AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗ್ಗೆ ಉರಿ ಬಿಸಿಲು: ರಾತ್ರಿಯಾದ್ರೆ ಸಾಕು ಸೆಕೆ; ಬೆಂಗಳೂರಿಗರ ಸುಖ ನಿದ್ರೆಗೆ ಭಂಗ!

ಬೆಂಗಳೂರಿನಲ್ಲಿ ಈ ಬೇಸಿಗೆಯಲ್ಲಿ 35-36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ರಾತ್ರಿಯೂ ತಾಪಮಾನ ಕಡಿಮೆಯಾಗದೆ ನಿದ್ದೆ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹವಾಮಾನ ಬದಲಾವಣೆ ಮತ್ತು ನೈಸರ್ಗಿಕ ಪ್ರಕ್ರಿಯೆಗಳಲ್ಲಿ ಕೂಡ ಏರುಪೇರಾಗಿದೆ. ಇನ್ನೊಂದೆಡೆ ನಗರದಲ್ಲಿ ಏರ್ ಕೂಲರ್‌ಗಳು ಮತ್ತು ಎಸಿಗಳಿಗೆ ಬೇಡಿಕೆ ಹೆಚ್ಚಿದೆ.

ಬೆಳಗ್ಗೆ ಉರಿ ಬಿಸಿಲು: ರಾತ್ರಿಯಾದ್ರೆ ಸಾಕು ಸೆಕೆ; ಬೆಂಗಳೂರಿಗರ ಸುಖ ನಿದ್ರೆಗೆ ಭಂಗ!
ಪ್ರಾತಿನಿಧಿಕ ಚಿತ್ರImage Credit source: ndtv.com
Vinay Kashappanavar
| Edited By: |

Updated on: Apr 12, 2026 | 7:46 PM

Share

ಬೆಂಗಳೂರು, ಏಪ್ರಿಲ್​ 12: ಈ ಬಾರಿ ಬೇಸಿಗೆಯ ಬಿರುಬಿಸಿಲು ಸಿಲಿಕಾನ್ ಸಿಟಿ ಜನರನ್ನ ಬಿಡದೆ ಕಾಡುತ್ತಿದೆ. ಮನೆಯಲ್ಲಿದ್ದರೆ ಬಿಸಿಲ ಧಗೆ (heatwave). ಇನ್ನು ಹೊರಗೆ ಬಂದರೆ ಸುಡೋ ಬಿಸಿಲು. ಹೀಗಾಗಿ ಜನರು ಕೂಲ್ ಡ್ರಿಂಕ್ಸ್, ಎಳನೀರು ಮೊರೆ ಹೋಗುತ್ತಿದ್ದಾರೆ. ಆದರೆ ರಾತ್ರಿ ನಿದ್ದೆ ಮಾಡುವುದಕ್ಕೆ ಸಂಕಷ್ಟ ಶುರುವಾಗಿದೆ. ಮತ್ತೊಂದೆಡೆ ಏರ್ ಕೂಲರ್ ಹಾಗೂ ಎಸಿಗೆ ಡಿಮ್ಯಾಂಡ್​ ಕೂಡ ಶುರುವಾಗಿದೆ.

ರಾತ್ರಿ ನಿದ್ದೆಗೆ ಬಿಸಿಲು ಅಡ್ಡಿ

ಸದ್ಯ ಬೆಂಗಳೂರಿನಲ್ಲಿ 35 ರಿಂದ 36 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಏಪ್ರಿಲ್​ ಕೊನೆಯ ವಾರದ ಬಳಿಕ 37ರಿಂದ 38* ಡಿಗ್ರಿ ತಲುಪುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನಲ್ಲಿ ರಾತ್ರಿ ವೇಳೆ 24 ರಿಂದ 26 ಡಿಗ್ರಿ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ಜನರು ನಿದ್ದೆ ಮಾಡಲು ಪರದಾಡುತ್ತಿದ್ದಾರೆ.

