AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್ ಪೋಲು ತಡೆಯುವುದಕ್ಕೂ ಬಂತು ಎಐ ಸಿಸ್ಟಂ: ವಾರ್ಷಿಕ 40 ಕೋಟಿ ರೂ. ಉಳಿತಾಯ!

ನೀರು ಪೋಲಾಗದಂತೆ ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದ್ದ ಬೆಂಗಳೂರು ಜಲ ಮಂಡಳಿ ಈಗ ಇಂಧನ ಉಳಿತಾಯದ ನಿಟ್ಟಿನಲ್ಲೂ ಮಹತ್ವದ ಹೆಜ್ಜೆ ಇಟ್ಟಿದೆ. ವಿದ್ಯುತ್ ಪೋಲು ತಡೆಯಲು ಎಐ ಆಧಾರಿತ ವ್ಯವಸ್ಥೆ ಅಳವಡಿಸಿ ವಾರ್ಷಿಕ 40 ಕೋಟಿ ರೂ. ಉಳಿತಾಯದ ಗುರಿ ಹಾಕಿಕೊಂಡಿದೆ. ಅಲ್ಲದೆ, ದೊಡ್ಡ ಮಟ್ಟದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡ ವಿಶ್ವದ ಮೊದಲ ನೀರು ಸರಬರಾಜು ಮಂಡಳಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ವಿದ್ಯುತ್ ಪೋಲು ತಡೆಯುವುದಕ್ಕೂ ಬಂತು ಎಐ ಸಿಸ್ಟಂ: ವಾರ್ಷಿಕ 40 ಕೋಟಿ ರೂ. ಉಳಿತಾಯ!
ಸಾಂದರ್ಭಿಕ ಚಿತ್ರ
Ganapathi Sharma
|

Updated on: Jan 15, 2026 | 12:27 PM

Share

ಬೆಂಗಳೂರು, ಜನವರಿ 15: ಈ ಹಿಂದೆ ಪೈಪ್‌ಲೈನ್ ಸೇರಿದಂತೆ ವಿವಿಧ ಕಡೆ ನೀರು ಸೋರಿಕೆಯಾಗಿ ವ್ಯರ್ಥವಾಗುವುದನ್ನು ತಡೆಯಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸುದ್ದಿಯಾಗಿದ್ದ ಬೆಂಗಳೂರು ಜಲಮಂಡಳಿ (BWSSB) ಇದೀಗ ಇಂಧನ ಕ್ಷಮತೆ ಹೆಚ್ಚಿಸಲು ಮತ್ತು ವಿದ್ಯುತ್ ಪೋಲಾಗುವುದನ್ನು ತಡೆಯಲು ಕೃತಕ ಬುದ್ಧಿಮತ್ತೆ ಆಧಾರಿತ ಪಂಪ್ ಮಾನಿಟರಿಂಗ್ ಆರಂಭಿಸಿದೆ. ಬೆಂಗಳೂರಿನ (Bangalore) 78 ಸ್ಟೇಷನ್ಗಳಲ್ಲಿ ಎಐ ಆಧಾರಿತ ಪಂಪು ಮಾನಿಟರಿಂಗ್ ಸಾಧನೆಗಳನ್ನು ಅಳವಡಿಸಲಾಗಿದೆ. ಇದರಿಂದ ವಾರ್ಷಿಕ 40 ಕೋಟಿ ರೂಪಾಯಿ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

78 ಕಡೆಗಳಲ್ಲಿ ಎಐ ಪಂಪ್ ಮಾನಿಟರಿಂಗ್ IPUMPNET ಅಳವಡಿಸಿಕೊಳ್ಳುವ ಮೂಲಕ, ಈ ಮಟ್ಟದಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡ ವಿಶ್ವದ ಮೊದಲ ನೀರು ಸರಬರಾಜು ಮಂಡಳಿ ಎಂಬ ಹೆಗ್ಗಳಿಕೆಗೆ ಬೆಂಗಳೂರು ಜಲ ಮಂಡಳಿ ಪಾತ್ರವಾಗಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಉಲ್ಲೇಖಿಸಿದೆ.

ಹೇಗೆ ಕಾರ್ಯನಿರ್ವಹಿಸುತ್ತೆ IPUMPNET?

