ನಾವು ಕುಡಿಯುವ ನೀರು ಸುರಕ್ಷಿತವಾ? ತಿಳಿಯಲಿದೆ ವಾಟರ್ ಬಾಟಲ್ಗಳ ಅಸಲಿ ಬಣ್ಣ
ಆಹಾರ ಇಲಾಖೆ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದೆ. ಇಡ್ಲಿ, ಗೋಬಿ ಸೇರಿದಂತೆ ಅನೇಕ ಆಹಾರಗಳ ತಯಾರಿ ಹಾಗೂ ಮಾರಾಟ ಸಂಬಂಧ ಕೆಲವೊಂದು ನಿಯಮಗಳನ್ನು ಜಾರಿ ಮಾಡಿದೆ. ಈ ಬೆನ್ನಲ್ಲೇ ಇದೀಗ ಕುಡಿಯುವ ನೀರಿನ ಮೇಲೂ ಹದ್ದಿನ ಕಣ್ಣಿಟ್ಟಿದೆ. ಕುಡಿಯುವ ನೀರು ಸುರಕ್ಷಿತವೇ ಎಂಬುದನ್ನು ತಿಳಿಯಲು ಮುಂದಾಗಿದೆ.

ಬೆಂಗಳೂರು, ಮಾರ್ಚ್ 4: ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಯಾವುದು ನಕಲಿ ಯಾವುದು ಅಸಲಿ ಎಂದು ತಿಳಿಯುವುದೇ ದೊಡ್ಡ ಸವಾಲಾಗಿದೆ. ಕಲಬೆರಕೆ ಉತ್ಪನ್ನ, ಕಳಪೆ ಗುಣಮಟ್ಟದ ಸಾಮಗ್ರಿ, ಕಳಪೆ ಆಹಾರ, ಕಳಪೆ ಔಷಧ, ಕಳಪೆ ಕಾಸ್ಮೆಟಿಕ್ಸ್ ಹೆಚ್ಚಾಗಿವೆ. ಇವುಗಳು ಮನುಷ್ಯರ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಆರೋಗ್ಯ ಇಲಾಖೆ ಉತ್ತಮ ಕಾರ್ಯಕ್ಕೆ ಮುಂದಾಗಿದೆ.
ಸದ್ಯ ಕರ್ನಾಟಕದಲಲ್ಲಿ ನಕಲಿ ಬ್ರಾಂಡ್ ವಾಟರ್ ಬಾಟಲ್ಗಳ ಮಾರಾಟವಾಗುತ್ತಿದೆ ಎಂಬ ಅನುಮಾನ ಬಂದ ಕಾರಣ, ಸ್ಯಾಂಪಲ್ಗಳನ್ನು ಪಡೆಯಲಾಗಿದ್ದು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ವಾರದಲ್ಲಿ 288 ವಾಟರ್ ಬಾಟಲ್ ಸ್ಯಾಂಪಲ್ ಪರೀಕ್ಷೆಯ ವರದಿ ಹೊರ ಬರಲಿದೆ. ಮಿನಿರಲ್ ವಾಟರ್ ಎಂದು ಬ್ರಾಂಡ್ ಹೆಸರಗಳುನ್ನು ಬಳಿಸಿಕೊಂಡು ಜನರಲ್ಲಿ ಗೊಂದಲ ಸೃಷ್ಟಿಸಿ ಟೋಪಿ ಹಾಕುವ ವಾಟರ್ ಬಾಟಲ್ಗಳ ಬಂಡಾವಳ ಹೊರ ಬೀಳಲಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಿಂದ ಆಹಾರ ಇಲಾಖೆ 288 ವಾಟರ್ ಬಾಟಲ್ಗಳ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಪ್ಲಾಸ್ಟಿಕ್ ವಾಟರ್ ಬಾಟಲ್ ಕುಡಿಯುವ ನೀರು ಸುರಕ್ಷಿತವಾ ಎಂಬ ವರದಿ ಆಹಾರ ಇಲಾಖೆಯ ಕೈ ಸೇರಲಿದೆ. ಈ ವಾರದಲ್ಲಿ ವರದಿ ದೊರೆಯುವ ನಿರೀಕ್ಷೆಇದೆ.
ಕುಡಿಯುವ ನೀರಿನ ಬಗ್ಗೆ ನಿಗಾವಹಿಸಲು ವೈದ್ಯರ ಸಲಹೆ
ಈ ಮಧ್ಯೆ, ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿನ ಬಗ್ಗೆ ನಿಗಾವಹಿಸುವಂತೆ ಆಹಾರ ತಜ್ಞರು ಸಲಹೆ ನೀಡಿದ್ದಾರೆ. ಕಳಪೆ ನೀರಿನಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಟಿವಿ9 ರಿಯಾಲಿಟಿ ಚೆಕ್: ಬೆಂಗಳೂರಿನ ಹಲವೆಡೆ ಇನ್ನೂ ನಿಂತಿಲ್ಲ ಇಡ್ಲಿ ತಯಾರಿಗೆ ಪ್ಲಾಸ್ಟಿಕ್ ಬಳಕೆ
ಒಟ್ಟಿನಲ್ಲಿ ಕುಡಿಯು ನೀರು ಸುರಕ್ಷಿತವಾ ಎಂಬ ಅನುಮಾನ ಈಗ ಜನರನ್ನು ಕಾಡುವುದಕ್ಕೆ ಶುರುವಾಗಿದ್ದು, ವರದಿ ಬಂದ ಬಳಿಕ ಕಳಪೆ ಗುಣಮಟ್ಟದ ನೀರು ಹಾಗೂ ಅದರ ಬಾಟಲಿಗಳಿಗೆ ಬ್ರೇಕ್ ಹಾಕಲು ಆಹಾರ ಇಲಾಖೆ ಯೋಜನೆ ರೂಪಿಸಲಿದೆ.