AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೆಣ್ಣು ಜಿರಾಫೆ ಸಾವು: ಅನಾರೋಗ್ಯದಿಂದ ಮೃತಪಟ್ಟ ‘ಶಿವಾನಿ’

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿದ್ದ ಜನಪ್ರಿಯ ಜಿರಾಫೆ 'ಶಿವಾನಿ' ಅನಾರೋಗ್ಯದಿಂದ ಮೃತಪಟ್ಟಿದೆ. 3 ವರ್ಷ 10 ತಿಂಗಳ ಶಿವಾನಿ ಕರುಳು ಸುತ್ತಿಕೊಂಡು ರಕ್ತಪರಿಚಲನೆ ಆಗದೆ ಕೊನೆಯುಸಿರೆಳೆದಿದೆ ಎಂದು ಪೋಸ್ಟ್‌ಮಾರ್ಟಂ ವರದಿಯಲ್ಲಿ ತಿಳಿದುಬಂದಿದೆ. ಮೈಸೂರಿನಿಂದ ತರಲಾಗಿದ್ದ ಶಿವಾನಿ, ಬನ್ನೇರುಘಟ್ಟದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಈ ದುರಂತ ಮೃಗಾಲಯದ ಸಿಬ್ಬಂದಿ ಮತ್ತು ಪ್ರವಾಸಿಗರಿಗೆ ಆಘಾತ ತಂದಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೆಣ್ಣು ಜಿರಾಫೆ ಸಾವು: ಅನಾರೋಗ್ಯದಿಂದ ಮೃತಪಟ್ಟ 'ಶಿವಾನಿ'
ಜಿರಾಫೆ
ಪ್ರಸನ್ನ ಹೆಗಡೆ
|

Updated on: May 08, 2026 | 11:31 AM

Share

ಬೆಂಗಳೂರು, ಮೇ 08: ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಜಿರಾಫೆ ಮೃತಪಟ್ಟಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ. 3 ವರ್ಷ 10 ತಿಂಗಳ ಶಿವಾನಿ ಹೆಸರಿನ ಹೆಣ್ಣು ಜಿರಾಫೆ ಕೊನೆಯುಸಿರೆಳೆದಿದ್ದು, ಅನಾರೋಗ್ಯದಿಂದ ಸರಿಯಾಗಿ ಆಹಾರ ಸೇವಿಸುತ್ತಿರಲಿಲ್ಲ ಎನ್ನಲಾಗಿದೆ. ಅಂತಿಮವಾಗಿ ಕರುಳು ಸುತ್ತಿಕೊಂಡು ರಕ್ತಪರಿಚಲನೆ ಆಗದೆ ಜಿರಾಫೆ ಮೃತಪಟ್ಟಿದೆ.

  • ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೆಣ್ಣು ಜಿರಾಫೆ ಸಾವು
  • 3 ವರ್ಷ 10 ತಿಂಗಳ ಶಿವಾನಿ ಹೆಸರಿನ ಹೆಣ್ಣು ಜಿರಾಫೆ ಕೊನೆಯುಸಿರು
  • ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕತೆ ತುತ್ತಾಗಿದ್ದ ಜಿರಾಫೆ

ಇದನ್ನೂ ಓದಿ: ತುಮಕೂರಿನಲ್ಲಿ ಹೆಚ್ಚಾಯ್ತು ಹಕ್ಕಿ ಜ್ವರದ ಭೀತಿ; 50ಕ್ಕೂ ಹೆಚ್ಚು ನವಿಲುಗಳ ಸಾವು!

ಪ್ರಮುಖ ಆಕರ್ಷಣೆಯಾಗಿದ್ದ ‘ಶಿವಾನಿ’

ಜಿರಾಫೆ ‘ಶಿವಾನಿ’ ಬನ್ನೇರುಘಟ್ಟ ಜೈವಿಕ ಉದ್ಯಾನವನದ (BBP) ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಜಿರಾಫೆಗೆ ಹಲವು ಪಶುವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಬಿಬಿಪಿ ಅಧಿಕಾರಿಗಳ ಪ್ರಕಾರ, ಮೇ 3ರಿಂದ ಆಹಾರ ಸೇವನೆ ನಿಲ್ಲಿಸಿದ್ದ ಜಿರಾಫೆಯನ್ನು ಪಶುವೈದ್ಯರ ತಂಡ ನಿಗಾದಲ್ಲಿಟ್ಟು ಚಿಕಿತ್ಸೆ ನೀಡುತ್ತಿತ್ತು. ಆದರೆ ಗುರುವಾರ ಬೆಳಗ್ಗೆ ಸುಮಾರು 11 ಗಂಟೆಗೆ ಮೃತಪಟ್ಟಿದೆ.

