ಸರ್ಕಾರದ ಮನವಿ ತಿರಸ್ಕರಿಸಿದ ವಿಪ್ರೋ: ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯಗೆ ನಿರಾಸೆ
ಬೆಂಗಳೂರಿನ ಹಲವು ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ ರಸ್ತೆ ಗುಂಡಿಗಳಿಂದಾಗಿಯೂ ಸಹ ನಗರದಲ್ಲಿ ವಾಹನ ಸಂಚಾರ ದಟ್ಟಣೆಯಾಗುತ್ತಿದ್ದು, ಈ ಸಂಬಂಧ ವಾಹನ ಸವಾರರು ಪರದಾಡುತ್ತಿದ್ದಾರೆ. ಈ ಬಗ್ಗೆ ಜನಾಕ್ರೋಶ ಎಚ್ಚಾಗುತ್ತಿದ್ದಂತೆಯೇ ರಸ್ತೆ ಗುಂಡಿ ಮುಚ್ಚಲು ಸರ್ಕಾರ ಕ್ರಮಕೈಗೊಂಡಿದೆ. ಇನ್ನೊಂದೆಡೆ ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ಸಿಎಂ ಸಿದ್ದರಾಮಯ್ಯ ಅಜೀಂ ಪ್ರೇಮ್ ಜೀ ಮೊರೆ ಹೋಗಿದ್ದಾರೆ. ಆದ್ರೆ, ಇದೀಗ ಸಿಎಂ ಮಾಡಿದ್ದ ಮನವಿಯನ್ನು ಜೀಮ್ ಪ್ರೇಮ್ ಜೀ ನಯವಾಗಿ ತಿರಸ್ಕರಿಸಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್ 25): ನಗರದ ವರ್ತೂರು ಜಂಕ್ಷನ್ ನಲ್ಲಿ ಟ್ರಾಫಿಕ್ ಸಮಸ್ಯೆ (Bengaluru Traffic) ಕಾರಣ ವಿಪ್ರೋ ಕ್ಯಾಂಪಸ್ ನಲ್ಲಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವಂತೆ ಸಿದ್ದರಾಮಯ್ಯ (Siddaramaiah) ಮಾಡಿದ್ದ ಮನವಿಯನ್ನು ಅಜೀಮ್ ಪ್ರೇಮ್ ಜೀ (Azim Premji) ತಿರಸ್ಕರಿಸಿದ್ದಾರೆ. ಸಾರ್ವಜನಿಕ ರಸ್ತೆಗಾಗಿ ನಮ್ಮ ವಿಪ್ರೋ ಕ್ಯಾಂಪಸ್ (Wipro) ತೆರೆದಿಡಲು ಸಾಧ್ಯವಿಲ್ಲ. ಕ್ಯಾಂಪಸ್ SEZ ಆಗಿದ್ದು, ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನ ಹೊಂದಿದೆ. ನಾವು ನೇರವಾಗಿ ಸರ್ಕಾರದ ಮನವಿ ತಿರಸ್ಕಾರ ಮಾಡುವುದಿಲ್ಲ. ಆದ್ರೆ ಇದರ ಬಗ್ಗೆ ಹೆಚ್ಚುವರಿ ಚರ್ಚೆ ಮಾಡಬೇಕು. ಚರ್ಚೆ ಮಾಡಿದ್ರೆ ಮಾತ್ರ ಲಾಂಗ್ ಟರ್ಮ್ ಸಮಸ್ಯೆ ಪರಿಹಾರ ಆಗುತ್ತದೆ ಎಂದು ನಯವಾಗಿ ಸಿದ್ದರಾಮಯ್ಯನವರ ಪತ್ರಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಇದರೊಂದಿಗೆ ಸಿಎಂ ಸಿದ್ದರಾಮಯ್ಯನವರಿಗೆ ನಿರಾಸೆಯಾಗಿದೆ.
ಬೆಂಗಳೂರಿನ ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರ ವರ್ತುಲ ರಸ್ತೆ ಕಾರಿಡಾರ್ ನಲ್ಲಿ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಸಿಎಂ ಸಿದ್ದರಾಮಯ್ಯನವರು ಅಜೀಂ ಪ್ರೇಮ್ ಜೀ ಅವರಿಗೆ ಪತ್ರ ಬರೆದಿದ್ದು, ಹೊರ ವರ್ತುಲ ರಸ್ತೆಯಲ್ಲಿರುವ (ಒಆರ್‌ಆರ್) ವಿಪ್ರೋ ಕ್ಯಾಂಪಸ್ ( Wipro Campus) ಮೂಲಕ ಸಾರ್ವಜನಿಕರ ವಾಹನ ಸಂಚಾರಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ಆದ್ರೆ, ಸಿಎಂ ಮನವಿಯನ್ನಯ ವಿಪ್ರೋ ಸಂಸ್ಥೆ ತಿರಸ್ಕರಿಸಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಸಮಸ್ಯೆ: ಅಜೀಂ ಪ್ರೇಮ್ ಮೊರೆ ಹೋದ ಸಿಎಂ ಸಿದ್ದರಾಮಯ್ಯ, ಪತ್ರದಲ್ಲೇನಿದೆ?
