಬರುವವರು: ಮೈಸೂರು ರಸ್ತೆ – ನಾಯಂಡನಹಳ್ಳಿ – ಚಂದ್ರಾಲೇಔಟ್ – ಗೊರಗುಂಟೆಪಾಳ್ಯ – ಬಿ.ಇ.ಎಲ್ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್ ಪಾಳ್ಯ ಸರ್ಕಲ್ – ಮದರ್ ಡೈರಿ – ಉನ್ನಿ ಕೃಷ್ಣನ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು – ದೊಡ್ಡಬಳ್ಳಾಪುರ ರಸ್ತೆ – ರಾಜಾನುಕುಂಟೆನಲ್ಲಿ ಬಲ ತಿರುವು ಪಡೆದು – ಅದ್ದಿಗಾನಹಳ್ಳಿ ಎಂ.ಎ.ಐ.ಟಿ ಕ್ರಾಸ್ – ವಿದ್ಯಾನಗರ ಕ್ರಾಸ್ನಲ್ಲಿ ಯು ತಿರುವು ತಿರುವು ಪಡೆದು – ಹುಣಸಮಾರನಹಳ್ಳಿ ಮೂಲಕ ಬರಬಹುದು.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲು ಪರ್ಯಾಯ ಮಾರ್ಗ:
- ಬೆಂಗಳೂರು ಪೂರ್ವ ದಿಕ್ಕಿನಿಂದ: ಕೆ.ಆರ್.ಪುರಂ-ಹೆಣ್ಣೂರು ಕ್ರಾಸ್ -ಕೊತ್ತನೂರು- ಗುಬ್ಬಿ ಕ್ರಾಸ್ – ಕಣ್ಣೂರು – ಬಾಗಲೂರು – ಮೈಲನಹಳ್ಳಿ – ಬೇಗೂರು – ನೈರುತ್ಯ ಪ್ರವೇಶದ್ವಾರದ ಮೂಲಕ ತಲುಪಬಹುದು.
- ಬೆಂಗಳೂರು ಪಶ್ಚಿಮ ದಿಕ್ಕಿನಿಂದ: ಗೊರಗುಂಟೆಪಾಳ್ಯ – ಬಿ.ಇ.ಎಲ್ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್ ಪಾಳ್ಯ ಸರ್ಕಲ್ – ಮದರ್ ಡೈರಿ – ಉನ್ನಿಕೃಷ್ಣನ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು – ದೊಡ್ಡಬಳ್ಳಾಪುರ ರಸ್ತೆ ರಾಜಾನುಕುಂಟೆ – ಅದ್ದಿಗಾನಹಳ್ಳಿ – ತಿಮ್ಮಸಂದ್ರ – ಎಂ.ವಿ.ಐ.ಟಿ ಕ್ರಾಸ್ ವಿದ್ಯಾನಗರ ಕ್ರಾಸ್ ಮೂಲಕ ತಲುಪಬಹುದು.
- ಬೆಂಗಳೂರು ದಕ್ಷಿಣ ದಿಕ್ಕಿನಿಂದ: ಮೈಸೂರು ರಸ್ತೆ ನಾಯಂಡನಹಳ್ಳಿ – ಚಂದ್ರಾ ಲೇಔಟ್ – ಗೊರಗುಂಟೆಪಾಳ್ಯ -ಬಿಇಎಲ್ ವೃತ್ತ – ಗಂಗಮ್ಮ ವೃತ್ತ – ಎಂ.ಎಸ್ ಪಾಳ್ಯ ಸರ್ಕಲ್ – ಮದರ್ ಡೈರಿ ಜಂಕ್ಷನ್ – ಉನ್ನಿಕೃಷ್ಣನ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ದೊಡ್ಡಬಳ್ಳಾಪುರ ರಸ್ತೆ – ರಾಜಾನುಕುಂಟೆ – ಅದ್ವಿಗಾನಹಳ್ಳಿ – ಎಂ.ವಿ.ಐ.ಟಿ ಕ್ರಾಸ್ – ವಿದ್ಯಾನಗರ ಕ್ರಾಸ್ ಮೂಲಕ ತಲುಪಬಹುದು.
ಇದನ್ನೂ ಓದಿ: ಏರ್ ಶೋ, ಹೂಡಿಕೆ ಸಮಾವೇಶ: ಬೆಂಗಳೂರು ಚೆನ್ನೈ ವಿಮಾನ ಟಿಕೆಟ್ಗಿಂತಲೂ ಹೆಚ್ಚಾಯ್ತು ಹೋಟೆಲ್ ರೂಂ ದರ!
