ಕೊರೊನಾ ಮಹಾಮಾರಿ: ಭಾರತಕ್ಕೂ ಕಾಡಲಾರಂಭಿಸಿತಾ ಆತಂಕ!
ಬೆಂಗಳೂರು: ಕೊರೊನಾ.. ಈ ಹೆಸರು ಕೇಳಿದ್ರೆ ಸಾಕು ಇಡೀ ವಿಶ್ವವೇ ಬೆಚ್ಚಿ ಬೀಳುತ್ತಿದೆ. ಚೀನಾವನ್ನ ಪತರುಗಟ್ಟುವಂತೆ ಮಾಡಿದ ಕೊರೊನಾ ಈಗ ಪ್ರಪಂಚದ ವಿವಿಧ ದೇಶಗಳನ್ನು ಗಢಗಢ ನಡುಗಿಸಿದೆ. ತಾನು ಯಾರಿಗೂ ಕಮ್ಮಿ ಇಲ್ಲ, ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ ಎಂದು ಬೀಗುವ ಚೀನಾ ಕೊರೊನಾ ಆರ್ಭಟಕ್ಕೆ ನಲುಗಿ ಹೋಗಿದೆ. ಈ ಭಯಾನಕ ವೈರೆಸ್ನಿಂದ ತಪ್ಪಿಸಿಕೊಳ್ಳೋಕೆ ಹರಸಾಹಸ ಪಡುತ್ತಿದೆ. ಇದೇ ಬೆನ್ನಲ್ಲೇ ಈಗ ಈ ವೈರೆಸ್ ಭಾರತಕ್ಕೂ ಬಂದಿದಿಯ ಎಂಬ ಭೀತಿ ವ್ಯಕ್ತವಾಗಿದೆ. ಚೀನಾದಿಂದ ಬೆಂಗಳೂರಿಗೆ ಬಂದ ಪ್ರವಾಸಿಗರ […]

ಬೆಂಗಳೂರು: ಕೊರೊನಾ.. ಈ ಹೆಸರು ಕೇಳಿದ್ರೆ ಸಾಕು ಇಡೀ ವಿಶ್ವವೇ ಬೆಚ್ಚಿ ಬೀಳುತ್ತಿದೆ. ಚೀನಾವನ್ನ ಪತರುಗಟ್ಟುವಂತೆ ಮಾಡಿದ ಕೊರೊನಾ ಈಗ ಪ್ರಪಂಚದ ವಿವಿಧ ದೇಶಗಳನ್ನು ಗಢಗಢ ನಡುಗಿಸಿದೆ. ತಾನು ಯಾರಿಗೂ ಕಮ್ಮಿ ಇಲ್ಲ, ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ ಎಂದು ಬೀಗುವ ಚೀನಾ ಕೊರೊನಾ ಆರ್ಭಟಕ್ಕೆ ನಲುಗಿ ಹೋಗಿದೆ. ಈ ಭಯಾನಕ ವೈರೆಸ್ನಿಂದ ತಪ್ಪಿಸಿಕೊಳ್ಳೋಕೆ ಹರಸಾಹಸ ಪಡುತ್ತಿದೆ. ಇದೇ ಬೆನ್ನಲ್ಲೇ ಈಗ ಈ ವೈರೆಸ್ ಭಾರತಕ್ಕೂ ಬಂದಿದಿಯ ಎಂಬ ಭೀತಿ ವ್ಯಕ್ತವಾಗಿದೆ.
