ಅಂಗಡಿಯಲ್ಲಿ ಸಿಗುವ 5 ರೂ. ಬೋಟಿಗೆ ಬೆಂಗಳೂರು ಪಬ್​​ನಲ್ಲಿ 150 ರೂ. ಪಾವತಿಸಿದ ಯುವಕ: ಇದು ದೋಚುವ ಒಂದು ಕಲೆ

ಬೆಂಗಳೂರಿನ ಪಬ್‌ಗಳಲ್ಲಿನ ದುಬಾರಿ ಆಹಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಇಂದಿರಾನಗರದ ಪಬ್ ಒಂದರಲ್ಲಿ 150 ರೂ.ಗೆ 'ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್' ಹೆಸರಿನಲ್ಲಿ ಕೇವಲ ಫ್ರೈಯಮ್ಸ್‌ ನೀಡಿದ ಘಟನೆ ವೈರಲ್ ಆಗಿದೆ. ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದು, ಬೆಲೆ ವಂಚನೆ ಮತ್ತು ಬೆಂಗಳೂರಿನ ಊಟದ ಸಂಸ್ಕೃತಿಯನ್ನು ಟೀಕಿಸಿದ್ದಾರೆ. ಇದು ದುಬಾರಿ ಪಬ್‌ಗಳ ವಿರುದ್ಧ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಅಂಗಡಿಯಲ್ಲಿ ಸಿಗುವ 5 ರೂ. ಬೋಟಿಗೆ ಬೆಂಗಳೂರು ಪಬ್​​ನಲ್ಲಿ 150 ರೂ.  ಪಾವತಿಸಿದ ಯುವಕ: ಇದು ದೋಚುವ ಒಂದು ಕಲೆ
ಬೆಂಗಳೂರು ಪಬ್
Edited By:

Updated on: Apr 02, 2026 | 1:07 PM

ಬೆಂಗಳೂರು, ಏ.2: ಬೆಂಗಳೂರಿನಲ್ಲಿ ಅಣಬೆಯಂತೆ ಅಲ್ಲಲ್ಲಿ ಪಬ್​​​ಗಳು ಇದೆ. ಅದರಲ್ಲೂ ಕೆಲವೊಂದು ಪಬ್​​​​ ತುಂಬಾ ದುಬಾರಿಯಾಗಿರುತ್ತದೆ. ಇದೀಗ ಈ ದುಬಾರಿ ಪಬ್​​ಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಎಕ್ಸ್​​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಳ್ಳಲಾಗಿದೆ. ಜನಪ್ರಿಯ ಪಬ್‌ಗೆ ಭೇಟಿ ನೀಡಿದಾಗ, ಮೆನುವಿನಲ್ಲಿ ಹೆಚ್ಚು ವಿವರವಾದ ಖಾದ್ಯದ ಬದಲಿಗೆ ಫ್ರೈಯಮ್‌ಗಳನ್ನು ನೀಡಲಾಗಿದೆ ಎಂದು ಗ್ರಾಹಕರೊಬ್ಬರು ಹೇಳಿಕೊಂಡಿದ್ದಾರೆ. ಇದೀಗ ಇಂದಿರಾನಗರದ ಪಬ್​​ ಆಗಿರುವ ಅನುಭವದ ಬಗ್ಗೆ ಅರುಣ್‌ರಾಜ್ ಪತ್ತಾರ್ ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ.

ಮೆನು ಮತ್ತು ಸ್ವೀಕರಿಸಿದ ಖಾದ್ಯದ ಚಿತ್ರವನ್ನು ಹಂಚಿಕೊಂಡ ಪತ್ತಾರ್, “ಇದನ್ನು ಚಿಲ್ಲಿ ಡಸ್ಟೆಡ್ ಗೋಲ್ಡ್ ಫಿಂಗರ್ಸ್ ಎಂದು ಕರೆಯಲಾಗುತ್ತಿತ್ತು. ನಾನು ಇದನ್ನು ಆರ್ಡರ್ ಮಾಡಿದಾಗ ಅವರು ನನಗೆ ತಂದಿದ್ದು ಇದನ್ನೇ. ಪ್ರಪಂಚದಲ್ಲಿ ಹಾಗೂ ನಮ್ಮ ರಕ್ತ ಸಂಬಂಧದಲ್ಲಿ ಇದಕ್ಕೆ 150 ಪಾವತಿಸಿ ಮೊದಲಿಗ ಎಂದು ಇದರಲ್ಲಿ ಬರೆದುಕೊಂಡಿದ್ದಾರೆ. ಎಕ್ಸ್​​ನಲ್ಲಿ ಎರಡು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದಾರೆ. ಒಂದು ಪಬ್​​ ಮೆನು ಬಗ್ಗೆ ಇನ್ನೊಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​:

ಇವರ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ, ಈ ಬಗ್ಗೆ ನೆಟ್ಟಿಗರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದುಬಾರಿ ತಿನಿಸುಗಳಲ್ಲಿ ಬೆಲೆ ನಿಗದಿ ಬಗ್ಗೆ ಟೀಕೆಯನ್ನು ಮಾಡಿದ್ದಾರೆ. ಅಬ್ಬಾ ನಾನು ಒಬ್ಬನೇ ಇಂತಹ ವಂಚನೆಗೆ ಒಳಾಗಾಗಿಲ್ಲ ಎಂದು ಒಬ್ಬರು ಸಂತೋಷದಿಂದ ಹೇಳಿದ್ದಾರೆ. ಇದನ್ನು ಉತ್ತಮ ಮಾರ್ಕೆಟಿಂಗ್‌ನೊಂದಿಗೆ ಸರಳವಾದ ವಸ್ತುಗಳನ್ನು ಅತ್ಯಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಎಂದು ಹೇಳುತ್ತಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ: ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು, ಬೇಸರದಿಂದ ತಾಯಿ ಆತ್ಮಹತ್ಯೆ

ಕೊನೆಗೂ ನನ್ನಂತೆಯೇ ವಂಚನೆಗೊಳಗಾದ ವ್ಯಕ್ತಿಯನ್ನು ನೋಡಿದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಕೆಲವು ನೆಟ್ಟಿಗರು ಬೆಂಗಳೂರಿನ ಊಟ ಸಂಸ್ಕೃತಿಯನ್ನು ಟೀಕಿಸಿದ್ದಾರೆ. ಬೆಂಗಳೂರು ಯಾವುದೇ ಬೆಲೆಗೆ ಏನು ಬೇಕಾದರೂ ಮಾರಾಟ ಮಾಡಬಹುದು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಸಾಮಾನ್ಯ ಭಾಷೆಯಲ್ಲು ಬೋಟಿ ಎಂದು ಕರೆಯುತ್ತಾರೆ. ಇದು ನಮ್ಮ ಮನೆದಲ್ಲಿರುವ ಅಂಗಡಿಯಲ್ಲಿ 5 ರೂ.ಗೆ ಸಿಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:02 pm, Thu, 2 April 26

Follow Us