AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದ ಕಾಲು ಭಾಗ ಜನ ಕುಡಿಯೋದು ಕ್ಯಾನ್, ಬಾಟಲ್ ನೀರು! ಇಲ್ಲಿ ನಲ್ಲಿ ನೀರಿಗಿಂತ ಬಾಟಲ್ ವಾಟರ್‌ಗೇ ಹೆಚ್ಚು ಡಿಮಾಂಡ್

ದೇಶದ ಶೇ 95ರಷ್ಟು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ದೊರೆತಿವುರುದು ದತ್ತಾಂಶಗಳಿಂದ ತಿಳಿದುಬಂದಿದೆ. ವಿಶೇಷವೆಂದರೆ, ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ನಗರಗಳಲ್ಲಿ ಶೇ 25ಕ್ಕೂ ಹೆಚ್ಚು ಕುಟುಂಬಗಳು ನಲ್ಲಿ ನೀರಿಗಿಂತ ಬಾಟಲಿ ಅಥವಾ ಕ್ಯಾನ್ ನೀರನ್ನೇ ಹೆಚ್ಚಾಗಿ ಅವಲಂಬಿಸಿರುವುದು ರಾಷ್ಟ್ರೀಯ ಮಾದರಿ ಸಮೀಕ್ಷೆಯಿಂದ ತಿಳಿದುಬಂದಿದೆ.

ಕರ್ನಾಟಕದ ಕಾಲು ಭಾಗ ಜನ ಕುಡಿಯೋದು ಕ್ಯಾನ್, ಬಾಟಲ್ ನೀರು! ಇಲ್ಲಿ ನಲ್ಲಿ ನೀರಿಗಿಂತ ಬಾಟಲ್ ವಾಟರ್‌ಗೇ ಹೆಚ್ಚು ಡಿಮಾಂಡ್
ಸಾಂದರ್ಭಿಕ ಚಿತ್ರImage Credit source: TV9 Network
ಗಣಪತಿ ಶರ್ಮಾ
|

Updated on: Apr 07, 2026 | 12:19 PM

Share

ಬೆಂಗಳೂರು, ಏಪ್ರಿಲ್ 7: ಭಾರತದಲ್ಲಿ ಕುಡಿಯುವ ನೀರಿನ (Drinking Water) ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ, ಕ್ರಾಂತಿಕಾರಕ ಬದಲಾವಣೆಯಾಗಿದ್ದು, ದೇಶದ ಶೇ 95ರಷ್ಟು ಕುಟುಂಬಗಳು ಇಂದು ಶುದ್ಧ ಕುಡಿಯುವ ನೀರಿನ ಸೌಲಭ್ಯ ಹೊಂದಿವೆ. ಇದರೊಂದಿಗೆ, ಕುಡಿಯುವ ನೀರು ಸಂಪರ್ಕದ ಈ ಪ್ರಗತಿಯಲ್ಲಿ ಭಾರತ ಜಗತ್ತಿಗೇ ಮಾದರಿಯಾಗಿದೆ. ಆದರೆ, ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದು ಕುತೂಹಲಕಾರಿ ಬೆಳವಣಿಗೆ ಕಂಡುಬಂದಿದೆ. ಬೆಂಗಳೂರು (Bangalore) ಸೇರಿದಂತೆ ದಕ್ಷಿಣ ಭಾರತದ ಹೆಚ್ಚಿಮ ನಗರವಾಸಿಗಳು ನಲ್ಲಿ ನೀರಿಗಿಂತ ಹೆಚ್ಚಾಗಿ ‘ಬಾಟಲ್ ವಾಟರ್’ ಅಥವಾ ‘ಕ್ಯಾನ್ ನೀರ’ನ್ನು ಅವಲಂಬಿಸಿರುವುದು ತಿಳಿದುಬಂದಿದೆ.

ದಕ್ಷಿಣದ ರಾಜ್ಯಗಳೇ ಟಾಪ್!

ರಾಷ್ಟ್ರೀಯ ಮಾದರಿ ಸಮೀಕ್ಷೆ (NSS) 2022-23ರ ದತ್ತಾಂಶದ ಪ್ರಕಾರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದ ನಗರ ಪ್ರದೇಶಗಳಲ್ಲಿ ಕಾಲು ಭಾಗಕ್ಕೂ ಹೆಚ್ಚು (ಶೇ 25+) ಕುಟುಂಬಗಳು ಬಾಟಲಿ ನೀರನ್ನೇ ಪ್ರಧಾನ ಆಧಾರವಾಗಿರಿಸಿಕೊಂಡಿವೆ. ಮನೆಗಳಿಗೆ ವಿತರಿಸಲಾಗುವ ಕ್ಯಾನ್ ವಾಟರ್ ಸಂಸ್ಕೃತಿ ಇಲ್ಲಿ ಭಾರಿ ಜನಪ್ರಿಯವಾಗಿದೆ.

ಕೇರಳದಲ್ಲಿ ಬಾವಿ ನೀರಿಗೇ ಆದ್ಯತೆ

ದಕ್ಷಿಣದ ಉಳಿದ ರಾಜ್ಯಗಳು ಬಾಟಲಿ ನೀರಿಗೆ ಮಾರುಹೋಗಿದ್ದರೆ, ಕೇರಳ ಮಾತ್ರ ಭಿನ್ನವಾಗಿದೆ. ಇಲ್ಲಿ ಇಂದಿಗೂ ಮನೆಗಳಲ್ಲಿರುವ ಬಾವಿ ನೀರು ಕುಡಿಯುವ ನೀರಿನ ಪ್ರಮುಖ ಮೂಲವಾಗಿ ಮುಂದುವರಿದಿದೆ.