ಚೀನಾದಿಂದ ಬೆಂಗಳೂರಿಗೆ ಬಂದ ಪ್ರವಾಸಿಗರ ತಪಾಸಣೆ: ಕಳೆದ 14 ದಿನಗಳಿಂದ ಈಚೆಗೆ ಚೀನಾದಿಂದ ಬೆಂಗಳೂರಿನ ಏರ್ಪೋರ್ಟ್ಗೆ ಬಂದಿಳಿದ 392 ಪ್ರಯಾಣಿಕರನ್ನ ಥರ್ಮಲ್ ಸ್ಕ್ಯಾನರ್ ತಪಾಸಣೆಗೆ ಒಳಪಡಿಸಲಾಗಿತ್ತು. ಸದ್ಯ ಯಾವ ಪ್ರಯಾಣಿಕರಲ್ಲೂ ಮಹಾಮಾರಿ ಕೊರೊನಾ ವೈರಸ್ ಪತ್ತೆಯಾಗಿಲ್ಲ. ಈ ಏರ್ಪೋರ್ಟ್ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿಲ್ಲ ಕೊರೊನಾ ಭೀತಿ: ಕೊರೊನಾ ಸೋಂಕು ಶಂಕೆ ಹಿನ್ನೆಲೆ ಚೀನಾದಿಂದ ಭಾರತಕ್ಕೆ ಬರುವ ಪ್ರತೀ ಪ್ರಯಾಣಿಕರನ್ನು ತಪಾಸಣೆಗೆ ಬಳಪಡಿಸಲಾಗುತ್ತಿದೆ. ಈ ಹಿನ್ನೆಲೆ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ರಾಷ್ಟ್ರೀಯ ತಜ್ಞರ ತಂಡ ಭೇಟಿ ನೀಡಿದೆ. ಯಾವ ರೀತಿ ಚಿಕಿತ್ಸೆ ನೀಡಬೇಕು, ಹೇಗೆ ತಯಾರಿರಬೇಕು. ಯಾವ ಔಷಧ ನೀಡಬೇಕು, ಚಿಕಿತ್ಸೆ ಬಗ್ಗೆ ವೈದ್ಯರಿಗೆ ಸಲಹೆ ನೀಡುತ್ತಿದ್ದಾರೆ. ಈಗಾಗಲೇ ರಕ್ತ ಮಾದರಿ ಪರೀಕ್ಷೆ ನಡೆಸಲಾಗುತ್ತಿದೆ. ಮೂವರ ರಕ್ತ ಮಾದರಿ ಪರೀಕ್ಷೆ ನಡೆಸಿದ್ದು, ಓರ್ವನಿಗೆ ಸೋಂಕು ಇಲ್ಲ ಎಂಬುವುದು ದೃಡಪಟ್ಟಿದೆ. ಮತ್ತಿಬ್ಬರು ರೋಗಿಗಳ ರಕ್ತ ಮಾದರಿ ಪರೀಕ್ಷೆಗೆ ಕಳಿಸಲಾಗಿದೆ ಎಂದು ರಾಜೀವ್‌ಗಾಂಧಿ ಆಸ್ಪತ್ರೆ ನಿರ್ದೇಶಕ ಡಾ.ನಾಗರಾಜ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಸಂಬಂಧ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ರಾಜೀವ್‌ಗಾಂಧಿ ಆಸ್ಪತ್ರೆಯಲ್ಲಿ ವಿಶೇಷ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಕೊರೊನಾ ವೈರಸ್ ಬಗ್ಗೆ ಆತಂಕಪಡಬೇಕಾಗಿಲ್ಲ. ಏರ್‌ಪೋರ್ಟ್‌ನಲ್ಲೂ ಪ್ರಯಾಣಿಕರ ತಪಾಸಣೆ ಮಾಡಲಾಗ್ತಿದೆ. ಇದುವರೆಗೆ 2,672 ಜನರನ್ನು ತಪಾಸಣೆಗೊಳಪಡಿಸಲಾಗಿದೆ. ಯಾರಲ್ಲಿಯೂ ‘ಕೊರೊನಾ’ ಸೋಂಕು ಪತ್ತೆಯಾಗಿಲ್ಲ ಎಂದು ಡಾ.ನಾಗರಾಜ್ ಸ್ಪಷ್ಟಪಡಿಸಿದ್ದಾರೆ. ಚೀನಾದಲ್ಲಿ ಈ ಭಯಾನಕ ವೈರೆಸ್ಗೆ 85 ಮಂದಿ ಮೃತಪಟ್ಟಿದ್ದಾರೆ.


Published On - 12:14 pm, Mon, 27 January 20
