AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Trend in Crime: ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ ತಮಿಳುನಾಡು ಮೂಲದ ಕುಖ್ಯಾತ ಖರ್ತನಾಕ್ ಗ್ಯಾಂಗ್: ನಗರದ ಅಪಾರ್ಟ್ಮೆಂಟ್​ಗಳೇ ಇವರ ಟಾರ್ಗೆಟ್

ಈ ಕಳ್ಳರ ಕೈಚಳಕದ ಸಿಸಿಟಿವಿ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ಮನೆಯಲ್ಲಿ ಕಂತೆ ಕಂತೆ ಹಣ ಇದ್ದರು ಖತರ್ನಾಕ್ ಗ್ಯಾಂಗ್ ಹಣ ಮುಟ್ಟಲ್ಲ. ಅದರ ಬದಲಿಗೆ ಮನೆಯಲ್ಲಿರೋ ಚಿನ್ನವೇ ಇವರ ಟಾರ್ಗೆಟ್.

New Trend in Crime: ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ ತಮಿಳುನಾಡು ಮೂಲದ ಕುಖ್ಯಾತ ಖರ್ತನಾಕ್ ಗ್ಯಾಂಗ್: ನಗರದ ಅಪಾರ್ಟ್ಮೆಂಟ್​ಗಳೇ ಇವರ ಟಾರ್ಗೆಟ್
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 23, 2022 | 3:09 PM

Share

ಬೆಂಗಳೂರು: ನಗರದಲ್ಲಿ ಕುಖ್ಯಾತ ಅಪಾರ್ಟ್ಮೆಂಟ್ (Apartments) ಕಳ್ಳರ ಗ್ಯಾಂಗ್ ಬೀಡು ಬಿಟ್ಟಿದ್ದು, ಈ ಗ್ಯಾಂಗ್​​ ಕಳ್ಳತನ ಮಾಡುವ ವಿಧಾನವೇ ಡಿಫರೆಂಟ್. ಅಪಾರ್ಟ್ಮೆಂಟ್​​ಗಳೇ ಇವರ ಟಾರ್ಗೆಟ್. ತಮಿಳುನಾಡು ಮೂಲದ ಕುಖ್ಯಾತ ಖರ್ತನಾಕ್ ಗ್ಯಾಂಗ್,(Gang) ಅಪಾಟ್ಮೆಂಟ್ ಕಳ್ಳತನಕ್ಕೆ ಸಿನಿಮೀಯ ಸ್ಟೈಲ್​ನಲ್ಲಿ ಎಂಟ್ರಿಕೊಡುತ್ತಾರೆ. ಕಾಂಪೌಂಡ್ ಜಿಗಿದು ಫ್ಲಾಟ್​ನ ವಿಂಡೋ ಮೂಲಕ ಲಗ್ಗೆ ಇಡುತ್ತಾರೆ. ಅದರಲ್ಲು ಸ್ಲೈಡ್ಸ್ ವಿಂಡೋಗಳ ಮೂಲಕ ಮನೆಗಳ ಒಳಗಡೆ ಗ್ಯಾಂಗ್ ಎಂಟ್ರಿಯಾಗುತ್ತೆ. ಈ ಕಳ್ಳರ ಕೈಚಳಕದ ಸಿಸಿಟಿವಿ ದೃಶ್ಯ ಟಿವಿ9ಗೆ ಲಭ್ಯವಾಗಿದೆ. ಮನೆಯಲ್ಲಿ ಕಂತೆ ಕಂತೆ ಹಣ ಇದ್ದರು ಖತರ್ನಾಕ್ ಗ್ಯಾಂಗ್ ಹಣ ಮುಟ್ಟಲ್ಲ. ಅದರ ಬದಲಿಗೆ ಮನೆಯಲ್ಲಿರೋ ಚಿನ್ನವೇ ಇವರ ಟಾರ್ಗೆಟ್. ಐಷಾರಾಮಿ ಮನೆಗಳಲ್ಲಿ ಸಿಸಿಟಿವಿ ಕಂಡ ಕೂಡಲೇ ಮುಖಕ್ಕೆ ಮಾಸ್ಕ್​​ ಧರಿಸಿಕೊಂಡು ಕಾರ್ಯಚರಣೆಗಿಳಿಯುತ್ತಾರೆ. ತಮಿಳುನಾಡು ಮೂಲದ ಗ್ಯಾಂಗ್​ನ ಕಿಂಗ್​ಪಿನ್ ಈಶೈರಾಜ್ ಈಗ ಸಂಪಿಗೆ ಹಳ್ಳಿ ಪೊಲೀಸರ ಬಲೆಗೆ ಬಿದಿದ್ದಾನೆ. ಈಶೈರಾಜ್ ಅಂಡ್ ಗ್ಯಾಂಗ್​ನ ಕಾಯಕವೇ ಕಳ್ಳತನ.

