‘ತಾನೇ ಆರಂಭಿಸಿದ್ದ ಎಥನಾಲ್ ಕಾರ್ಯಕ್ರಮವನ್ನು ಈಗ ವಿರೋಧಿಸುತ್ತಿದೆಯೇ?’: ಕಾಂಗ್ರೆಸ್ಗೆ ಪ್ರಹ್ಲಾದ್ ಜೋಶಿ ಪ್ರಶ್ನೆ
ಪೆಟ್ರೋಲ್‌ನಲ್ಲಿ ನಿಯಮಮೀರಿ ಎಥನಾಲ್ ಬೆರೆಸಲಾಗಿದೆ ಎಂಬ ಆಹಾರ ಸಚಿವ ರಿಜ್ವಾನ್ ಅರ್ಷದ್ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ರಾಜ್ಯ ಸರ್ಕಾರದ ಈ ಹೇಳಿಕೆ ಆಧಾರರಹಿತ ಹಾಗೂ ಜನರಲ್ಲಿ ಆತಂಕ ಸೃಷ್ಟಿಸುವ ಯತ್ನ ಎಂದಿದ್ದಾರೆ. ತಾನೇ ಆರಂಭಿಸಿದ್ದ ಎಥನಾಲ್ ಕಾರ್ಯಕ್ರಮವನ್ನು ಈಗ ಕಾಂಗ್ರೆಸ್ ವಿರೋಧಿಸುತ್ತಿದೆಯೇ? ಎಂದೂ ಅವರು ಪ್ರಶ್ನಿಸಿದ್ದಾರೆ.

ಬೆಂಗಳೂರು, ನವೆಂಬರ್ 10: ಕರ್ನಾಟಕ ಸರ್ಕಾರದ ಆಹಾರ ಹಾಗೂ ನಾಗರಿಕ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರ ಎಥನಾಲ್ ಮಿಶ್ರಣಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯು ಜವಾಬ್ದಾರಿಯುತ ಆಡಳಿತಕ್ಕಿಂತ ದುರುದ್ದೇಶಪೂರಿತ ಹಾಗೂ ದಾರಿತಪ್ಪಿಸುವ ಸುದ್ದಿಗೆ ಆದ್ಯತೆ ನೀಡಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಪೆಟ್ರೋಲ್‌ನಲ್ಲಿ ಶೇ. 26–31ರಷ್ಟು ಎಥನಾಲ್ ಇದೆ ಎಂದು ಯಾವುದೇ ಆಧಾರವಿಲ್ಲದೆ ಹೇಳಿಕೆ ನೀಡಿ ಆತಂಕ ಸೃಷ್ಟಿಸುವ ಬದಲು, ಮೊದಲಿಗೆ ತಾವು ಅಧಿಕೃತ ತಪಾಸಣಾ ವರದಿಗಳನ್ನು ಪರಿಶೀಲಿಸಬೇಕಿತ್ತು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಲಾದ ಎಲ್ಲಾ 893 ಮಾದರಿಗಳು ನಿಗದಿಪಡಿಸಿದ ಶೇ. 19–21ರ ಮಿತಿಗೆ ಒಳಪಟ್ಟಿವೆ. ಅತ್ಯಂತ ಮುಖ್ಯವಾಗಿ, ತೈಲ ಮಾರಾಟ ಸಂಸ್ಥೆಗಳು (OMCs) ಕರ್ನಾಟಕದಲ್ಲಿ ಪರೀಕ್ಷಿಸಿದ ಎಲ್ಲಾ 56 ಮಾದರಿಗಳು ಸರಾಸರಿ ಶೇ. 19.30ರಷ್ಟು ನಿಯಮಾವಳಿಗೆ ಬದ್ಧವಾಗಿವೆ ಎಂದವರು ತಿಳಿಸಿದ್ದಾರೆ.
