Krishna Janmashtami 2023: ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ನಾಳೆ ಪ್ರಾಣಿ ವಧೆ, ಮಾಂಸ ಮಾರಾಟ ಸಂಪೂರ್ಣ ನಿಷೇಧ
ನಾಳೆ ರಾಜ್ಯಾದ್ಯಂತ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು, ಸೆ. 05: ನಾಳೆ ರಾಜ್ಯಾದ್ಯಂತ ಕೃಷ್ಣ ಜನ್ಮಾಷ್ಟಮಿ(Krishna Janmashtami) ಹಿನ್ನೆಲೆ ಹಬ್ಬದ ಸಂಭ್ರಮಾಚಾರಣೆಗೆ ತಯಾರಿ ಜೋರಾಗಿ ನಡೆಯುತ್ತಿದೆ. ಸೆ.06ರ ಬುಧವಾರ ಕೃಷ್ಣ ಜನ್ಮಾಷ್ಟಮಿ ಇರುವುದರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ ವ್ಯಾಪ್ತಿಯಲ್ಲಿ ‘ಪ್ರಾಣಿ ವಧೆ ಮತ್ತು ಮಾಂಸ’ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಸುತ್ತೋಲೆ ಹೊರಡಿಸಿದೆ.
ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಶ್ರೀ ಕೃಷ್ಣ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನ ಶ್ರೀ ಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು ಎನ್ನಲಾಗುತ್ತೆ. ಈ ದಿನ ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಯ
- ಅಷ್ಟಮಿ ತಿಥಿ ಆರಂಭ -ಸೆಪ್ಟಂಬರ್ 6 ರ ಮಧ್ಯಾಹ್ನ 03.37ಕ್ಕೆ
- ರೋಹಿಣಿ ನಕ್ಷತ್ರ ಪ್ರಾರಂಭ – ಸೆಪ್ಟಂಬರ್ 6 ಬೆಳಗ್ಗೆ 9.20
- ರೋಹಿಣಿ ನಕ್ಷತ್ರ ಕೊನೆ – ಸೆಪ್ಟಂಬರ್ 7 ಬೆಳಗ್ಗೆ 10.25
- ಅಷ್ಟಮಿ ತಿಥಿ ಅಂತ್ಯ – ಸೆಪ್ಟಂಬರ್ 7 ರಂದು ಬೆಳಗ್ಗೆ 10.25ಕ್ಕೆ ಕೊನೆಗೊಳ್ಳುತ್ತದೆ.
- ಸೆಪ್ಟಂಬರ್ 7 ಜನ್ಮಾಷ್ಟಮಿ
- ನಿಶಿತಾ ಪೂಜಾ ಸಮಯ ಸೆಪ್ಟಂಬರ್ 7 ಮಧ್ಯಾಹ್ನ 12.02 ರಿಂದ
- ಮಧ್ಯರಾತ್ರಿ ಕ್ಷಣ 12.25, ಚಂದ್ರೋದಯ ಕ್ಷಣ 11.55 ರಾತ್ರಿ
ಈ ಬಾರಿ ದೃಕ್ ಪಂಚಾಂಗದ ಪ್ರಕಾರ, ಕೃಷ್ಣ ಜನ್ಮಾಷ್ಟಮಿ ಸತತ ಎರಡು ದಿನಗಳಲ್ಲಿಯೂ ಆಚರಿಸಲಾಗುತ್ತದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:12 am, Tue, 5 September 23