AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಂಪತಿ ಮಧ್ಯೆ ಗಲಾಟೆ: ಸೀರೆಯಿಂದ ಕತ್ತು ಬಿಗಿದು ಪತ್ನಿ ಹತ್ಯೆಗೈದ ಪತಿ

ಸೀರೆಯಿಂದ ಕತ್ತು ಬಿಗಿದು ಪತಿಯಿಂದಲೇ ಪತ್ನಿಯನ್ನು ಹತ್ಯೆಗೈದಿರುವಂತಹ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೇತ್ರಾವತಿ ಮೃತ ಪತ್ನಿ. ನೇತ್ರಾವತಿಯನ್ನು ನಿನ್ನೆ ರಾತ್ರಿ ಹತ್ಯೆ ಮಾಡಿ ವೆಂಕಟೇಶ್​ ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ದಂಪತಿ ಮಧ್ಯೆ ಗಲಾಟೆ: ಸೀರೆಯಿಂದ ಕತ್ತು ಬಿಗಿದು ಪತ್ನಿ ಹತ್ಯೆಗೈದ ಪತಿ
ಮೃತ ಪತ್ನಿ
Follow us
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ

Updated on: Apr 07, 2024 | 3:25 PM

ಬೆಂಗಳೂರು, ಏಪ್ರಿಲ್ 07: ಸೀರೆಯಿಂದ ಕತ್ತು ಬಿಗಿದು ಪತಿ (Husband) ಯಿಂದಲೇ ಪತ್ನಿಯನ್ನು ಹತ್ಯೆಗೈದಿರುವಂತಹ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೇತ್ರಾವತಿ ಮೃತ ಪತ್ನಿ. ನೇತ್ರಾವತಿಯನ್ನು ನಿನ್ನೆ ರಾತ್ರಿ ಹತ್ಯೆ ಮಾಡಿ ವೆಂಕಟೇಶ್​ ಎಸ್ಕೇಪ್ ಆಗಿದ್ದಾರೆ. ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೆಂಕಟೇಶ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್​ ಕುಡಿದು ಗಲಾಟೆ ಮಾಡುತ್ತಿದ್ದ. ನೇತ್ರಾವತಿ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಮಾಗಡಿಯ ಗೇರುಪುರ ಮೂಲದ ವೆಂಕಟೇಶ್ ದಂಪತಿ ನಾಲ್ಕು ವರ್ಷಗಳಿಂದ ಕಾಮಾಕ್ಷಿಪಾಳ್ಯದ ರಂಗನಾಥಪುರದಲ್ಲಿ ವಾಸವಾಗಿದ್ದರು.

ಇದನ್ನೂ ಓದಿ: ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆಗೆ ಹೋಗಿದ್ದವನಿಗೆ ಚಾಕು ಇರಿತ, ಬಿಜೆಪಿಗರಿಂದ ಹಲ್ಲೆ ಆರೋಪ

ಹಣ ತರುವಂತೆ ನಿತ್ಯ ಗಂಡ, ಹೆಂಡತಿಯನ್ನು ಪಿಡಿಸುತ್ತಿದ್ದ. ನಿನ್ನೆ ರಾತ್ರಿ ಕೂಡ ಕುಡಿದು ಗಲಾಟೆ ಮಾಡಲಾಗಿದೆ. ಪತ್ನಿ ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಆರೋಪ ಕೇಳಿಬಂದಿದೆ. ಸದ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ರೌಡಿಶೀಟರ್ ನೇಣಿಗೆ ಶರಣು

ಆನೇಕಲ್: ರೌಡಿಶೀಟರ್ ಅರುಣ್ ಅಲಿಯಾಸ್ ಚಿನ್ನಿ (28) ನೇಣಿಗೆ ಶರಣಾಗಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್​​ ತಾಲೂಕಿನ ದಿನ್ನೂರಲ್ಲಿ ನಡೆದಿದೆ. 2019ರಲ್ಲಿ ಲೋಕನಾಥ್ ಕೊಲೆ ಕೇಸ್​​ನಲ್ಲಿ  ಅರುಣ್ ಜೈಲುಸೇರಿದ್ದ.

ಜಾಮೀನಿನ ಮೇಲೆ ರೌಡಿಶೀಟರ್ ಅರುಣ್ ಜೈಲಿನಿಂದ ಹೊರಬಂದಿದ್ದ. ಇತ್ತೀಚೆಗೆ ಮಾನಸಿಕ ಖಿನ್ನತೆಗೊಳಗಾಗಿದ್ದ. ಮನೆಯಲ್ಲಿ ಯಾರೂ ಇಲ್ಲದಿರುವಾಗ ರೌಡಿಶೀಟರ್ ಅರುಣ್ ನೇಣಿಗೆ ಶರಣಾಗಿದ್ದಾನೆ. ಆನೇಕಲ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಮಾಣ ಹಂತದ ಕಟ್ಟಡದಲ್ಲಿ ಯುವಕನ ಮೃತದೇಹ ಪತ್ತೆ

ಬೆಂಗಳೂರು: ಕೋಣನಕುಂಟೆಯಲ್ಲಿ ಹೋಟೆಲ್​​​ ಪಕ್ಕದ ಖಾಲಿ ಜಾಗದಲ್ಲಿ ವೀರೇಶ್​ ಎಂಬುವವರ ಮೃತದೇಹ ಪತ್ತೆ ಆಗಿದೆ. ಕೋಣನಕುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತ ವೀರೇಶ್ ಮೂಲತಃ ರಾಯಚೂರಿನವನು. ಬೆಂಗಳೂರಿನ ಕೋಣನಕುಂಟೆಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. 80 ಅಡಿ ರಸ್ತೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ. ಅದೇ ಕಟ್ಟಡದಲ್ಲಿ ವೀರೇಶ್ ಉಳಿದುಕೊಳ್ಳುತ್ತಿದ್ದ. ಆದರೆ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ: ಜಾಸ್ತಿ ಕೆಲಸ ನೀಡಿದ್ದಕ್ಕೆ ಸಹೋದ್ಯೋಗಿ ಮೇಲೆ ನಡುರಸ್ತೆಯಲ್ಲೇ ಹಲ್ಲೆ: ಐವರ ಬಂಧನ

ಘಟನಾ ಸ್ಥಳದಲ್ಲಿ ರಕ್ತ ಕಲೆಗಳು ಪತ್ತೆಯಾಗಿವೆ. ಆದರೆ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲ. ಸ್ಥಳಕ್ಕೆ FSL ಟೀಂ ಕೂಡ ಭೇಟಿ ನೀಡಿ ಪರಿಶೀಲಿಸಿದೆ. ಸದ್ಯ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಕೋಣನಕುಂಟೆ ಪೊಲೀಸರಿಂದ Crpc 174Cರಡಿ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.