ಪೋಸ್ಟ್‌ಮಾರ್ಟಂ ವರದಿಯಲ್ಲಿ ‘ಸಿಕಲ್ ಟಾರ್ಷನ್’ (Caecal Torsion) ಎಂಬ ಗಂಭೀರ ಆರೋಗ್ಯ ಸಮಸ್ಯೆಯಿಂದ ಶಿವಾನಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಶಿವಾನಿಯ ದೇಹದ ಮಾದರಿಗಳನ್ನು ಹೆಬ್ಬಾಳದ ಪಶು ಆರೋಗ್ಯ ಮತ್ತು ಪಶುವೈದ್ಯಕೀಯ ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾರತ್ ಮತ್ತು ಬಬ್ಲಿ ಜಿರಾಫೆಗಳಿಗೆ 2022ರಲ್ಲಿ ಶಿವಾನಿ ಜನಿಸಿತ್ತು. ಬನ್ನೇರುಘಟ್ಟದಲ್ಲಿದ್ದ ಏಕೈಕ ಜಿರಾಫೆ ‘ಗೌರಿ’ಗೆ ಸಂಗಾತಿ ಕಲ್ಪಿಸುವ ಉದ್ದೇಶದಿಂದ ಹಲವು ತಿಂಗಳ ಮಾತುಕತೆ ಬಳಿಕ 2024ರಲ್ಲಿ ಶಿವಾನಿಯನ್ನು ವಿಶೇಷ ವಿನ್ಯಾಸದ ಪಂಜರ ಹೊಂದಿದ್ದ ಮಲ್ಟಿ-ಆಕ್ಸಲ್ ಲಾರಿಯಲ್ಲಿ ಭದ್ರತಾ ವ್ಯವಸ್ಥೆಯೊಂದಿಗೆ ಬನ್ನೇರುಘಟ್ಟಕ್ಕೆ ತರಲಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Prasanna Hegde
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಪ್ರಮಾಣವಚಕ್ಕೆ ಸಿದ್ಧತೆ: ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್
ಪ್ರಮಾಣವಚಕ್ಕೆ ಸಿದ್ಧತೆ: ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್
ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮತ್ತೆ ಶಕ್ತಿ ಕೇಂದ್ರವಾದ ದೆಹಲಿ
ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮತ್ತೆ ಶಕ್ತಿ ಕೇಂದ್ರವಾದ ದೆಹಲಿ
ಡಿಕೆ ಶಿವಕುಮಾರ್​​ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ!
ಡಿಕೆ ಶಿವಕುಮಾರ್​​ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ!
ಮುಂದಿನ ಸಿಎಂ ಯಾರು ಅಂತಿದ್ದಂತೆ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮುಂದಿನ ಸಿಎಂ ಯಾರು ಅಂತಿದ್ದಂತೆ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಸಿದ್ದರಾಮಯ್ಯ ಪದತ್ಯಾಗಕ್ಕೆ ಹುಟ್ಟೂರಲ್ಲಿ ಆಕ್ರೋಶ
ಸಿದ್ದರಾಮಯ್ಯ ಪದತ್ಯಾಗಕ್ಕೆ ಹುಟ್ಟೂರಲ್ಲಿ ಆಕ್ರೋಶ
ರಾಜೀನಾಮೆ ಬೆನ್ನಲ್ಲೇ ಡಾ.ರಾಜ್​ಕುಮಾರ್ ಮಾತು ನೆನೆದ ಸಿದ್ರಾಮಯ್ಯ
ರಾಜೀನಾಮೆ ಬೆನ್ನಲ್ಲೇ ಡಾ.ರಾಜ್​ಕುಮಾರ್ ಮಾತು ನೆನೆದ ಸಿದ್ರಾಮಯ್ಯ
ಸಿದ್ದರಾಮಯ್ಯ ರಾಜೀನಾಮೆಗೆ ವಿಶೇಷ ಸೂಚನೆ ನೀಡಿದ ರಾಜ್ಯಪಾಲರ ಕಾರ್ಯದರ್ಶಿ!
ಸಿದ್ದರಾಮಯ್ಯ ರಾಜೀನಾಮೆಗೆ ವಿಶೇಷ ಸೂಚನೆ ನೀಡಿದ ರಾಜ್ಯಪಾಲರ ಕಾರ್ಯದರ್ಶಿ!
ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್
ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್
ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ
ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ
ಎನ್​​ಟಿಆರ್ ಸಮಾಧಿಗೆ ಜೂ ಎನ್​​ಟಿಆರ್ ಭೇಟಿ, ಕಾಲಿಗೆ ಬಿದ್ದ ಅಭಿಮಾನಿ
ಎನ್​​ಟಿಆರ್ ಸಮಾಧಿಗೆ ಜೂ ಎನ್​​ಟಿಆರ್ ಭೇಟಿ, ಕಾಲಿಗೆ ಬಿದ್ದ ಅಭಿಮಾನಿ