ಆನೇಕಲ್: ಕಂಟೈನರ್ಗೆ ಗುದ್ದಿದ ಪ್ಯಾಸೆಂಜರ್ ರೈಲು; ತಪ್ಪಿದ ಭಾರಿ ಅನಾಹುತ
ಮೈಸೂರಿನಿಂದ ತಮಿಳುನಾಡಿನ ಮೈಲಾರಪುರಿಗೆ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲು ಹೋಗುತ್ತಿತ್ತು. ಈ ವೇಳೆ, ದುರ್ಘಟನೆ ಸಂಭವಿಸಿದೆ.
ಬೆಂಗಳೂರು: ತಾಲ್ಲೂಕಿನ ಆವಲಹಳ್ಳಿ ಬಳಿ ಪ್ಯಾಸೆಂಜರ್ ರೈಲೊಂದು ಕಂಟೈನರ್ಗೆ ಗುದ್ದಿದ ಘಟನೆ ನಡೆದಿದೆ. ಇದರಿಂದಾಗಿ ಕಂಟೈನರ್ ಸಂಪೂರ್ಣ ಪುಡಿ ಪುಡಿ ಆಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೈಸೂರಿನಿಂದ ತಮಿಳುನಾಡಿನ ಮೈಲಾರಪುರಿಗೆ ಎಕ್ಸ್‌ಪ್ರೆಸ್ ಪ್ಯಾಸೆಂಜರ್ ರೈಲು ಹೋಗುತ್ತಿತ್ತು. ಈ ವೇಳೆ, ದುರ್ಘಟನೆ ಸಂಭವಿಸಿದೆ.
ಎರಡು ಹಳಿಗಳು ನಿರ್ಮಾಣವಾಗುತ್ತಿತ್ತು. ಒಂದು ಹಳಿ ಮೇಲೆ ರೈಲು ಸಂಚರಿಸುತಿತ್ತು. ಸಂಜೆ ಅದೇ ಹಳಿ ಮೇಲೆ ಕಂಟೈನರ್ ದಾಟಲು ಯತ್ನಿಸಿದ್ದಾಗ ಹಳಿ ಮೇಲೆ ಕಂಟೈನರ್ ನಿಂತು ಚಕ್ರವೊಂದು ಸಿಲುಕಿತ್ತು. ರೈಲು ಬರುತ್ತಿದ್ದನ್ನು ಕಂಡು ಚಾಲಕ ಓಡಿ ಹೋಗಿದ್ದ. ಆ ಬಳಿಕ, ರೈಲು ಗುದ್ದಿದ ಪರಿಣಾಮ ಕಂಟೈನರ್ ಸಂಪೂರ್ಣ ಜಖಂಗೊಂಡಿದೆ. ಆದರೆ, ಯಾವುದೇ ಪ್ರಣಾಪಾಯ ಸಂಭವಿಸಿಲ್ಲ.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿ ದುರ್ಘಟನೆ ನಡೆದಿದೆ. ಹುಸ್ಕೂರು ಬಳಿಯ ಆವಲಹಳ್ಳಿ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ದೌಡಾಯಿಸಿದ್ದಾರೆ.
ಬಾಗಲಕೋಟೆ: ಕಾರು- ಟಂಟಂ ಅಪಘಾತ ಕಾರು- ಟಂಟಂ ಮಧ್ಯೆ ಡಿಕ್ಕಿ ಆಗಿ ಅಪಘಾತ ಸಂಭವಿಸಿದ ಘಟನೆ ಬಾಗಲಕೋಟೆ ಡ್ರೀಮ್ಸ್ ಹೊಟೆಲ್ ಬಳಿ ನಡೆದಿದೆ. ವಾಹನಗಳು ಎರಡೂ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ನಾಲ್ವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆನೇಕಲ್ನಲ್ಲಿ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ದುರ್ಮರಣ, ಮೃತರು ಮಹಾರಾಷ್ಟ್ರದವರು
ಇದನ್ನೂ ಓದಿ: ಬ್ಯಾಡರಹಳ್ಳಿಯಲ್ಲಿ ಒಂದೇ ಕುಟುಂಬದ 5 ಮಂದಿ ಸಾವು ಪ್ರಕರಣ; ವೃತ್ತಾಂತ ಘನಘೋರ, ಅಸಲಿ ಸತ್ಯಗಳು ಭೀಕರ
Published On - 9:50 pm, Mon, 20 September 21