ಹವಾಮಾನ ವೈಪರಿತ್ಯ: ನೈಸರ್ಗಿಕ ಪ್ರಕ್ರಿಯೆಯಲ್ಲಿ ಏರುಪೇರು 

ಹತ್ತು ವರ್ಷಗಳ ಹಿಂದೆ ಬೆಂಗಳೂರಿನ ಉಷ್ಠಾಂಶ 36 ಡಿಗ್ರಿ ದಾಟಿದಾಗ ಮಳೆ ಕಡ್ಡಾಯವಾಗಿ ಸುರಿಯುತ್ತಿತ್ತು. ಉಷ್ಠಾಂಶ ಹೆಚ್ಚಳವಾದಾಗ ಗಾಳಿಯ ಒತ್ತಡ ಕಡಿಮೆ ಆಗಿ, ಪ್ರೆಶರ್ ಬೆಲ್ಟ್ ಕ್ರಿಯೇಟ್ ಆಗಿ, ಗಾಳಿ, ಮೋಡಗಳನ್ನು ಹೊತ್ತು ಮಳೆ ಸುರಿಯುತ್ತಿತ್ತು. ಆದರೆ ಈ ಸಾಮಾನ್ಯ ನೈಸರ್ಗಿಕ ಪ್ರಕ್ರಿಯೆ ಸದ್ಯ ಬದಲಾಗಿದೆ. ವಾಯು ಮಾಲಿನ್ಯ ಹೆಚ್ಚಳದಿಂದ ಹವಾಮಾನ ವೈಪರಿತ್ಯ ಆರಂಭಗೊಂಡಿದೆ. ರಾತ್ರಿಯಾದ್ರೂ ಉಷ್ಟಾಂಶ ತಗ್ಗದೇ, ಇದರಿಂದ ಅರೆ ನಿದ್ರೆಯ ಸಮಸ್ಯೆ ಶುರುವಾಗಿದೆ. ರಾತ್ರಿ ವೇಳೆಯೂ ಹೆಚ್ಚು ತಾಪಮಾನ ಇರುವುದರಿಂದ ಸಿಟಿ ಜನರು ಪರದಾಡುವಂತಾಗಿದೆ ಎಂದು ಜೆಕೆವಿಕೆ ಹವಾಮಾನ ವಿಭಾಗದ ಪ್ರೊ. ತಿಮ್ಮೆಗೌಡ ಹೇಳಿದ್ದಾರೆ.

ಎಸಿ ಹಾಗೂ ಏರ್ ಕೂಲರ್​​ಗಳಿಗೆ ಭರ್ಜರಿ ಡಿಮ್ಯಾಂಡ್

ಸದ್ಯ ಬಿರುಬಿಸಿಲಿಗೆ ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಕೂಲ್ ಸಿಟಿ ಖ್ಯಾತಿಯ ಬೆಂಗಳೂರು ಸದ್ಯ ಹಾಟ್ ಸಿಟಿಯಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಗಡೆ ಬಂದರೆ ಸಾಕು ತಂಪಾಗಿರೋದಕ್ಕೆ ಅಂತ ಎಳನೀರು, ಜ್ಯೂಸ್ ಕುಡಿತಿದ್ದಾರೆ. ಆದರೆ ಮನೆಯಲ್ಲಿ ಮುಂಜಾನೆ ಬಿಸಿಲಿನ ಧಗೆಯಾದ್ರೆ ಸಂಜೆ ವೇಳೆಗೆ ಪ್ಯಾನ್ ಹಾಕಿದ್ರೂ ಬಿಸಿ ಗಾಳೆ ಬರುತ್ತದೆ. ರಾತ್ರಿ ನಿದ್ದೆ ಮಾಡುವುದಕ್ಕೆ ಆಗುತ್ತಿಲ್ಲ. ಹೀಗಿರುವಾಗ ಏರ್ ಕೂಲರ್ ಹಾಗೂ ಎಸಿಗಳಿಗೆ ಭರ್ಜರಿ ಡಿಮ್ಯಾಂಡ್ ಶುರುವಾಗಿದೆ.

ಮನೆಗಳಲ್ಲಿ ಆರಾಮದಾಯಕ ವಾತಾವರಣ ನಿರ್ಮಾಣಕ್ಕೆ ಏರ್ ಕೂಲಿಂಗ್, ಎಸಿಗೆ ಸಕತ್ ಬೇಡಿಕೆ ಶುರುವಾಗಿದೆ. ಗ್ರಾಹಕರ ಆರೋಗ್ಯ ಮತ್ತು ನೈರ್ಮಲ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಕೂಲಿಂಗ್ ಅಪ್ಲಾಯನ್ಸ್​ಗೆ ಬೇಡಿಕೆ ದುಪ್ಪಟ್ಟಾಗಿದೆ.

ಇದನ್ನೂ ಓದಿ: ಕರ್ನಾಟಕದ ಕಾಲು ಭಾಗ ಜನ ಕುಡಿಯೋದು ಕ್ಯಾನ್, ಬಾಟಲ್ ನೀರು! ಇಲ್ಲಿ ನಲ್ಲಿ ನೀರಿಗಿಂತ ಬಾಟಲ್ ವಾಟರ್‌ಗೇ ಹೆಚ್ಚು ಡಿಮಾಂಡ್

ಇನ್ನು ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸದ್ಯ ನಗರದಲ್ಲಿ ಏರ್ ಕೂಲರ್ ಹಾಗೂ ಎಸಿಗಳ ಬೇಡಿಕೆ ಶುರುವಾಗಿದೆ. ಇದು ಮುಂದಿನ ದಿನದಲ್ಲಿ ಮತ್ತಷ್ಟು ಬಿಸಲಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದ್ದು, ಸಿಟಿ ಜನರು ಆರೋಗ್ಯದ ಬಗ್ಗೆ ಕೊಂಚ ಎಚ್ಚರವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us