AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನನ್ನು ಕ್ಷಮಿಸು’: ಡೆತ್​ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಡೆತ್​ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾಗಿರುವಂತಹ ಘಟನೆ ಬೆಂಗಳೂರಿನ ಸಿಕೆ ಅಚ್ಚುಕಟ್ಟುವಿನಲ್ಲಿ ನಡೆದಿದೆ. ಇಂದು ಬೆಳಗ್ಗೆ ತಂದೆ ಪುತ್ರನ ರೂಮ್​ಗೆ ಹೋಗಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಡೆತ್​ನೋಟ್​ನಲ್ಲಿ ನನ್ನನ್ನು ಕ್ಷಮಿಸು ಎಂದು ಬರೆದಿದ್ದಾನೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ನನ್ನನ್ನು ಕ್ಷಮಿಸು': ಡೆತ್​ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 04, 2025 | 12:17 PM

Share

ಬೆಂಗಳೂರು, ಆಗಸ್ಟ್​ 04: ಡೆತ್​ನೋಟ್ ಬರೆದಿಟ್ಟು 7ನೇ ತರಗತಿ ವಿದ್ಯಾರ್ಥಿ (student)  ನೇಣುಬಿಗಿದುಕೊಂಡು ಆತ್ಮಹತ್ಯೆ (death) ಮಾಡಿರುವಂತಹ ಘಟನೆ ನಗರದ ಸಿಕೆ ಅಚ್ಚುಕಟ್ಟುವಿನಲ್ಲಿ ನಡೆದಿದೆ. ಗಾಂಧಾರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬೆಳಗ್ಗೆ ತಂದೆ ಬಾಲಕನ ರೂಮ್​ಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಗಾಂಧಾರ್​ನ ತಂದೆ ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಾರೆ. ತಾಯಿ ಸವಿತಾ ಖ್ಯಾತ ಜಾನಪದ ಗಾಯಕಿ. ಸವಿತಾ ಅವರು ಕಳೆದ ಶುಕ್ರವಾರ ಕಾರ್ಯಕ್ರಮದ ಹಿನ್ನಲೆ ಆಸ್ಟ್ರೇಲಿಯಾಗೆ ತೆರಳಿದ್ದರು. ಸದ್ಯ ತಾಯಿ ವಾಪಸ್​​ ಬರುವವರೆಗೆ ಮರಣೋತ್ತರ ಪರೀಕ್ಷೆ ನಡೆಸದೇ ಇರಲು ತಿರ್ಮಾನಿಸಲಾಗಿದೆ.

ಡೆತ್​ನೋಟ್​ನಲ್ಲಿ ಏನಿದೆ?

ಪ್ರೀತಿಯ ಕುಟುಂಬ ಸದಸ್ಯರೇ, ಈ ಪತ್ರ ಯಾರೆಲ್ಲ ಓದುತ್ತಿದ್ದೀರಾ ಅಳಬೇಡಿ. ಈಗಾಗಲೇ ಸ್ವರ್ಗದಲ್ಲಿದ್ದೇನೆ, ಮತ್ತೆ ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಿಮ್ಮ ಈಗಿನ ಸ್ಥಿತಿ ಹೇಗಿದೆ ಅನ್ನೋದು ನನಗೆ ತಿಳಿದಿದೆ. ನಿಮಗೆ ನೋವಾಗುತ್ತೆ ಅನ್ನೋದು ನನಗೆ ತಿಳಿದಿದೆ.

ಇದನ್ನೂ ಓದಿ
Image
ಯುವಕನ ಭೀಕರ ಕೊಲೆಗೆ ಬೆಚ್ಚಿಬಿದ್ದ ಜನ: ಮುಳುವಾಯ್ತು ಪ್ರೀತಿ!
Image
ಬಾಲಕಿಯ ಫೋಟೋ ಸ್ಟೇಟಸ್​ ಇಟ್ಟಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ
Image
ಬಾಲಕನ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ
Image
ಬಾಲಕನ ಕಿಡ್ನಾಪ್: ಪೊಲೀಸರಿಗೆ ಹೇಳಿದ್ದಕ್ಕೆ ಕೊಂದ ದುಷ್ಕರ್ಮಿಗಳು!

ಇದನ್ನೂ ಓದಿ: ಬಳ್ಳಾರಿ: ಬಾಲಕಿಯ ಫೋಟೋ ಸ್ಟೇಟಸ್​ ಇಟ್ಟಿದ್ದಕ್ಕೆ ಗ್ಯಾಂಗ್​ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ

ಈ ಮನೆ ಚೆನ್ನಾಗಿರಬೇಕೆಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಮೇಲೆ ನಿಮಗೆ ಕೋಪ ಬರುವಂತೆ ನಡೆದುಕೊಂಡಿದ್ದೇನೆ. ನನ್ನಿಂದ ನೊಂದಿದ್ದೀರಾ, ನಿಮಗೆ ತೊಂದರೆ ಕೂಡ ನೀಡಿದ್ದೇನೆ, ಆದರೆ ನನ್ನ ಉದ್ದೇಶ ನಿಮ್ಮನ್ನು ನೋಯಿಸೋದಾಗಿರಲಿಲ್ಲ. ನನ್ನ ಮೇಲೆ ನಿಮಗೆ ಕೋಪ ಇದ್ದರೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ತಪ್ಪುಗಳನ್ನು ದಯವಿಟ್ಟು ಕ್ಷಮಿಸಿ.

ಇದನ್ನೂ ಓದಿ: ಬೆಂಗಳೂರು: ಬಾಲಕ ನಿಶ್ಚಿತ್ ಅಪಹರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳ ಕಾಲಿಗೆ ಗುಂಡೇಟು, ಇಬ್ಬರ ಬಂಧನ

14 ವರ್ಷಗಳ ಕಾಲ ನಾನು ಬದುಕಿದ್ದು ಅದರಲ್ಲೇ ತೃಪ್ತನಾಗಿದ್ದೇನೆ. 14 ವರ್ಷಗಳಲ್ಲಿ ನಾನು ಖುಷಿಯ ಕ್ಷಣ ಕಳೆದಿದ್ದೇನೆ ಅದೇ ಸಾಕು. ಸ್ವರ್ಗದಲ್ಲಿ ನಾನು ಖುಷಿಯಾಗಿದ್ದೇನೆ. ನಾನು ನನ್ನ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ ಎಂದು ಅವರಿಗೆ ತಿಳಿಸಿ. ನನ್ನ ಶಾಲಾ ಸ್ನೇಹಿತರಿಗೂ ಈ ಮಾತನ್ನ ಹೇಳಿ. ಐ ಮಿಸ್ ಯೂ ಆಲ್- ಗುಡ್​ಬೈ ಅಮ್ಮ ಎಂದು ಡೆತ್​ನೋಟ್​ ಬರೆಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:39 am, Mon, 4 August 25