AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮಿತಿಮೀರಿದ ಕಸದ ಬಿಕ್ಕಟ್ಟು: 5,445ಕ್ಕೆ ಏರಿಕೆಯಾದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕಸದ ಕಂಟಕ ಶುರುವಾಗಿದೆ. ರಸ್ತೆ ಬದಿ, ಫುಟ್‌ಪಾತ್, ಚರಂಡಿ ಅಂತಾ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಕಸ ವಿಲೇವಾರಿ ಮಾಡದ ಗ್ರೇಟರ್ ಬೆಂಗಳೂರು( GBA) ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಮುಂಗಾರು ಮಳೆ ಆರಂಭವಾಗಿರೋದ್ರಿಂದ, ಈ ಕಸ ಕೊಳೆತು ನಾರುತ್ತಿದ್ದು ರೋಗರುಜಿನಗಳ ಭೀತಿ ಆತಂಕ ಶುರುವಾಗಿದೆ.

ಬೆಂಗಳೂರಿನಲ್ಲಿ ಮಿತಿಮೀರಿದ ಕಸದ ಬಿಕ್ಕಟ್ಟು:  5,445ಕ್ಕೆ  ಏರಿಕೆಯಾದ 'ಬ್ಲ್ಯಾಕ್ ಸ್ಪಾಟ್‌'ಗಳ ಸಂಖ್ಯೆ
Bengaluru Garbage
ರಮೇಶ್ ಬಿ. ಜವಳಗೇರಾ
|

Updated on: Jun 09, 2026 | 9:13 PM

Share

ಬೆಂಗಳೂರು, (ಜೂನ್ 09): ರಾಜಧಾನಿ ಬೆಂಗಳೂರಿನಲ್ಲಿ ಕಸದ (bengaluru garbage) ಸಮಸ್ಯೆ ಮತ್ತೆ ತಲೆದೂರಿದೆ. ನಗರದ ಹಲವೆಡೆ ರಸ್ತೆಯುದ್ಧಕ್ಕೂ ಕಸದ ರಾಶಿಯೇ ಕಾಣಿಸುತ್ತಿದೆ. ಸದ್ಯ ಮಳೆಗಾಲ ಆರಂಭವಾಗಿರುವುದರಿಂದ ವಿಲೇವಾರಿಯಾಗದ ಕಸ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ತಿಂಗಳುಗಳಿಂದ ಕಸ ಸಾಗಿಸದ ಕಾರಣ, ತ್ಯಾಜ್ಯ ರಸ್ತೆ ಮಧ್ಯಕ್ಕೆ ಬಂದು ವಾಹನ ಸವಾರರಿಗೂ ತೊಂದರೆಯಾಗುತ್ತಿದೆ.

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಮಿತಿಮೀರಿದ ಕಸದ ಬಿಕ್ಕಟ್ಟು
  • ಎರಡು ತಿಂಗಳು ಕಳೆದ್ರು ಕಸ ತಗೆಯದೆ ನಿರ್ಲಕ್ಷತೋರುತಿರೋ GBA
  • 5,445ಕ್ಕೆ ಏರಿಕೆಯಾದ ಕಸದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ

ಇನ್ನು ಅಚ್ಚರಿಯ ವಿಷಯ ಅಂದ್ರೆ, ಸ್ವಚ್ಛತೆ ಕಾಪಾಡುವುದಕ್ಕಾಗಿ GBA ಕಡೆಯಿಂದ ಮಾರ್ಷಲ್ ಗಳನ್ನು ನಿರ್ಮಿಸದ್ದಾರೆ. ಅದ್ರೆ ಮಾರ್ಷಲ್ ಗಳು ಇದರ ಬಗ್ಗೆ ಗಮನವನ್ನು ಅರಿಸುತ್ತಿಲ್ಲ.ಇಡೀ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳು ರಸ್ತೆಯಲ್ಲೇ ಬೇಕಾಬಿಟ್ಟಿ ಕಸವನ್ನು ಎಸೆದು ಹೋಗುತ್ತಿದ್ದಾರೆ.