ವಿಪ್ರೋ ಸ್ಪಷ್ಟನೆ
ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ನಿಭಾಯಿಸುವಲ್ಲಿ ಕಾರ್ಪೊರೇಟ್ ಬೆಂಬಲ ಕೋರಿದ್ದಕ್ಕೆ ಅಜೀಂ ಪ್ರೇಮ್ ಜೀ ಸಿದ್ದರಾಮಯ್ಯನವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ, ಅಷ್ಟೇ ನಯವಾಗಿ ಸಿದ್ದರಾಮಯ್ಯನವರ ಮನವಿಯನ್ನು ತಿರಸ್ಕರಿಸಿದ್ದಾರೆ.
ಇದು ಒಂದು ರಸ್ತೆ ಓಪನ್ ಮಾಡುವುದು ವಿಚಾರವಲ್ಲ. ಇದು ಒಂದು ಪ್ರಕ್ರಿಯೆ. ನಾವೂ ಕೂಡ ಸರ್ಕಾರಕ್ಕೆ ಬೆಂಬಲ ನೀಡಬೇಕು . ವೈಜ್ಞಾನಿಕವಾಗಿ ಇದರ ಬಗ್ಗೆ ಅಧ್ಯಯನ ಮಾಡಬೇಕಾಗಿದೆ. ಲಾಂಗ್ ಟರ್ಮ್ ಆಗಿ ಸರ್ಕಾರಕ್ಕೆ ಬೆಂಬಲಿಸಬೇಕಾಗುತ್ತದೆ. ಈಗ ಸದ್ಯಕ್ಕೆ ಕ್ಯಾಂಪಸ್ ರಸ್ತೆ ಓಪನ್ ಮಾಡುವುದಕ್ಕೆ ಆಗಲ್ಲ. ಯಾಕಂದ್ರೆ ಇದು ಖಾಸಗಿ ಸ್ಥಳ. ಮುಖ್ಯವಾಗಿ ಎಕಾನಾಮಿಕ್ ಪರ್ಪಸ್ ಆಗಿರುವ ಸ್ಥಳ. ಹಾಗಂತ ನಾವು ನೇರವಾಗಿ ಸರ್ಕಾರದ ಮನವಿ ತಿರಸ್ಕಾರ ಮಾಡುವುದಿಲ್ಲ. ಆದ್ರೆ ಇದರ ಬಗ್ಗೆ ಹೆಚ್ಚುವರಿ ಚರ್ಚೆ ಮಾಡಬೇಕು. ಚರ್ಚೆ ಮಾಡಿದ್ರೆ ಮಾತ್ರ ಲಾಂಗ್ ಟರ್ಮ್‌ಸಮಸ್ಯೆ ಪರಿಹಾರ ಆಗುತ್ತದೆ ಎಂದು ವಿಪ್ರೋ ಚೇರ್ಮನ್ ಅಜೀಮ್ ಪ್ರೇಮ್ ಜೀ ಸ್ಪಷ್ಟಪಡಿಸಿದ್ದಾರೆ.
ಸರ್ಜಾಪುರ ವಿಪ್ರೋ ಕ್ಯಾಂಪಸ್‌ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ದೀರ್ಘಕಾಲಿಕ ಪರಿಹಾರ ಅಲ್ಲ. ಸರ್ಜಾಪುರದ ವಿಪ್ರೋ ಕ್ಯಾಂಪಸ್ ಜಾಗತಿಕ ಗ್ರಾಹಕರಿಗೆ ಸೇವೆಗಳನ್ನು ಒದಗಿಸುವ ವಿಶೇಷ ಆರ್ಥಿಕ ವಲಯ. ನಮ್ಮ ಒಪ್ಪಂದದ ನಿಯಮಗಳು ಆಡಳಿತ, ಪ್ರವೇಶ ನಿಯಂತ್ರಣ ಮಾನದಂಡಗಳು ಕಡ್ಡಾಯಗೊಳಿಸಿದೆ. ಖಾಸಗಿ ಆಸ್ತಿಯ ಮೂಲಕ ಸಾರ್ವಜನಿಕ ವಾಹನ ಸಂಚಾರವು ಸುಸ್ಥಿರ, ದೀರ್ಘಕಾಲೀನ ಪರಿಹಾರವಲ್ಲ ಎಂದಿದ್ದಾರೆ.
ಕೇವಲ ಕ್ಯಾಂಪಸ್ ಪ್ರವೇಶವನ್ನು ಸಾರ್ವಜನಿಕ ಸಂಚಾರಕ್ಕೆ ತೆರೆದಿಡುವುದರಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಬದಲಾಗಿ, ವೈಜ್ಞಾನಿಕ ಅಧ್ಯಯನದ ಮೂಲಕ ದೀರ್ಘಕಾಲೀಕ ಯೋಜನೆ ರೂಪಿಸುವುದು ಅತ್ಯವಶ್ಯಕ. ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕರ್ನಾಟಕ ಸರ್ಕಾರದೊಂದಿಗೆ ಕೈ ಜೋಡಿಸುತ್ತೇವೆ. ರೇಶ್ಮಿ ಶಂಕರ್ ನೇತೃತ್ವದ ನಮ್ಮ ತಂಡ ನಿಮ್ಮ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿ ಈ ಬಗ್ಗೆ ಚರ್ಚಿಸಲಿದೆ ಎಂದು ಪತ್ರದಲ್ಲಿಉಲ್ಲೇಖಿಸಿದ್ದಾರೆ.
Published On - 6:47 pm, Thu, 25 September 25




