ಬೆಂಗಳೂರಿನಲ್ಲಿ ಅಮಾನುಷ ಘಟನೆ: 4 ತಿಂಗಳು ಮನೆಯಲ್ಲೇ ನರಳಿದ ಯುವತಿ, ಜೀವಕ್ಕೆ ಕುತ್ತು ತಂದ ಕುಟುಂಬಸ್ಥರು

ಬೆಂಗಳೂರಿನ ಲಗ್ಗೆರೆ ನಗರದಲ್ಲಿ ಅಮಾನುಷ ಘಟನೆಯೊಂದು ಕಂಡುಬಂದಿದೆ. ಡೋಂಗಿ ಬಾಬಾ ಮಾತು ಕೇಳಿ ಯುವತಿಯನ್ನು 4 ತಿಂಗಳು ಕುಟುಂಬಸ್ಥರು ಗೃಹಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಯುವತಿಯ ರಕ್ಷಣೆ ಮಾಡಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಅಮಾನುಷ ಘಟನೆ: 4 ತಿಂಗಳು ಮನೆಯಲ್ಲೇ ನರಳಿದ ಯುವತಿ, ಜೀವಕ್ಕೆ ಕುತ್ತು ತಂದ ಕುಟುಂಬಸ್ಥರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಯುವತಿ ರಕ್ಷಣೆ
Follow us
Vinayak Hanamant Gurav
| Updated By: ಗಂಗಾಧರ​ ಬ. ಸಾಬೋಜಿ

Updated on:Dec 21, 2023 | 6:55 PM

ಬೆಂಗಳೂರು, ಡಿಸೆಂಬರ್​ 21: ಡೋಂಗಿ ಬಾಬಾ ಮಾತು ಕೇಳಿ ಯುವತಿಯನ್ನು 4 ತಿಂಗಳು ಕುಟುಂಬಸ್ಥರು ಗೃಹಬಂಧನದಲ್ಲಿಟ್ಟು ಚಿತ್ರಹಿಂಸೆ (torture) ನೀಡಿರುವಂತಹ ಅಮಾನವೀಯ ಘಟನೆ ನಗದರ ಲಗ್ಗೆರೆಯಲ್ಲಿ ನಡೆದಿದೆ. ಸ್ವಂತ ತಮ್ಮನಿಂದಲೇ ಮಮತಾಶ್ರೀ(26) ಗೃಹಬಂಧನಕ್ಕೆ ಒಳಗಾಗಿದ್ದ ಯುವತಿ. ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಯುವತಿಯ ರಕ್ಷಣೆ ಮಾಡಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡೋಂಗಿ ಬಾಬಾಗೆ ಮಹಿಳಾ ಸಂಘದವರಿಂದ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ತೀವ್ರ ಹೊಟ್ಟೆ ನೋವು ತಾಳಲಾರದೇ ಮಮತಾಶ್ರೀ ಕಿರುಚಾಡಿದ್ದಾರೆ. ಈ ವೇಳೆ ಸಹೋದರ ಪ್ರಶಾಂತ್​ ತನ್ನ ಅಕ್ಕನಿಗೆ ಹಲ್ಲೆ ಮಾಡಿದ್ದಾನೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಪರಿಚಯಸ್ಥರಿಗೆ ಯುವತಿ ಮೆಸೇಜ್​ ಮಾಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ, ಆದರೆ ಈಗ ಪತ್ನಿಗೆ ಚಿತ್ರಹಿಂಸೆ ನೀಡ್ತಿದ್ದಾನಂತೆ

ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಾದೇಹಳ್ಳಿ ನಿವಾಸಿ ಮಮತಾಶ್ರೀ, B.Com ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಮತಾಶ್ರೀಗೆ 4 ತಿಂಗಳ ಹಿಂದೆಯಷ್ಟೇ ಬ್ಯಾಕ್​ ಪೇನ್ ಶುರುವಾಗಿತ್ತು. ಬಳಿಕ ಯುವತಿ ಕುಟುಂಬಸ್ಥರು ಆಸ್ಪತ್ರೆಗೆ ತೋರಿಸಿದ್ದರು. ಆದರೆ ಗುಣಮುಖವಾಗದ ಹಿನ್ನೆಲೆ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ.

ಬಾಬಾ ಅಬ್ದುಲ್ ಮೊರೆ ಹೋಗಿದ್ದ ಯುವತಿಯ ಸಹೋದರ ಪ್ರಶಾಂತ್, ಮೂರು ತಿಂಗಳಿನಿಂದ ಮಂತ್ರವಾದಿಯ ಮಾತು ಕೇಳಿ ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಪರಿಣಾಮ ಆರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಿತ್ತು. 3 ತಿಂಗಳಿನಿಂದ ಅರಿಶಿನ ನೀರು, ನಿಂಬೆ ಹಣ್ಣು ನೀರು ಕುಡಿಸುತ್ತಿದ್ದರು, ಊಟನೇ ನೀಡುತ್ತಿರಲಿಲ್ಲ.

ಇದನ್ನೂ ಓದಿ: ಕನ್ನಡಿಗರ ಪರದಾಟ, ಕಾಫಿನಾಡು ಯುವಕನಿಗೆ ಚಿತ್ರಹಿಂಸೆ -ಕಾಂಬೋಡಿಯಾದಲ್ಲಿ ಚೀನಿ ಆ್ಯಪ್‌ ಕರಾಳ ದಂಧೆ, ವಾಪಸ್ ಭಾರತಕ್ಕೆ ಕಳಿಸಲು ‌13 ಲಕ್ಷಕ್ಕೆ ಡಿಮ್ಯಾಂಡ್

1 ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದಾಗ ಕ್ಯಾನ್ಸರ್ ಇರೋದು ದೃಢವಾಗಿತ್ತು. ಚಿಕಿತ್ಸೆ ನೀಡಿದ್ದರೆ ಈವರೆಗೆ ಕ್ಯಾನ್ಸರ್ ನಿವಾರಣೆಯ ಹಂತಕ್ಕೆ ಬರುತ್ತಿತ್ತು. ಆದರೆ ಮಂತ್ರವಾದಿಯ ಮಾತು ಕೇಳಿ, ಚಿಕಿತ್ಸೆ ಕೊಡಿಸದೇ  ತಮ್ಮ ಮತ್ತು ತಾಯಿ ಯುವತಿಯ ಜೀವಕ್ಕೆ ಕುತ್ತು ತಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:52 pm, Thu, 21 December 23

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