ನಗರ ಭಾರತದ ಒಟ್ಟಾರೆ ಚಿತ್ರಣ ಗಮನಿಸಿದರೆ, ಇಂದಿಗೂ ಶೇ 70ರಷ್ಟು ಜನರಿಗೆ ನಲ್ಲಿ ನೀರೇ ಆಸರೆ. ಆದರೆ ದಕ್ಷಿಣದ ಪ್ರಭಾವದಿಂದಾಗಿ ದೇಶದ ಒಟ್ಟಾರೆ ನಗರವಾಸಿಗಳಲ್ಲಿ ಶೇ 15ರಷ್ಟು ಮಂದಿ ಬಾಟಲಿ ನೀರನ್ನೇ ನೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ, ನಲ್ಲಿ ನೀರಿಗಿಂತ ಶುದ್ಧೀಕರಿಸಿದ ಬ್ರಾಂಡೆಡ್ ನೀರಿನತ್ತ ಭಾರತೀಯ ನಗರವಾಸಿಗಳು ಆಕರ್ಷಿತರಾಗುತ್ತಿರುವುದು ಈ ಸಮೀಕ್ಷೆಯಿಂದ ಸ್ಪಷ್ಟವಾಗಿದೆ.

ಬೆಂಗಳೂರಿನಲ್ಲಿ ದಿನವೊಂದರಲ್ಲಿ ಎಷ್ಟು ವಾಟರ್ ಕ್ಯಾನ್ ಮಾರಾಟವಾಗುತ್ತೆ ಗೊತ್ತಾ?

ಬೆಂಗಳೂರು ನಗರವೊಂದರಲ್ಲೇ ಪ್ರತಿದಿನ ಅಂದಾಜು 15 ರಿಂದ 20 ಲಕ್ಷ ಕುಡಿಯುವ ನೀರಿನ ಕ್ಯಾನ್‌ಗಳು (20 ಲೀಟರ್) ಮಾರಾಟವಾಗುತ್ತವೆ. ಬೇಸಿಗೆಯ ಅವಧಿಯಲ್ಲಿ ಈ ಬೇಡಿಕೆಯು ಶೇ 30 ರಿಂದ 40ರಷ್ಟು ಹೆಚ್ಚಾಗುತ್ತದೆ. ನಗರದ ಐಟಿ ಹಬ್‌ಗಳಾದ ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಮಹದೇವಪುರದಂತಹ ಪ್ರದೇಶಗಳಲ್ಲಿ ವಲಸಿಗರ ಸಂಖ್ಯೆ ಹೆಚ್ಚಿರುವುದರಿಂದ, ಅಲ್ಲಿನ ಶೇ. 60ಕ್ಕೂ ಹೆಚ್ಚು ನಿವಾಸಿಗಳು ತಮ್ಮ ದೈನಂದಿನ ಕುಡಿಯುವ ನೀರಿಗಾಗಿ ಖಾಸಗಿ ಕ್ಯಾನ್ ಸರಬರಾಜುದಾರರನ್ನೇ ಅವಲಂಬಿಸಿದ್ದಾರೆ. ಕಾವೇರಿ ನೀರು ತಲುಪದ ಮತ್ತು ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ ಈ ಕ್ಯಾನ್ ಸಂಸ್ಕೃತಿ ಮನೆಮಾತಾಗಿದೆ ಎಂಬುದು ಎನ್​ಎಸ್​ಎಸ್ ಸಮೀಕ್ಷೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ನಾವು ಕುಡಿಯುವ ನೀರು ಸುರಕ್ಷಿತವಾ? ತಿಳಿಯಲಿದೆ ವಾಟರ್ ಬಾಟಲ್​ಗಳ ಅಸಲಿ ಬಣ್ಣ

ಬೆಂಗಳೂರಿನಲ್ಲಿ ಈ ನೀರಿನ ಉದ್ಯಮವು ವಾರ್ಷಿಕವಾಗಿ ಅಂದಾಜು 1,000 ಕೋಟಿ ರೂ.ಗಿಂತಲೂ ಹೆಚ್ಚಿನ ವಹಿವಾಟು ನಡೆಸುತ್ತದೆ. ನಗರದಲ್ಲಿ ಅಧಿಕೃತವಾಗಿ ಸುಮಾರು 500ಕ್ಕೂ ಹೆಚ್ಚು ಐಎಸ್ಐ (ISI) ಮುದ್ರೆ ಹೊಂದಿದ ನೀರು ಶುದ್ಧೀಕರಣ ಘಟಕಗಳಿವೆ. ಮತ್ತೊಂದೆಡೆ, ಅನಧಿಕೃತವಾಗಿಯೂ ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಘಟಕಗಳು ಕಾರ್ಯಾಚರಿಸುತ್ತಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
100 ರೂ ಕೇಳಿದ ವೈಭವ್, 200 ರೂ ನೀಡಿದ ಫ್ಯಾನ್
100 ರೂ ಕೇಳಿದ ವೈಭವ್, 200 ರೂ ನೀಡಿದ ಫ್ಯಾನ್
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ
ಬ್ಲಡ್ ಬ್ಯಾಂಕ್​ಗಳಿಗೂ ತಟ್ಟಿದ ಬಿಸಿಲಿನ ಬೇಗೆ: ರಕ್ತ ಸಿಗದೇ ರೋಗಿಗಳ ಪರದಾಟ