ವೈರಲ್ ಫೀವರ್ ಜೊತೆಗೆ ಮಕ್ಕಳನ್ನು ಕಾಡುತ್ತಿದೆ ಕಾಲು ಬಾಯಿ ರೋಗ!
ಬೆಂಗಳೂರಿನಲ್ಲಿ ಕೈ-ಬಾಯಿ-ಕಾಲು ರೋಗದ ಪ್ರಕರಣಗಳು ಹೆಚ್ಚುತ್ತಿವೆ. ಶಾಲಾ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಈ ರೋಗವು ಒಂದು ಮಗುವಿನಿಂದ ಇನ್ನೊಂದು ಮಗುವಿಗೆ ಬೇಗನೆ ಹರಡುತ್ತದೆ. ಕೈ, ಕಾಲು ಮತ್ತು ಬಾಯಿಯ ಸುತ್ತ ಕೆಂಪು ಗುಳ್ಳೆಗಳು ರೋಗದ ಪ್ರಮುಖ ಲಕ್ಷಣ. ವೈದ್ಯರ ಸಲಹೆಯಂತೆ, ಈ ಲಕ್ಷಣಗಳು ಕಂಡುಬಂದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ವೈದ್ಯರು ಸಲಹೆ ನೀಡಿದ್ದಾರೆ. ಚಳಿಗಾಲದಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಎಚ್ಚರಿಕೆ ಅಗತ್ಯ.
ಬೆಂಗಳೂರು, ಡಿಸೆಂಬರ್ 22: ಹವಾಮಾನ ಬದಲಾವಣೆಯಿಂದ ವೈರಲ್ ಫೀವರ್ ಜೊತೆಗೆ ಮಕ್ಕಳನ್ನು ಕಾಲು ಬಾಯಿ ರೋಗ (Foot and mouth disease) ಕಾಡುತ್ತಿದೆ. ನಗರದ ಹಲವು ಅಪಾರ್ಟ್ಮೆಂಟ್ ಹಾಗೂ ಶಾಲೆಗಳಲ್ಲಿ ಕೈ ಬಾಯಿ ಕಾಲು ರೋಗ ಹರಡುತ್ತಿದೆ. ಇದರಿಂದ ಪೋಷಕರು ಆತಂಕಗೊಂಡಿದ್ದಾರೆ.
ಚಳಿಗಾಲದ ಸಮಯದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ ಸದ್ಯ ರಾಜ್ಯದಲ್ಲಿಯೂ ಕೈ ಬಾಯಿ ಕಾಲು ರೋಗ ಪ್ರಕರಣಗಳು ಅತಿ ಹೆಚ್ಚು ಪತ್ತೆಯಾಗುತ್ತಿದ್ದು ಪೋಷಕರು ಆತಂಕಗೊಂಡಿದ್ದಾರೆ. 15 ವರ್ಷ ವಯಸ್ಸಕ್ಕಿಂತ ಕಡಿಮೆ ವಯಸ್ಸಿನ ಶಾಲಾ ಮಕ್ಕಳಲ್ಲಿ ಹೆಚ್ಚಾಗಿ ಇದು ಕಂಡು ಬರುತ್ತಿದ್ದು ಮಕ್ಕಳ ತುಟಿ, ಕಾಲು, ಕೈ ಸುತ್ತ ಕೆಂಪು ಗುಳ್ಳೆಗಳು ಕಂಡು ಬರುತ್ತಿವೆ. ಕೆಂಪು ಗುಳ್ಳೆಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಕಾಣಿ. ಗುಳ್ಳೆಗಳು ಕಂಡು ಬಂದಲ್ಲಿ, ಪೋಷಕರು ಮಕ್ಕಳನ್ನು ಒಂದು ವಾರಗಳ ಕಾಲ ಶಾಲೆಗೆ ಕಳುಹಿಸ ಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಗೊರಕೆಯಿಂದ ನಿದ್ರೆ ಬರುತ್ತಿಲ್ಲವೇ? ಈ ಸಿಂಪಲ್ ಸಲಹೆ ಅನುಸರಿಸಿ
ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ರೋಗವು ಎಂಜಿಲು, ಉಸಿರು, ಸ್ಪರ್ಶದ ಮೂಲಕ ಇದು ಬೇಗ ಮಕ್ಕಳಿಗೆ ಹರಡುತ್ತಿದ್ದು ಸೂಕ್ತ ಎಚ್ಚರಿಕೆ ವಹಿಸುವಂತೆ ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರಿಗೆ ವಾಣಿ ವಿಲಾಸ್ ಆಸ್ಪತ್ರೆ ಮಕ್ಕಳ ತಜ್ಞ ಡಾ. ಶಿವಪ್ರಕಾಶ್ ಸೂಚನೆ ನೀಡಿದ್ದಾರೆ. ರೋಗದ ಲಕ್ಷಣಗಳು
ಮಗುವಿನ ಬಾಯಿ ಸುತ್ತ ಕೆಂಪು ಗುಳ್ಳೆ , ಅದೇ ರೀತಿ ಕೈ ಕಾಲುಗಳಲ್ಲಿ ತುರಿಕೆ ತರಿಸುವ ಗುಳ್ಳೆಗಳು ರೋಗದ ಪ್ರಮುಖ ಲಕ್ಷಣವಾಗಿದೆ. ರೋಗ ಕಾಣಿಸಿಕೊಂಡ ಮಗುವಿನಿಂದ ಬಹುಬೇಗ ಮತ್ತೊಂದು ಮಗುವಿಗೆ ರೋಗ ಹರಡುವ ಸಾಧ್ಯತೆ ಇದೆ.
ಚಳಿಗಾಲ ಆಗಿರುವುದರಿಂದ ಮಕ್ಕಳು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಾಗಿ ವೈದ್ಯರು ಚಳಿಗಾಲ ಮುಗಿಯುವವರೆಗೂ ಎಚ್ಚರವಹಿಸುವಂತೆ ಸಲಹೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