‘ಮಾದರಿ ಪರೀಕ್ಷಿಸಿದ ಪ್ರಯೋಗಾಲಯಗಳು ಅನುಮೋದಿತ ಪಟ್ಟಿಯಲ್ಲಿಲ್ಲ’
ಕರ್ನಾಟಕದ ಆಹಾರ ಹಾಗೂ ನಾಗರೀಕ ಇಲಾಖೆಯ ಸಚಿವರಾದ ರಿಜ್ವಾನ್ ಅರ್ಷದ್ ಅವರ ಎಥನಾಲ್ ಮಿಶ್ರಣಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯು ಜವಾಬ್ದಾರಿಯುತ ಆಡಳಿತಕ್ಕಿಂತ ದುರುದ್ದೇಶಪೂರಿತ ಹಾಗೂ ದಾರಿತಪ್ಪಿಸುವ ಸುದ್ದಿಗೆ ಆದ್ಯತೆ ನೀಡಿರುವುದಕ್ಕೆ ಸ್ಪಷ್ಟ ಉದಾಹರಣೆ.
ಪೆಟ್ರೋಲ್‌ನಲ್ಲಿ ಶೇ. 26–31 ರಷ್ಟು ಎಥನಾಲ್ ಇದೆ ಎಂದು ಯಾವುದೇ ಆಧಾರವಿಲ್ಲದೆ ಹೇಳಿಕೆ ನೀಡಿ ಆತಂಕ ಸೃಷ್ಟಿಸುವ ಬದಲು, ಮೊದಲಿಗೆ ತಾವು ಅಧಿಕೃತ ತಪಾಸಣಾ ವರದಿಗಳನ್ನು ಪರಿಶೀಲಿಸಬೇಕಿತ್ತು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಲಾದ ಎಲ್ಲಾ 893 ಮಾದರಿಗಳು ನಿಗದಿಪಡಿಸಿದ ಶೇ. 19–21 ರ ಮಿತಿಗೆ ಒಳಪಟ್ಟಿವೆ.
ಅತ್ಯಂತ ಮುಖ್ಯವಾಗಿ, ತೈಲ ಮಾರಾಟ ಸಂಸ್ಥೆಗಳು (OMCs) ಕರ್ನಾಟಕದಲ್ಲಿ ಪರೀಕ್ಷಿಸಿದ ಎಲ್ಲಾ 56 ಮಾದರಿಗಳು ಸರಾಸರಿ ಶೇ. 19.30 ರಷ್ಟು (ಶೇ. 19–20 ರ ವ್ಯಾಪ್ತಿಯಲ್ಲಿ) ನಿಯಮಾವಳಿಗೆ ಬದ್ಧವಾಗಿವೆ.
ಕರ್ನಾಟಕದ ಪ್ರಮಾಣಪತ್ರಗಳಲ್ಲಿ ಕೇವಲ “ಗ್ಯಾಸ್ ಕ್ರೊಮ್ಯಾಟೋಗ್ರಫಿ ಮೂಲಕ ಎಥನಾಲ್ %” ಎಂದು ಮಾತ್ರ ನಮೂದಿಸಲಾಗಿದೆ. ಅದರಲ್ಲಿ ಪರೀಕ್ಷಾ ವಿಧಾನ, ಮಾಪನಾಂಕ ನಿರ್ಣಯ (calibration), ವಿಲೀನಗೊಳಿಸುವಿಕೆ (dilution) ಅಥವಾ ಉಲ್ಲೇಖಿತ ಮಾದರಿಯ (reference sample) ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ಕರ್ನಾಟಕದಲ್ಲಿ ಶೇ. 26–31 ರಷ್ಟು ಎಥನಾಲ್ ಇದೆ ಎಂದು ತೋರಿಸಿದ ಮಾದರಿಗಳ ಸಾಂದ್ರತೆಯು (Density) ಕೇವಲ 0.742–0.749 g/cc ನಷ್ಟಿತ್ತು. ಇದಕ್ಕೆ ವ್ಯತಿರಿಕ್ತವಾಗಿ, E20 ಪೆಟ್ರೋಲ್ ಅನ್ನು ದೃಢೀಕರಿಸಿದ ತೈಲ ಮಾರಾಟ ಸಂಸ್ಥೆಗಳು ಪರೀಕ್ಷಿಸಿದ ಮಾದರಿಗಳು 0.752–0.760 g/cc ಯಷ್ಟು ಹೆಚ್ಚಿನ ಸಾಂದ್ರತೆಯನ್ನು ದಾಖಲಿಸಿವೆ. ಎಥನಾಲ್ ಪ್ರಮಾಣ ಶೇ. 20 ಕ್ಕಿಂತ ಹೆಚ್ಚಿದ್ದರೆ ಸಾಂದ್ರತೆಯು E20 ಪೆಟ್ರೋಲ್‌ಗಿಂತ ಅತ್ಯಂತ ಹೆಚ್ಚಿರಬೇಕಿತ್ತು, ಆದರೆ ಹಾಗಾಗಿರಲಿಲ್ಲ.