ಇದನ್ನೂ ಓದಿ: ಕಾನ್ಸ್ಟೇಬಲ್ ಮನೆಯಲ್ಲಿ ಬುಸುಗುಡುಲು ಆರಂಭಿಸಿವೆ 15 ನಾಗರಹಾವಿನ ಮರಿಗಳು! ವಿಡಿಯೋ ಇಲ್ಲಿದೆ ನೋಡಿ

ಬೆಂಗಳೂರಿನ ಹತ್ತಾರು ಕಡೆ ಕೈಚಳಕ ತೋರಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಸಂಜಯನಗರ ,ದೇವನಹಳ್ಳಿ, ಸಂಪಿಗೆಹಳ್ಳಿ, ಯಲಹಂಕ, ಅಮೃತಯಹಳ್ಳಿ ಹೀಗೆ 21 ಕಡೆ ಕೈಚಳಕ ತೋರಿಸಿದ್ದಾರೆ. ಬೆಂಗಳೂರಿನ ಐಷಾರಾಮಿ ಹೋಟೆಲ್​ಗಳಲ್ಲಿ ರೂಂ ಬುಕ್ ಮಾಡಿಕೊಂಡು ಗ್ಯಾಂಗ್ ವಾಸ ಮಾಡುತ್ತಿತ್ತು. ಪೊಲೀಸರಿಗೆ ಸಿಕ್ಕಿಬಿಳುತ್ತೇವೆ ಅನ್ನೋ ಕಾರಣಕ್ಕೆ ಮೊಬೈಲ್ ಪೋ‌ನ್ ಬಳಸುತ್ತಿರಲಿಲ್ಲ. ಸದ್ಯ ಸಂಪಿಗೆ ಹಳ್ಳಿ ಪೊಲೀಸರಿಂದ ಚಾಲಕಿ ಕಳ್ಳನ ವಿಚಾರಣೆ ನಡೆಯುತ್ತಿದ್ದು, ಗ್ಯಾಂಗ್​ನ ಉಳಿದವರ ಪತ್ತೆಗಾಗಿ ಸಂಪಿಗೆಹಳ್ಳಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ
Image
Karnataka Rain: ಬೆಂಗಳೂರಿನಲ್ಲಿ ನಿಲ್ಲದ ಮಳೆಯ ಅಬ್ಬರ; ಕರಾವಳಿಯಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಣೆ
Image
ಬೆಂಗಳೂರು ಹೊರಮಾವು ಪ್ರದೇಶದಲ್ಲಿ 300-400 ಮನೆಗಳು ಜಲಾವೃತ! 24 ಗಂಟೆಗೆ 114 ಮಿಮೀ ಮಳೆ ದಾಖಲು
Image
Video: ಕೆಸರಿನಲ್ಲಿ ಸಿಲುಕಿದ ಮರ್ಸಿಡಿಸ್, ನೀರು ತುಂಬಿದ ರಸ್ತೆ, ಬೆಂಗಳೂರಿನ ಯಾವ ಎರಿಯಾದಲ್ಲಿ ಎಷ್ಟು ಮಳೆ?
Image
ನೀರು ನುಗ್ಗಿರುವ ಮನೆಗಳಿಗೆ 25 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಬೀಗ ಹಾಕಿದ ಮನೆಯೆ ಈತನ ಟಾರ್ಗೆಟ್: ಚಾಲಾಕಿ ಕಳ್ಳ ಅಂದರ್

ಈ ಕೆಲ ದಿನಗಳ ಹಿಂದೆ ಇದೇ ರೀತಿಯ ಘಟನೆಯೊಂದು ವಿಜಯಗರದಲ್ಲಿ ನಡೆದಿತ್ತು. ಚಾಲಾಕಿ ಕಳ್ಳ ಹಣಕ್ಕಾಗಿ ಕಳ್ಳತನ ಮಾಡಲು ಅಪಾರ್ಟ್‌ಮೆಂಟ್​​ಗಳನ್ನೇ ಗುರಿಯಾಗಿಸಿಕೊಂಡಿದ್ದ. ಫ್ಲಂಬರ್, ಎಲೆಕ್ಟ್ರಿಕಲ್ ಸೋಗಿನಲ್ಲಿ ಅಪಾರ್ಟ್​ಮೆಂಟ್ ನುಗ್ಗುತ್ತಿದ್ದ. ಬೀಗ ಹಾಕಿದ ಮನೆಯನ್ನ ಟಾರ್ಗೆಟ್ ಮಾಡಿಕೊಂಡು ಅದೇ ಅಪಾರ್ಟ್​ಮೆಂಟ್​ನ ಟೆರೇಸ್​ನಲ್ಲಿ‌ ಉಳಿದುಕೊಳ್ಳುತ್ತಿದ್ದ‌. ರಾತ್ರಿ ವೇಳೆ ಮನೆಯ ಕಿಟಕಿ ಮುರಿದು ಕಳ್ಳತನ ಮಾಡುತ್ತಿದ್ದ. ಅದೇ ರೀತಿ ಕಳೆದ ಮಾರ್ಚ್​ನಲ್ಲಿ ಸಂಜಯ್ ನಗರದ ಮನೆಯೊಂದರಲ್ಲಿ ಲಾಕರ್ ಸಮೇತ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್ ಸ್ಪೆಕ್ಟರ್ ಬಾಲರಾಜ್, ತನಿಖೆ ನಡೆಸಿ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿ ಬಂಧನದಿಂದ 12 ಪ್ರಕರಣ ಪತ್ತೆಯಾಗಿದ್ದು 30 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ದುಬಾರಿ ವಾಚ್​​ಗಳ ವಶಕ್ಕೆ ಪಡೆಯಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!