ವಾಹನ ನಿಲುಗಡೆ ನಿಷೇಧ (ಎಲ್ಲಾ ಮಾದರಿಯ ವಾಹನಗಳಿಗೆ ರಸ್ತೆಯ ಎರಡೂ ಬದಿಗಳಲ್ಲಿ)
- ನಾಗೇನಹಳ್ಳಿ ಗೇಟ್‌ನಿಂದ ಗಂಟಿಗಾನಹಳ್ಳಿ ಮಾರ್ಗವಾಗಿ ಬೆಂಗಳೂರು-ಬಳ್ಳಾರಿ ರಸ್ತೆಯನ್ನು ಸೇರುವ ಫೋರ್ಡ್ ಷೋರೂಂ ಕ್ರಾಸ್‌ವರೆಗೆ (ಬಿಬಿ ರಸ್ತೆ)ವರೆಗೆ.
- ಬೆಂಗಳೂರು-ಬಳ್ಳಾರಿ ರಸ್ತೆಯ ಮೇದ್ರಿ ಸರ್ಕಲ್ ನಿಂದ-ದೇವನಹಳ್ಳಿವರೆಗೆ.
- ಬಾಗಲೂರು ಕ್ರಾಸ್ ಜಂಕ್ಷನ್‌ನಿಂದ ಬಾಗಲೂರು ಮುಖ್ಯ ರಸ್ತೆಯ ಮಾರ್ಗವಾಗಿ ಸಾತನೂರುವರೆಗೆ.
- ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರ ಮುಖ್ಯ ರಸ್ತೆಯ ಮಾರ್ಗವಾಗಿ ರೇವಾ ಕಾಲೇಜ್ ಜಂಕ್ಷನ್ವರೆಗೆ.
- ಎಫ್‌ಟಿಐ ಜಂಕ್ಷನ್‌ನಿಂದ ಹೆಣ್ಣೂರು ಕ್ರಾಸ್ ಜಂಕ್ಷನ್ವರೆಗೆ.
- ಹೆಣ್ಣೂರು ಕ್ರಾಸ್ ನಿಂದ ಬೇಗೂರು ಬ್ಯಾಕ್ ಗೇಟ್ವರೆಗೆ.
- ನಾಗೇನಹಳ್ಳಿ ಗೇಟ್ ಜಂಕ್ಷನ್ ನಿಂದ ಯಲಹಂಕ ಸರ್ಕಲ್ವರೆಗೆ.
- ಎಂವಿಐಟಿ ಕ್ರಾಸ್ ನಿಂದ ನಾರಾಯಣಪುರ ರೈಲ್ವೇ ಕ್ರಾಸ್ ವರೆಗೆ.
- ಕೋಗಿಲು ಕ್ರಾಸ್ ಜಂಕ್ಷನ್ ನಿಂದ ಕಣ್ಣೂರು ಜಂಕ್ಷನ್ವರೆಗೆ.
- ಮತ್ತಿಕೆರೆ ಕ್ರಾಸ್ ನಿಂದ ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಉನ್ನಿಕೃಷ್ಣನ್ ಜಂಕ್ಷನ್ವರೆಗೆ.
- ಜಾಲಹಳ್ಳಿ ಕ್ರಾಸ್ ಜಂಕ್ಷನ್ ನಿಂದ ಗಂಗಮ್ಮ ಸರ್ಕಲ್ ಜಂಕ್ಷನ್ವರೆಗೆ.
ಸೂಚನೆ:
- ವೀಕ್ಷಣೆಗೆ ಬರುವವರು ತಮಗೆ ನೀಡಲಾಗಿರುವ ಟಿಕೆಟ್/ಪಾಸ್‌ನ QR ಕೋಡನ್ನು ಮೊದಲೇ ಸ್ಕ್ಯಾನ್ ಮಾಡಿ ಯಾವ ಗೇಟ್‌ನಿಂದ ಪ್ರವೇಶಿಸಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಂಡು ಪ್ರಯಾಣಿಸಿದ್ದಲ್ಲಿ ಅನವಶ್ಯಕ ವಿಳಂಬಕ್ಕೆ ಅವಕಾಶವಿರುವುದಿಲ್ಲ.
- ವೀಕ್ಷಣೆಗೆ ಬರುವವರು ಉಚಿತ ವಾಹನ ನಿಲುಗಡೆ ಲಭ್ಯವಿರುವ ಜಿ.ಕೆ.ವಿ.ಕೆ. ಅವರಣವನ್ನು ಮತ್ತು ಶಟಲ್ ಬಸ್ ಸೇವೆಯನ್ನು ಉಪಯೋಗಿಸಿ.
Published On - 8:23 am, Mon, 10 February 25




