ಆನೇಕಲ್: ರೆಸ್ಟೋರೆಂಟ್​ನಲ್ಲಿ ವಿಐಪಿ ಮಕ್ಕಳ ಗೂಂಡಾಗಿರಿ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

ಯುವತಿಯ ಕಾಲರ್ ಹಿಡಿದು ಎಳೆದಾಡಿ ಊಟ ಕೊಟ್ಟರೆ ಸರಿ, ಇಲ್ದಿದ್ರೆ ಒದೆ ತಿಂತೀಯಾ ಅಂತ‌ ಅವಾಜ್ ಹಾಕಿ ಬೆಂಗಳೂರು ನಗರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪನ ಮಗ ಧನುಶ್ ಕೆಸಿ ದಾಂಧಲೆ ಮಾಡಿದ್ದಾನೆ.

ಆನೇಕಲ್: ರೆಸ್ಟೋರೆಂಟ್​ನಲ್ಲಿ ವಿಐಪಿ ಮಕ್ಕಳ ಗೂಂಡಾಗಿರಿ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ
ರೆಸ್ಟೋರೆಂಟ್​ನಲ್ಲಿ ವಿಐಪಿ ಮಕ್ಕಳ ಗೂಂಡಾಗಿರಿ
Edited By: ಆಯೇಷಾ ಬಾನು

Updated on: Nov 30, 2022 | 11:58 AM

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ನೀಲಾದ್ರಿ ನಗರದ ಬಳಿಯ ವಿಲೇಜ್ ರೆಸ್ಟೋರೆಂಟ್​ನಲ್ಲಿ(Village Restaurant) 15 ರಿಂದ 20 ಯುವಕರ ಗ್ಯಾಂಗ್​​ನಿಂದ ಗೂಂಡಾಗಿರಿ ನಡೆದಿದೆ. ಈ ವೇಳೆ ಪುಂಡರ ಗ್ಯಾಂಗ್​ ರೆಸ್ಟೋರೆಂಟ್​ನ ಮಹಿಳಾ ಸಿಬ್ಬಂದಿ(Assault) ಮೇಲೂ ಹಲ್ಲೆ ನಡೆಸಿದ್ದಾರೆ. ನ.20ರಂದು ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಗಲಾಟೆಯಲ್ಲಿ ಬೆಂಗಳೂರು ನಗರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪನ ಮಗ ಧನುಶ್ ಕೆಸಿ ದರ್ಪ ಮೆರೆದಿದ್ದಾನೆ.

ಕಾಂಗ್ರೆಸ್ ಮುಖಂಡನ ಮಗನ ಬರ್ತ್​ಡೇ ಪಾರ್ಟಿ ಹಿನ್ನೆಲೆ ರಾತ್ರಿ 11:30 ರ ಸುಮಾರಿಗೆ ವಿಲೇಜ್ ರೆಸ್ಟೋರೆಂಟ್​​ಗೆ ಬಂದಿದ್ದ ಯುವಕರ ತಂಡ ಪುಂಡಾಟ ನಡೆಸಿದೆ. ರೆಸ್ಟೋರೆಂಟ್​​ಗೆ ಬಂದಿದ್ದ ಯುವಕರು ಇಪ್ಪತ್ತು ಮಂದಿಗೆ ಊಟ ಆರ್ಡರ್ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಊಟ ಸಿದ್ಧ ಮಾಡಲು ಆಗದು ಎಂದಿದ್ದಾರೆ. ಈ ವೇಳೆ ತಾವು ಆರ್ಡರ್​ ಮಾಡಿದ ಊಟವನ್ನೇ ಕೊಡುವಂತೆ ಆವಾಜ್​ ಹಾಕಿ ರೆಸ್ಟೋರೆಂಟ್​​ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ ತೋರಿದ್ದಾರೆ. ಈ ವೇಳೆ ಯುವಕರ ವರ್ತನೆಯನ್ನು ಪ್ರಶ್ನೆ ಮಾಡಿದ ಸರ್ವೀಸ್​ ಬಾಯ್ ಮೇಲೆ ಹಲ್ಲೆ ನಡೆಸಲಾಗಿದೆ. ಜಗಳ ಬಿಡಿಸಲು ಬಂದ ಇತರೆ ಸಿಬ್ಬಂದಿ ಮೇಲೂ ಹಲ್ಲೆ ನಡೆದಿದೆ. ಗಲಾಟೆಯಲ್ಲಿ ರೆಸ್ಟೋರೆಂಟ್​​ನಲ್ಲಿದ್ದ ಪೀಠೋಪಕರಣ, ಟೇಬಲ್​ಗಳನ್ನು ಧ್ವಂಸ ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿದರೂ ನೆರವಿಗೆ ಬಂದಿಲ್ಲ ಎಂದು ರಾತ್ರಿಪಾಳಿಯಲ್ಲಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರ ವಿರುದ್ಧ ಆರೋಪ ಕೇಳಿ ಬಂದಿದೆ. ಇನ್ನು ಗಾಯಾಳು ಸಿಬ್ಬಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಹಿಳಾ ಸಿಬ್ಬಂದಿ ಮೇಲೆ ಯುವಕರ ದರ್ಪ

ಇನ್ನು ರೆಸ್ಟೋರೆಂಟ್ ಮಹಿಳಾ ಸಿಬ್ಬಂದಿ ಮೇಲೆ ದರ್ಪ ಮೆರೆದಿದ್ದಾರೆ. ಯುವತಿಯ ಕಾಲರ್ ಹಿಡಿದು ಎಳೆದಾಡಿ ಊಟ ಕೊಟ್ಟರೆ ಸರಿ, ಇಲ್ದಿದ್ರೆ ಒದೆ ತಿಂತೀಯಾ ಅಂತ‌ ಅವಾಜ್ ಹಾಕಿ ಬೆಂಗಳೂರು ನಗರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪನ ಮಗ ಧನುಶ್ ಕೆಸಿ ದಾಂಧಲೆ ಮಾಡಿದ್ದಾನೆ. ನಾನ್ ಹೇಳಿದಂಗೆ ಕೇಳ್ಬೇಕು ‌ಇಲ್ದಿದ್ರೆ ಈ ರೆಸ್ಟೋರೆಂಟ್ ಇರಲ್ಲ ಎಂದಿದ್ದಾನೆ. ಕೆ‌ಸಿ ಧನುಶ್ ಅಂಡ್ ಗ್ಯಾಂಗ್ ಕೃತ್ಯಕ್ಕೆ ರೆಸ್ಟೋರೆಂಟ್​ನಲ್ಲಿ ಭಯದ ವಾತಾವರಣವಿದೆ. ರಾಮಚಂದ್ರಪ್ಪ ಕೆಲ‌ ವರ್ಷಗಳ ಹಿಂದಯೇ ಕಾಂಗ್ರೆಸ್ ತೊರೆದಿದ್ದಾರೆ.

Published On - 11:51 am, Wed, 30 November 22

Web contact

TV9 Kannada

Read More
Follow Us