20th Chitra Santhe: ಚಿತ್ರಸಂತೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
ಪೇಟಿಂಗ್ ಮೇಲೆ ಸಹಿ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ 20ನೇ ಚಿತ್ರಸಂತೆಗೆ ಚಾಲನೆ ನೀಡಿದ್ದಾರೆ.
ಬೆಂಗಳೂರು: ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯಿರುವ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ 20ನೇ ಚಿತ್ರಸಂತೆಗೆ(Chitra Santhe) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಪೇಟಿಂಗ್ ಮೇಲೆ ಸಹಿ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಈ ವೇಳೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ, ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್, ಚಿತ್ರಕಲಾ ಪರಿಷತ್ ಅಧ್ಯಕ್ಷ B.L.ಶಂಕರ್ ಉಪಸ್ಥಿತರಿದ್ದರು.
ಚಿತ್ರಕಲಾ ಪರಿಷತ್ನಲ್ಲಿ ಸಿಎಂ ಬೊಮ್ಮಾಯಿ ನವಿಲಿನ ಚಿತ್ರ ಬಿಡಿಸಿದ್ದಾರೆ. ಸಿಎಂ ಕಲೆಯನ್ನ ಮೆಚ್ಚಿ ಪ್ರೇಕ್ಷಕರು ಚಪ್ಪಾಳೆ ಹೊಡೆದಿದ್ದಾರೆ. ಇನ್ನು ಸಿಎಂಗೆ ರಾಣೆಬೆನ್ನೂರು ಕಲಾವಿದರು ಸಿಎಂ ಬೊಮ್ಮಾಯಿ ಹಾಗೂ ಪ್ರಧಾನಿ ಮೋದಿ ಭಾವಚಿತ್ರ ಗಿಫ್ಟ್ ಮಾಡಿದರು. ಈ ವರ್ಷ ಭೌತಿಕ ಮತ್ತು ಆನ್ಲೈನ್ ರೂಪದಲ್ಲಿ ಚಿತ್ರಸಂತೆ ನಡೆಸಲಾಗುತ್ತಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ್, ಓಡಿಶಾ, ಸಿಕ್ಕಿಂ ಸೇರಿ ಸುಮಾರು 18 ರಿಂದ 20 ರಾಜ್ಯಗಳ ಕಲಾವಿದರು ಭಾಗಿಯಾಗಿದ್ದಾರೆ. ದೇಶದ ವಿವಿಧ ಭಾಗಗಳಿಂದ 1500 ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಕಲಾ ಪ್ರೇಮಿಗಳಿಗೆ 100 ರೂಪಾಯಿಗಳಿಂದ ಲಕ್ಷದವರೆಗೆ ಕಲಾಕೃತಿಗಳು ದೊರೆಯುತ್ತವೆ. ಈ ಬಾರಿ 3 ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ.
ಚಿತ್ರಕಲಾ ಪರಿಷತ್ ಹಿಮಾಲಯದ ಎತ್ತರಕ್ಕೆ ಬೆಳೆಯಬೇಕು
ಇನ್ನು ಚಿತ್ರಸಂತೆ ಉದ್ಘಾಟನೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಚಿತ್ರಕಲೆ ಮನಸ್ಸಿನ ಭಾವನೆಗಳನ್ನ ವ್ಯಕ್ತಪಡಿಸುವ ಒಂದು ಮಾಧ್ಯಮ. ಚಿತ್ರಕಲಾ ಪರಿಷತ್ ಹಿಮಾಲಯದ ಎತ್ತರಕ್ಕೆ ಬೆಳೆಯಬೇಕು. ಈ ವರ್ಷ ನಾಲ್ಕೈದು ಕಡೆಗಳಲ್ಲಿ ಚಿತ್ರಸಂತೆ ಮಾಡಬೇಕು. ಚಿತ್ರಸಂತೆಯನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋಗಬೇಕು. ಮುಂದಿನ ವರ್ಷದಿಂದ ಶನಿವಾರ, ಭಾನುವಾರ ಚಿತ್ರಸಂತೆ ಆಯೋಜಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಿತ್ರಕಲಾ ಪರಿಷತ್ತು ಕೆಲಸ ಒಳ್ಳೆ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು ಹಾಗೂ ಸಾಮಾನ್ಯ ಜನರಲ್ಲಿ ಚಿತ್ರಕಲೆ ಅಭಿಪ್ರಾಯ ಮೂಡಿಸೋದು. ಚಿತ್ರಕಲಾ ಪರಿಷತ್ ಒಳ್ಳೆಯ ಕೆಲಸ ಮಾಡ್ತಿದೆ. ಇದು ನಮ್ಮ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ಸಂಸ್ಥೆ. ಇಲ್ಲಿ ಚಿತ್ರಗಳನ್ನು ಬರೀ ನೋಡೋದಲ್ಲ ಎಲ್ಲರೂ ಖರೀದಿ ಮಾಡಿ ಕಲಾವಿದರಿಗೆ ಪ್ರೋತ್ಸಾಹಿಸಿ. ನಾನು ಕೂಡ ಖರೀದಿ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಮಂಡ್ಯದಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧಾರ; ಬಳ್ಳಾರಿ ಜಸ್ಟ್ ಮಿಸ್
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್ ಶಂಕರ್ ಮಾತನಾಡಿ, ನಿರಂತರವಾಗಿ ಎಲ್ಲಾ ಸಿಎಂಗಳು, ಹಾಗೆಯೇ ಎಲ್ಲಾ ಸರ್ಕಾರ ಚಿತ್ರಸಂತೆ ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ಚಿತ್ರಸಂತೆಗೆ ಬೆಂಬಲ ನೀಡಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಬೊಮ್ಮಾಯಿ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ. ನಾನು ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಕಾರಣವಾದ ಪ್ರಮುಖ ರಾಜಕಾರಣಿ ಎಸ್.ಆರ್ ಬೊಮ್ಮಾಯಿ, ಅವರ ಆಶೀರ್ವಾದದಿಂದ ನಾನು ರಾಜಕೀಯಕ್ಕೆ ಬಂದೆ. ಸಿಎಂ ಬೊಮ್ಮಾಯಿ ಈಗಾಗಲೇ ಬರುವಾಗ ಸಾಕಷ್ಟು ಸಲಹೆ ನೀಡಿದ್ದಾರೆ. ಪರಿಷತ್ ಶಾಖೆ ಉತ್ತರ ಕರ್ನಾಟಕದಲ್ಲಿ ತೆಗೆಯಬೇಕು ಅಂತ ಹೇಳಿದ್ದಾರೆ. ಚಿತ್ರಸಂತೆಗೆ ಬೇಕಾದ ಪ್ರತಿಯೊಂದು ಬೇಡಿಕೆ ಸಿಎಂ ಈಡೇರಿಸಿದ್ದಾರೆ. ಸಿಎಂ ಜಿಎಸ್ಟಿ ಸಭೆಯಲ್ಲಿ ಎಲ್ಲಾ ಭಾಗಿಯಾಗಲಿರುವ ಅನುಭವ ಇದೆ. ಹೀಗಾಗಿ ಲೆಕ್ಕಾಚಾರ ಇಟ್ಟುಕೊಂಡು ಚಿತ್ರಸಂತೆಗೆ ಸಿಎಂ ಬೊಮ್ಮಾಯಿ ಹಣ ನೀಡಿದ್ರು. ಕಳೆದ ಬಾರಿಯ ಚಿತ್ರಸಂತೆಯಲ್ಲಿ ಉಳಿದಂತ ದುಡ್ಡು ಏನ್ ಮಾಡ್ಲಿ ಅಂತ ಸಿಎಂ ಕೇಳಿದ್ದೆ. ಹೀಗಾಗಿ ಈ ಬಾರಿಯ ಚಿತ್ರಸಂತೆಗೆ ಎಷ್ಟು ದುಡ್ಡು ಬೇಕೋ ಅಷ್ಟು ದುಡ್ಡು ಮಾತ್ರವೇ ಕೊಡ್ತೀನಿ ಅಂತ ಹೇಳಿದ್ರು. ಅಷ್ಟೇ ಹಣ ನೀಡಿದ್ರು.
ಸಿಎಂ ಬಸವರಾಜ ಬೊಮ್ಮಾಯಿ ತಂದೆಯವರ ಶತಮಾನೋತ್ಸವ ಇದೆ. ಅವರ ಪ್ರತಿಮೆ ಆಗಬೇಕು. ಎಸ್. ಆರ್ ಬೊಮ್ಮಾಯಿ ಅವರು ನನ್ನ ಗುರುವಾಗಿ ಈ ಮಾತನ್ನು ಹೇಳುತ್ತೇನೆ. ಈ ಬಾರಿ ನಾನು ಯಾವುದೇ ಬೇಡಿಕೆ ಸಿಎಂ ಮುಂದೆ ಇಡಲ್ಲ. ಯಾಕೆಂದರೆ ಕಲೆ ಆರಾಧಿಸುವ ಗುಣ ಅವರಲ್ಲಿ ಇದೆ. ಹೀಗಾಗಿ ಅವರೇ ಚಿತ್ರಕಲಾ ಪರಿಷತ್ ಅಭಿವೃದ್ಧಿಗೆ ಸಹಾಯ ಮಾಡ್ತಾರೆ ಎಂಬ ನಂಬಿಕೆ ಇದೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:25 pm, Sun, 8 January 23