IPUMPNET ಹೆಸರಿನ ಈ ಎಐ ಆಧಾರಿತ ವ್ಯವಸ್ಥೆಯು ರಿಯಲ್ ಟೈಮ್ ಸೆನ್ಸರ್‌ಗಳನ್ನು ಒಳಗೊಂಡಿದೆ. ಸಾಂಪ್ರದಾಯಿಕ ಸಾಧನಗಳಂತಲ್ಲದೆ ಇದು ಪ್ರತಿಕ್ಷಣವೂ ಪಂಪ್ಗಳ ಕ್ಷಮತೆಯನ್ನು ಗಮನಿಸುತ್ತಿರುತ್ತದೆ. ಅತಿಯಾದ ಇಂಧನ ಬಳಕೆ, ವಿದ್ಯುತ್ ಪೋಲಾಗುವುದನ್ನು ಗಮನಿಸಿ ಅಲರ್ಟ್ ಮಾಡುತ್ತದೆ. ಈ IPUMPNET ವ್ಯವಸ್ಥೆಯು ಈಗಾಗಲೇ ಹಲವಾರು ಪಂಪ್‌ಗಳು ಮಿತಿಗಳಿಗಿಂತ ಹೆಚ್ಚಿನ ವಿದ್ಯುತ್ ಬಳಸುತ್ತಿರುವುದನ್ನು ಗುರುತಿಸಿದೆ. ಈ ಡೇಟಾವನ್ನು ಆಧರಿಸಿ, ಜಲ ಮಂಡಳಿಯು ಕಡಿಮೆ-ದಕ್ಷತೆಯ ಪಂಪ್‌ಗಳನ್ನು ಬದಲಾಯಿಸಿ ಹೆಚ್ಚಿನ-ದಕ್ಷತೆಯ ಪಂಪ್‌ಗಳನ್ನು ಅಳವಡಿಸುವ ಕೆಲಸದಲ್ಲಿ ನಿರತವಾಗಿದೆ ಎಂದು ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಇದನ್ನೂ ಓದಿ: ಲಿಂಗರಾಜಪುರದಲ್ಲಿ ಕುಡಿಯುವ ನೀರಿಗೆ ಕೊಳಚೆ ಮಿಶ್ರಣ; ರೊಬೊಟಿಕ್ ತನಿಖೆ ಆರಂಭಿಸಿದ ಜಲಮಂಡಳಿ

ಈ ಎಐ ವ್ಯವಸ್ಥೆಯಿಂದಾಗಿ, ಇಂಧನ ಪೋಲಾಗುವುದನ್ನು ತಡೆಗಟ್ಟುವುದರ ಜತೆಗೆ ಜಲಮಂಡಳಿಗೆ ಆರ್ಥಿಕವಾಗಿಯೂ ಉಳಿತಾಯವಾಗಲಿದೆ. ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವುದೂ ಸಾಧ್ಯವಾಗಲಿದೆ. ಇದರಿಂದಾಗಿ ಬೆಂಗಳೂರಿನ ಪರಿಸರ ಸುಸ್ಥಿರತೆಗೆ ಗಮನಾರ್ಹವಾಗಿ ಕೊಡುಗೆ ನೀಡಿದಂತಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಗೈರು ಹಾಜರಿ: ಸಂಕ್ರಾಂತಿ ಆಚರಣೆಗೆ ವಿಜಯಲಕ್ಷ್ಮಿ ಮುಂದಾಳತ್ವ
ದರ್ಶನ್ ಗೈರು ಹಾಜರಿ: ಸಂಕ್ರಾಂತಿ ಆಚರಣೆಗೆ ವಿಜಯಲಕ್ಷ್ಮಿ ಮುಂದಾಳತ್ವ
ಏರ್ಪೋಟ್ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿದೆ ಟೋಲ್ ಬೂತ್
ಏರ್ಪೋಟ್ ರಸ್ತೆಯಲ್ಲಿ ಬಲಿಗಾಗಿ ಕಾಯುತ್ತಿದೆ ಟೋಲ್ ಬೂತ್
ಮೈಸೂರು ಮಹಾಬಲೇಶ್ವರ ದೇವಸ್ಥಾನದಲ್ಲಿ ಕಳ್ಳತನ
ಮೈಸೂರು ಮಹಾಬಲೇಶ್ವರ ದೇವಸ್ಥಾನದಲ್ಲಿ ಕಳ್ಳತನ
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