ಇದನ್ನೂ ಓದಿ: Bengaluru Air Quality: ಬೆಂಗಳೂರಿನಲ್ಲಿ ಗಣನೀಯವಾಗಿ ಸುಧಾರಿಸಿದ ಗಾಳಿಯ ಗುಣಮಟ್ಟ

ಇನ್ನು ಕಳೆದ ಎರಡು ತಿಂಗಳಿನಿಂದ ಟಿಪ್ಪರ್‌ಗಳು ಸರಿಯಾಗಿ ಬರ್ತಿಲ್ಲ. ಮನೆಯಲ್ಲೇ ಕಸದ ರಾಶಿ ಬೀಳ್ತಿದೆ. ಹಸಿ ಕಸದ ವಾಸನೆಯಿಂದ ಸೊಳ್ಳೆ ಕಾಟ ಜಾಸ್ತಿಯಾಗಿದೆ. ಅಧಿಕಾರಿಗಳು ಇದನ್ನ ಅರ್ಥ ಮಾಡ್ಕೋಬೇಕು ಸರಿಯಾಗಿ ಕಸದ ಆಟೋಗಳು ಮನೆ ಬಳಿ ಬರ್ತಿಲ್ಲ. ಇದರಿಂದ ಜನರು ರಸ್ತೆಯಲ್ಲೇ ಕಸವನ್ನು ಎಸೆಯುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಏರಿಕೆಯಾದ ‘ಬ್ಲ್ಯಾಕ್ ಸ್ಪಾಟ್‌’ಗಳ ಸಂಖ್ಯೆ

‘ಕಸಾ ಪೋರ್ಟಲ್’ ನೀಡಿರುವ ಅಂಕಿಅಂಶಗಳ ಪ್ರಕಾರ, ಒಂದು ತಿಂಗಳ ಹಿಂದೆ 3,200 ರಷ್ಟಿದ್ದ ಸಕ್ರಿಯ ಬ್ಲ್ಯಾಕ್ ಸ್ಪಾಟ್‌ಗಳ ಸಂಖ್ಯೆ ಈಗ ಬರೋಬ್ಬರಿ 5,445 ಕ್ಕೆ ಏರಿಕೆಯಾಗಿದೆ. ಇದರಿಂದ ಉದ್ಯಾನ ನಗರಿ ಈಗ ಕಸದ ನಗರಿಯಾಗುತ್ತಿದೆಯೇ ಎಂಬ ಆತಂಕ ಶುರುವಾಗಿದೆ.

ಕಸದ ಸಮಸ್ಯೆಗೆ ಪ್ರಮುಖ ಕಾರಣಗಳೇನು?

ಕಳೆದ 13 ವರ್ಷಗಳಿಂದ ಕಸ ಸಂಗ್ರಹಣೆ ಟೆಂಡರ್‌ಗಳನ್ನು ಅಂತಿಮಗೊಳಿಸದಿರುವುದು, ಟಿಪ್ಪರ್‌ ಮತ್ತು ಸಿಬ್ಬಂದಿಯ ಕೊರತೆ, ಸಿಬ್ಬಂದಿಯ ಅನಿಯಮಿತ ಲಭ್ಯತೆ, ಸಂಬಳ ಪಾವತಿಯಲ್ಲಿ ವಿಳಂಬ ಮತ್ತು ಕಸ ರವಾನಿಸುವ ವಾಹನಗಳ ರಿಪೇರಿಯಿಂದಾಗಿ ನಗರದಲ್ಲಿ ಕಸ ಸಂಗ್ರಹಣಾ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯಲು ಪ್ರಮುಖ ಕಾರಣ ಎಂದು ತಿಳಿದುಬಂದಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್‌ಗೆ ಗಂಭೀರ ಗಾಯ
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್‌ಗೆ ಗಂಭೀರ ಗಾಯ
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ
ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