ಬಂದ ಒಂದೇ ವಾರಕ್ಕೆ ಹೆಚ್ಚಿಗೆ ಬಾಡಿಗೆ ಕೇಳಿದ ಮನೆ ಮಾಲೀಕ: ಸೌಟು, ಚಾಕು ಹಿಡಿದು ಹೊಡೆದಾಟ

ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬಂದಿದ್ದ ಉತ್ತರ ಪ್ರದೇಶದ ಕುಟುಂಬಕ್ಕೆ ಜೀವನಭೀಮಾನಗರದಲ್ಲಿ ಬಾಡಿಗೆ ಮನೆ ಸಿಕ್ಕಿತ್ತು. ಒಂದು ವಾರದೊಳಗೆ ಮನೆ ಮಾಲೀಕರು ಬಾಡಿಗೆ ಹೆಚ್ಚಿಸಲು ಕೇಳಿದಾಗ ಗಲಾಟೆಯೇ ನಡೆದಿದೆ. ಬಾಡಿಗೆದಾರರು ನಿರಾಕರಿಸಿದಾಗ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಹೊಡೆದಾಟ ನಡೆದಿದೆ. ಪ್ರಕರಣ ಜೀವನ್‌ಭೀಮಾ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಬಂದ ಒಂದೇ ವಾರಕ್ಕೆ ಹೆಚ್ಚಿಗೆ ಬಾಡಿಗೆ ಕೇಳಿದ ಮನೆ ಮಾಲೀಕ: ಸೌಟು, ಚಾಕು ಹಿಡಿದು ಹೊಡೆದಾಟ
ಮನೆ ಮಾಲೀಕರು ಮತ್ತು ಬಾಡಿಗೆದಾರರ ಮಧ್ಯೆ ಗಲಾಟೆ
Image Credit source: tv9 kannada
Edited By:

Updated on: Mar 30, 2026 | 5:59 PM

ಬೆಂಗಳೂರು, ಮಾರ್ಚ್​ 30: ಉತ್ತರ ಪ್ರದೇಶ ಮೂಲದ ಕುಟುಂಬವೊಂದು ಬದುಕು ಕಟ್ಟಿಕೊಳ್ಳುವುದಕ್ಕೆ ಅಂತಾ ಬೆಂಗಳೂರಿಗೆ ಆಗಮಿಸಿದ್ದರು. ಸಿಲಿಕಾನ್ ಸಿಟಿಯ ಗಲ್ಲಿಗಲ್ಲಿ ವಾಸಿಸಲು ಮನೆಗಾಗಿ ಹುಡುಕಾಡಿದ್ದಾರೆ. ಸಿಕ್ಕ ಮನೆಯಲ್ಲಿ ಒಂದು ವಾರವಿದ್ದರೂ ಅಷ್ಟೇ, ಅಷ್ಟರಲ್ಲೇ ಮನೆ ಮಾಲೀಕ ಕ್ಯಾತೆ ತೆಗೆದಿದ್ದಾರೆ. ಬಾಡಿಗೆ ಜಾಸ್ತಿ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಇದೇ ವಿಚಾರ ಪರಸ್ಪರ ಹೊಡೆದಾಡಿಕೊಳ್ಳುವ (Clash) ಮಟ್ಟಕ್ಕೆ ಹೋಗಿದೆ. ಈ ಘಟನೆ ಜೀವನಭೀಮಾ ನಗರದ ಕೋಡಿಹಳ್ಳಿಯಲ್ಲಿ ಮಾರ್ಚ್ 29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಡೆದದ್ದೇನು?