ಅಲ್ಲದೆ, ಈ ಮಾದರಿಗಳನ್ನು ಪರೀಕ್ಷಿಸಿದ ಯಾವುದೇ ಪ್ರಯೋಗಾಲಯಗಳು ಗೆಜೆಟ್‌ನಲ್ಲಿ ಅಧಿಸೂಚಿಸಲಾದ ‘ಶೆಡ್ಯೂಲ್ 3’ ಅನುಮೋದಿತ ಪ್ರಯೋಗಾಲಯಗಳ ಪಟ್ಟಿಯಲ್ಲಿಲ್ಲ.
ಮಾದರಿ ಸಂಗ್ರಹಣೆ ಪ್ರಕ್ರಿಯೆ, ಕಾಯ್ದಿರಿಸಿದ ಮಾದರಿಗಳು (retention samples) ಮತ್ತು ಪ್ರಯೋಗಾಲಯದ ಪ್ರಮಾಣೀಕರಣದಲ್ಲಿರುವ ಈ ಕೊರತೆಗಳು ಪರೀಕ್ಷೆಯ ನಂಬಿಕಾರ್ಹತೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ.
ಆದರೆ, ಕರ್ನಾಟಕ ಸರ್ಕಾರ ಉತ್ತರಿಸಬೇಕಾದ ಇದಕ್ಕಿಂತಲೂ ದೊಡ್ಡ ಪ್ರಶ್ನೆಯೊಂದಿದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತಾನೇ ಆರಂಭಿಸಿದ್ದ ಎಥನಾಲ್ ಕಾರ್ಯಕ್ರಮವನ್ನು ಈಗ ವಿರೋಧಿಸುತ್ತಿದೆಯೇ?
ವಾಸ್ತವವಾಗಿ 2005 ರಲ್ಲಿ, ಅಂದಿನ ಪೆಟ್ರೋಲಿಯಂ ಸಚಿವರಾಗಿದ್ದ ಮಣಿ ಶಂಕರ್ ಅಯ್ಯರ್ ಅವರು ಎಥನಾಲ್ ಲಭ್ಯತೆ ಹೆಚ್ಚಿದರೆ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸುವುದಾಗಿ ಹೇಳಿದ್ದರು. ಆದರೆ ಈಗ ಅದೇ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ.
2014–15 ರಿಂದ ಎಥನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮವು ರೈತರಿಗೆ ₹1.66 ಲಕ್ಷ ಕೋಟಿಗೂ ಹೆಚ್ಚು ಹಣ ಪಾವತಿಯಾಗಲು ನೆರವಾಗಿದೆ. ಇದು ಕಬ್ಬಿಗೆ ಹೆಚ್ಚುವರಿ ಮಾರುಕಟ್ಟೆಯನ್ನು ಸೃಷ್ಟಿಸಿದೆ, ಸಕ್ಕರೆ ಕಾರ್ಖಾನೆಗಳ ನಗದು ಹರಿವನ್ನು ಹೆಚ್ಚಿಸಿದೆ ಮತ್ತು ಕಬ್ಬಿನ ಬಾಕಿ ಹಣವನ್ನು ಸಮಯಕ್ಕೆ ಸರಿಯಾಗಿ ಪಾವತಿಸಲು ಸಹಾಯ ಮಾಡಿದೆ. 2025–26 ರ ಹಂಗಾಮಿನ ಸುಮಾರು ಶೇ. 97 ರಷ್ಟು ಕಬ್ಬಿನ ಬಾಕಿ ಹಣವನ್ನು ಆಗಸ್ಟ್ 20, 2026 ರ ವೇಳೆಗೆ ಈಗಾಗಲೇ ಪಾವತಿಸಲಾಗಿದೆ.
