
ಬೆಂಗಳೂರು, ಫೆಬ್ರವರಿ 09: ಆರ್ಮಿ ಗ್ರೂಪ್ ಸಿ ಹುದ್ದೆ ಪರೀಕ್ಷೆ (Army Group C exam) ವೇಳೆ ಕಳ್ಳಾಟ ಆರೋಪ ಹಿನ್ನೆಲೆ 18 ಪರೀಕ್ಷಾರ್ಥಿಗಳನ್ನು (examinee) ಕರೆತಂದ ಬೆಂಗಳೂರಿನ ಹಲಸೂರು ಠಾಣಾ ಪೊಲೀಸರು ವಿಚಾರಣೆ ಮಾಡಿದ್ದಾರೆ. ಫೆಬ್ರವರಿ 08ರಂದು ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆದಿತ್ತು. ಈ ವೇಳೆ ಮೊಬೈಲ್, ಎಲೆಕ್ಟ್ರಿಕ್ ಡಿವೈಸ್ ಬಳಸಿ ನಕಲು ಮಾಡಿರುವ ಆರೋಪ ಕೇಳಿಬಂದಿದೆ. ಮೂರು ಮೊಬೈಲ್ ಹಾಗೂ ಎಲೆಕ್ಟ್ರಿಕ್ ಡಿವೈಸ್ ಜಪ್ತಿ ಮಾಡಲಾಗಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಂಧರ್, ಸಂದೀಪ್ ಬಿನ್ ರಾಜೇಶ್, ಮೊಂಟಿ, ಅಜಯ್ ಕುಮಾರ್ , ಅನುಜ್, ರಾಹುಲ್ ರಾಜೇಂದ್ರ, ಸುಮೀತ್, ಅಮನ್, ಅಂಕಿತ್, ಯೋಗೇಶ್, ವಿಕಾಸ್, ಅಂಕಿತ್, ಅಮನ್ ರೇದು, ರಜತ್, ವಿನಯ್, ಅಂಕಿತ್,
ಅಮನ್ ಕುಮಾರ್ ನಕಲು ಮಾಡಿದ ಪರೀಕ್ಷಾರ್ಥಿಗಳು ಎನ್ನಲಾಗುತ್ತಿದೆ.
ಇದನ್ನೂ ಓದಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ 139 ಬೋಧಕ ಹುದ್ದೆಗಳು; ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಶೇ. 75ರಷ್ಟು ಮೀಸಲಾತಿ
ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆ ಬರೆದಿರುವುದು ಪತ್ತೆ ಆಗಿದೆ. ಪರೀಕ್ಷಾ ಆವರಣದಲ್ಲಿ ಎಲೆಕ್ಟ್ರಾನಿಕ್ ಡಿವೈಸ್ಗಳು ಪತ್ತೆ ಆಗಿವೆ. ಅಲ್ಲದೇ ಅಮನ್ ಮತ್ತು ರಜತ್ ಬ್ಯಾಗ್ಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆ ಆಗಿವೆ.
ಸದ್ಯ ಕರ್ನಲ್ ಮತ್ತು ಸೆಕ್ಯೂರಿಟಿ ಆಫೀಸರ್ ಫಾರ್ ಕಮಾಂಡೆಂಟ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಜ್ಯೋತಿರ್ಲಿಂಗಮ್ ಎಂಬುವವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ. ಹಲಸೂರಿನ 515 ಆರ್ಮಿ ಬೇಸ್ ವರ್ಕ್ಶಾಪ್ನಲ್ಲಿ ಸಿವಿಲ್ ಡಿಫೆನ್ಸ್ ಎಂಪ್ಲಾಯಿ ರೆಕ್ರೂಟ್ಮೆಂಟ್ನ ಗ್ರೂಪ್ ಸಿಯ ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳ ನೇರ ನೇಮಕಾತಿಗಾಗಿ ಫೆಬ್ರವರಿ 08ರಂದು ಲಿಖಿತ ಪರೀಕ್ಷೆ ನಡೆದಿತ್ತು.
ಇದನ್ನೂ ಓದಿ: Home Guard Recruitment 2026: ಶಿವಮೊಗ್ಗದಲ್ಲಿ ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ;10th ಪಾಸಾಗಿದ್ರೆ ಸಾಕು!
ಬೆಳಗ್ಗೆ 10 ಗಂಟೆಯಿಂದ 12 ಗಂಟೆಗಳವರೆಗೆ ನಡೆದಿತ್ತು. ಪರೀಕ್ಷೆ ಸಮಯದಲ್ಲಿ ಒಟ್ಟು 18 ಜನ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಪರೀಕ್ಷೆ ಬರೆದಿರುವುದು ಪತ್ತೆ ಆಗಿದೆ ಎನ್ನಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:54 pm, Mon, 9 February 26