ಉತ್ತರ ಪ್ರದೇಶ ಮೂಲದ ಸಹೋದರರಾದ ನರೇಶ್, ಸಚಿನ್ ಮತ್ತು ಹೋದರಿ ರೇಖಾ. ಬೆಂಗಳೂರಿಗೆ ಬಂದು ಸಣ್ಣಪುಟ್ಟ ಕೆಲಸ ಮಾಡ್ಕೊಂಡು ಬದುಕು ನಡೆಸುತ್ತಿದ್ದರು. ಹಾಗೆ ಬೆಂಗಳೂರಿನಲ್ಲಿರಲು ಒಂದು ಬಾಡಿಗೆ ಮನೆಯನ್ನ ಹುಡಕ್ತಿದ್ದ ಇವರಿಗೆ ಶೋಭಾ ಮತ್ತು ದೇವರಾಜ್​​​ ಎಂಬುವವರ ಬಿಲ್ಡಿಂಗ್​ನಲ್ಲಿ 1RK ಮನೆ ಸಿಕ್ಕಿತ್ತು. ಬಾಡಿಗೆ 8 ಸಾವಿರ ರೂ ಒಪ್ಪಂದವಾಗಿತ್ತು. ಮಾರ್ಚ್ 24ರಂದು ಬಂದ ಇವರಿಗೆ ಮನೆ ಮಾಲೀಕರಿಂದ ಕಿರುಕುಳು ಶುರುವಾಗಿತ್ತಂತೆ. ಗ್ಯಾಸ್ ರೇಟ್ ಜಾಸ್ತಿ ಆಗಿದೆ. ವಾಟರ್ ಬಿಲ್ ಜಾಸ್ತಿ ಆಗಿದೆ, ಹಾಗಾಗಿ 10 ಸಾವಿರ ರೂ ಬಾಡಿಗೆ ನೀಡುವಂತೆ ಒತ್ತಾಯಿಸಲು ಶುರು ಮಾಡಿದ್ದರಂತೆ. ಇಲ್ಲದಿದ್ದರೆ ಮನೆ ಖಾಲು ಮಾಡಲು ಹೇಳಿದ್ದರಂತೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ: ಮೂವರು ಪೊಲೀಸರು ಸಸ್ಪೆಂಡ್

ಇದಕ್ಕೆ ಬಾಡಿಗೆದಾರರು 15 ದಿನ ಸಮಯವಾದರೂ ನೀಡುವಂತೆ ಕೇಳಿಕೊಂಡಿದ್ದಾರೆ. ಮಾಲೀಕರು ಒಪ್ಪದೇ ಬಾಡಿಗೆದಾರರು ಮತ್ತು ಮಾಲೀಕರ ಮಧ್ಯೆ ಪರಸ್ಪರ ಮಾತುಕತೆ ಬೆಳೆದು ಗಲಾಟೆ ಆಗಿದ್ದು, ಪರಸ್ಪರ ಹಲ್ಲೆ ಕೂಡ ನಡೆದಿದೆ. ಶೋಭಾ ಹಾಗೂ ರೇಖಾ ಜುಟ್ಟು ಹಿಡಿದುಕೊಂಡು ಗುದ್ದಾಡಿ ಕೊಂಡಿದ್ದಾರೆ. ಮನೆ ಮಾಲೀಕರು ತಮ್ಮ ಆಪ್ತರನ್ನು ಕರೆಸಿ ಬಾಡಿದಾರರ ಮೇಲೆ ಹಲ್ಲೆ ಮಾಡಿಸಿರುವ ಆರೋಪ ಕೂಡ ಕೇಳಿ ಬಂದಿದೆ.

ಮನೆ ಮಾಲೀಕರ ವಾದವೇನು?

ಇತ್ತ ಮನೆ ಮಾಲೀಕರು ಹೇಳುವುದೇ ಬೇರೆ. ಬಾಡಿಗೆಗೆ ಅಂತಾ ಬಂದವರು ಆಧಾರ್ ಕಾರ್ಡ್ ಕೊಟ್ಟಿರಲಿಲ್ಲ. ಐದು ದಿನ ಕಳೆದರೂ ಅಗ್ರಿಮೆಂಟ್ ಮಾಡಿಸಿರಲಿಲ್ಲ. ಹಾಗಾಗಿ ನಮಗೆ ಅನುಮಾನ ಬಂದು ಮನೆ ಖಾಲಿ ಮಾಡಲು ಹೇಳಿದ್ದೆವು. ಅಷ್ಟಕ್ಕೆ ಇಷ್ಟು ದೊಡ್ಡ ರಾದ್ಧಾಂತ ಮಾಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಅಂತಾ ಪ್ರತ್ಯಾರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಣ್ಣ ವೈವಾಹಿಕ ಜಗಳಗಳು ಅಪರಾಧವಲ್ಲ: ಅತ್ತೆ-ಮಾವ, ನಾದಿನಿ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಘಟನೆಯಲ್ಲಿ ಚಮಚ, ಸೌಟು ಮತ್ತು ಚಾಕುವಿನಿಂದ ಬಡಿದಾಡಿಕೊಂಡಿದ್ದು, ಬಾಡಿಗೆದಾರರ ಮುಖ, ಕೈ ಸೇರಿದಂತೆ ದೇಹದ ಹಲವೆಡೆ ಗಾಯಗಳಾಗಿವೆ. ಸದ್ಯ ಘಟನೆ ಸಂಬಂಧ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Follow Us