ಈಗ ಕರ್ನಾಟಕದ ಸ್ವಂತ ಎಥನಾಲ್ ಅಂಕಿಅಂಶಗಳನ್ನು ನೋಡಿದರೆ:
– 2025–26 ರಲ್ಲಿ, ಕರ್ನಾಟಕದ ಡಿಸ್ಟಿಲರಿಗಳಿಗೆ 165.89 ಕೋಟಿ ಲೀಟರ್ ಎಥನಾಲ್ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಕಬ್ಬು ಆಧಾರಿತ ಕಚ್ಚಾವಸ್ತುಗಳಿಂದ ಬಂದಿದ್ದು 97.54 ಕೋಟಿ ಲೀಟರ್.
– ಭಾರತದಾದ್ಯಂತ ಎಥನಾಲ್ ಉತ್ಪಾದನೆಗೆ ಬಳಕೆಯಾದ 30 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯಲ್ಲಿ, ಆಗಸ್ಟ್ 31, 2026 ರ ವೇಳೆಗೆ ಕರ್ನಾಟಕ ಮಾತ್ರ 11.92 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಬಳಸಿದೆ, ಅಂದರೆ ದೇಶದ ಒಟ್ಟು ಪ್ರಮಾಣದ ಸುಮಾರು ಶೇ. 40 ರಷ್ಟು.
ಮೂಲಭೂತ ವಿರೋಧಾಭಾಸ:
ಎಥನಾಲ್ ಮಿಶ್ರಣವು ರೈತರಿಗೆ ಹಾನಿಕರ ಎಂದು ಕರ್ನಾಟಕ ಸರ್ಕಾರ ನಂಬುವುದಾದರೆ, ತನ್ನ ಸಕ್ಕರೆ ಉದ್ಯಮಕ್ಕೆ ಹೆಚ್ಚಿನ ಎಥನಾಲ್ ಹಂಚಿಕೆಯನ್ನು ಏಕೆ ಕೋರುತ್ತದೆ?
ಎಥನಾಲ್ ಕಾರ್ಯಕ್ರಮವು ಭಾರತಕ್ಕೆ ₹1.97 ಲಕ್ಷ ಕೋಟಿಗೂ ಹೆಚ್ಚು ವಿದೇಶಿ ವಿನಿಮಯವನ್ನು ಉಳಿಸಲು, ಸುಮಾರು 316 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದನ್ನು ಪರ್ಯಾಯಗೊಳಿಸಲು ಮತ್ತು CO₂ ಹೊರಸೂಸುವಿಕೆಯನ್ನು ಸುಮಾರು 952 ಲಕ್ಷ ಮೆಟ್ರಿಕ್ ಟನ್ನಷ್ಟು ಕಡಿಮೆ ಮಾಡಲು ನೆರವಾಗಿದೆ.
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತನ್ನ ರೈತರ ಪರವಾಗಿ ನಿಲ್ಲುತ್ತಿದೆಯೇ ಅಥವಾ ಅವರ ಆರ್ಥಿಕ ಹಿತಾಸಕ್ತಿಗಿಂತ ರಾಜಕೀಯ ಗಿಮಿಕ್ಗೆ ಆದ್ಯತೆ ನೀಡುತ್ತಿದೆಯೇ?
