Rebel Star Ambareesh: ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಬೆಂಗಳೂರು ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರು
ಬೆಂಗಳೂರು ರೇಸ್ ಕೋರ್ಸ್ಗೆ ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಅನುಮೋದನೆ ನೀಡಿದ್ದಾರೆ.
ಬೆಂಗಳೂರು: ಬೆಂಗಳೂರು ನಗರದ ಪ್ರಮುಖ ರಸ್ತೆಗೆ ಖ್ಯಾತ ನಟರ ಹೆಸರಿಡಲು ಬಿಬಿಎಂಪಿ ಅನುಮೋದನೆ ನೀಡಿದೆ. ಬೆಂಗಳೂರು ರೇಸ್ ಕೋರ್ಸ್ ರಸ್ತೆಗೆ (Race Course road) ರೆಬೆಲ್ ಸ್ಟಾರ್ ಅಂಬರೀಷ್ (Ambareesh) ಹೆಸರಿಡಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಅನುಮೋದನೆ ನೀಡಿದ್ದಾರೆ. ಆ ಮೂಲಕ ರೆಬೆಲ್ ಸ್ಟಾರ್ ಅಂಬರೀಷ್ ಹೆಸರು ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ರಾರಾಜಿಸಲಿದೆ. ಈ ಕುರಿತಾಗಿ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಾಮಾ ಹರೀಶ್ ಅವರು ಟ್ವೀಟ್ ಮಾಡಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸ್ಪಂದಿಸಿ, ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರಿಡಲು ಒಪ್ಪಿಗೆ ಸೂಚಿಸಿದ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳು. ರಸ್ತೆಗೆ ಹೆಸರಿಡುವ ಕಾರ್ಯಕ್ರಮ ಈ ವಾರದಲ್ಲೇ ನಡೆಯಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸ್ಪಂದಿಸಿ, ರೇಸ್ ಕೋರ್ಸ್ ರಸ್ತೆಗೆ ಅಂಬರೀಷ್ ಹೆಸರಿಡಲು ಒಪ್ಪಿಗೆ ಸೂಚಿಸಿದ ಮಾನ್ಯ ಮುಖ್ಯಮಂತ್ರಿ @BSBommai ಅವರಿಗೆ ಧನ್ಯವಾದಗಳು. ರಸ್ತೆಗೆ ಹೆಸರಿಡುವ ಕಾರ್ಯಕ್ರಮ ಈ ವಾರದಲ್ಲೇ ನಡೆಯಲಿದೆ.@RAshokaBJP @CMofKarnataka #AmbareeshRoad #Sandalwood
— BAMA HARISH (@BamaHarish) March 18, 2023
ಬೆಂಗಳೂರು ರೇಸ್ ಕೋರ್ಸ್ ರಸ್ತೆಯಲ್ಲಿರುವ ರಾಮನಾರಾಯಣ ಚೆಲ್ಲಾರಂ ಕಾಲೇಜಿನಿಂದ ಆರಂಭಗೊಂಡು ಆನಂದ್ ರಾವ್ ವೃತ್ತದ ವರೆಗಿನ ರಸ್ತೆಗೆ ಅಂಬರೀಷ್ ರಸ್ತೆ ಎಂದು ನಾಮಕರಣ ಮಾಡಲಾಗುತ್ತಿದೆ. ಈ ಕುರಿತಾಗಿ ಈ ಹಿಂದೆ ಸಿಎಂ ಬೊಮ್ಮಾಯಿ ಅವರು ಅಧಿಕೃತ ಘೋಷಣೆ ಮಾಡಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಮಂಡ್ಯದ ವಿಶೇಷ ಆರ್ಗಾನಿಕ್ ಬೆಲ್ಲವನ್ನ ಕೊಡುತ್ತೇನೆ: ಸಂಸದೆ ಸುಮಲತಾ
ಅಂಬರೀಷ್ ಅವರು 1972ರಿಂದ ಕನ್ನಡ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಟರಲ್ಲಿ ಅವರು ಒಬ್ಬರಾಗಿದ್ದರು. ಮನವಳ್ಳಿ ಹುಚ್ಚೇಗೌಡ ಅಮರನಾಥ್ ಅವರ ಮೂಲ ಹೆಸರಾಗಿದ್ದರು ಅಂಬರೀಷ್ ಎಂದು ಹೆಸರುವಾಸಿಯಾಗಿದ್ದರು. ಇನ್ನು ಅಭಿಮಾನಿಗಳು ಅವರನ್ನು ಪ್ರೀತಿಯಿಂದ ರೆಬೆಲ್ ಸ್ಟಾರ್ ಎಂದು ಕರೆಯುತ್ತಾರೆ. ಅಂಬರೀಷ್ ಅವರು ಕೇವಲ ನಟ ಮಾತ್ರವಲ್ಲದೇ ರಾಜಕಾರಣಿಯೂ ಹೌದು. ಕನ್ನಡ ಚಿತ್ರಗಳಲ್ಲಿ ಅಷ್ಟೇ ಅಲ್ಲದೆ ಹಿಂದಿ, ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಂಬರೀಷ್ ಅವರು 2018 ನವೆಂಬರ್ 24ರಂದು ಇಹಲೋಕ ತ್ಯಜಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 pm, Sat, 18 March 23