— Pralhad Joshi (@JoshiPralhad) November 9, 2026
ಕರ್ನಾಟಕದ ಪ್ರಮಾಣಪತ್ರಗಳಲ್ಲಿ ಕೇವಲ “ಗ್ಯಾಸ್ ಕ್ರೊಮ್ಯಾಟೋಗ್ರಫಿ ಮೂಲಕ ಎಥನಾಲ್ %” ಎಂದು ಮಾತ್ರ ನಮೂದಿಸಲಾಗಿದೆ. ಅದರಲ್ಲಿ ಪರೀಕ್ಷಾ ವಿಧಾನ, ಮಾಪನಾಂಕ ನಿರ್ಣಯ , ವಿಲೀನಗೊಳಿಸುವಿಕೆಅಥವಾ ಉಲ್ಲೇಖಿತ ಮಾದರಿಯಬಗ್ಗೆ ಯಾವುದೇ ಉಲ್ಲೇಖವಿಲ್ಲ. ಕರ್ನಾಟಕದಲ್ಲಿ ಶೇ. 26–31ರಷ್ಟು ಎಥನಾಲ್ ಇದೆ ಎಂದು ತೋರಿಸಿದ ಮಾದರಿಗಳ ಸಾಂದ್ರತೆಯು ಕೇವಲ 0.742–0.749 g/cc ನಷ್ಟಿತ್ತು. ಇದಕ್ಕೆ ವ್ಯತಿರಿಕ್ತವಾಗಿ, E20 ಪೆಟ್ರೋಲ್ ಅನ್ನು ದೃಢೀಕರಿಸಿದ ತೈಲ ಮಾರಾಟ ಸಂಸ್ಥೆಗಳು ಪರೀಕ್ಷಿಸಿದ ಮಾದರಿಗಳು 0.752–0.760 g/cc ಯಷ್ಟು ಹೆಚ್ಚಿನ ಸಾಂದ್ರತೆಯನ್ನು ದಾಖಲಿಸಿವೆ. ಎಥನಾಲ್ ಪ್ರಮಾಣ ಶೇ. 20ಕ್ಕಿಂತ ಹೆಚ್ಚಿದ್ದರೆ ಸಾಂದ್ರತೆಯು E20 ಪೆಟ್ರೋಲ್‌ಗಿಂತ ಅತ್ಯಂತ ಹೆಚ್ಚಿರಬೇಕಿತ್ತು, ಆದರೆ ಹಾಗಾಗಿರಲಿಲ್ಲ.ಅಲ್ಲದೆ, ಈ ಮಾದರಿಗಳನ್ನು ಪರೀಕ್ಷಿಸಿದ ಯಾವುದೇ ಪ್ರಯೋಗಾಲಯಗಳು ಗೆಜೆಟ್‌ನಲ್ಲಿ ಅಧಿಸೂಚಿಸಲಾದ ‘ಶೆಡ್ಯೂಲ್ 3’ ಅನುಮೋದಿತ ಪ್ರಯೋಗಾಲಯಗಳ ಪಟ್ಟಿಯಲ್ಲಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್ಗೆ ಶೇ.30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣ ಆರೋಪ: ಕೇಂದ್ರದ ಮೌನ ಪ್ರಶ್ನಿಸಿದ ಸಚಿವ ರಿಜ್ವಾನ್ ಅರ್ಷದ್
ಮಾದರಿ ಸಂಗ್ರಹಣೆ ಪ್ರಕ್ರಿಯೆ, ಕಾಯ್ದಿರಿಸಿದ ಮಾದರಿಗಳು ಮತ್ತು ಪ್ರಯೋಗಾಲಯದ ಪ್ರಮಾಣೀಕರಣದಲ್ಲಿರುವ ಈ ಕೊರತೆಗಳು ಪರೀಕ್ಷೆಯ ನಂಬಿಕಾರ್ಹತೆಯ ಮೇಲೆಯೇ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ಆದರೆ, ಕರ್ನಾಟಕ ಸರ್ಕಾರ ಉತ್ತರಿಸಬೇಕಾದ ಇದಕ್ಕಿಂತಲೂ ದೊಡ್ಡ ಪ್ರಶ್ನೆಯೊಂದಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ತಾನೇ ಆರಂಭಿಸಿದ್ದ ಎಥನಾಲ್ ಕಾರ್ಯಕ್ರಮವನ್ನು ಈಗ ವಿರೋಧಿಸುತ್ತಿದೆಯೇ? ವಾಸ್ತವವಾಗಿ 2005ರಲ್ಲಿ, ಅಂದಿನ ಪೆಟ್ರೋಲಿಯಂ ಸಚಿವರಾಗಿದ್ದ ಮಣಿ ಶಂಕರ್ ಅಯ್ಯರ್ ಅವರು ಎಥನಾಲ್ ಲಭ್ಯತೆ ಹೆಚ್ಚಿದರೆ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸುವುದಾಗಿ ಹೇಳಿದ್ದರು. ಆದರೆ ಈಗ ಅದೇ ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ ಎಂದವರು ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:13 am, Tue, 10 November 26




