AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

’L is for Lockdown’- ಎಲ್ ಅಂದ್ರೆ ಲಾಕ್​ಡೌನ್; 7 ವರ್ಷದ ಬಾಲಕಿ ಪುಸ್ತಕ ಬರೆದಳು

7 ವರ್ಷದ ಬಾಲಕಿಯ ಹೆಸರು ಜಿಯಾ ಗಂಗಾಧರ್. ಬಾಲಕಿಯ ಪುಸ್ತಕವನ್ನು ಅಮೆಜಾನ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಪುಸ್ತಕದ ಬೆಲೆ 158 ರೂಪಾಯಿ.

’L is for Lockdown’- ಎಲ್ ಅಂದ್ರೆ ಲಾಕ್​ಡೌನ್; 7 ವರ್ಷದ ಬಾಲಕಿ ಪುಸ್ತಕ ಬರೆದಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 02, 2021 | 3:52 PM

Share

ಲಾಕ್​ಡೌನ್​ ಸಮಯವನ್ನು  7 ವರ್ಷದ ಬಾಲಕಿ ಪುಸ್ತಕ ಬರೆಯುವ ಮೂಲಕ ಸದುಪಯೋಗ ಪಡೆದುಕೊಂಡಿದ್ದಾಳೆ. ಪುಟ್ಟ ವಯಸ್ಸಿನಲ್ಲಿಯೇ ದೊಡ್ಡ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್​ಡೌನ್​ನ ತನ್ನ ಸಮಯವನ್ನು ಸಂಪೂರ್ಣವಾಗಿ ಪುಟ್ಟ ಬಾಲಕಿ ಬಳಸಿಕೊಂಡಿದ್ದಾಳೆ. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ L is for lockdown ಎಂಬ ಪುಸ್ತಕವನ್ನು ಬರೆದಿದ್ದಾಳೆ. ಅಮೆಜಾನ್​ ಇಂಡಿಯಾದಲ್ಲಿ ಬಾಲಕಿಯ ಪುಸ್ತಕ ಬಿಡುಗಡೆಗೊಂಡಿದೆ.

7 ವರ್ಷದ ಬಾಲಕಿಯ ಹೆಸರು ಜಿಯಾ ಗಂಗಾಧರ್. ಬಾಲಕಿಯ ಪುಸ್ತಕವನ್ನು ಅಮೆಜಾನ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಪುಸ್ತಕದ ಬೆಲೆ 158 ರೂಪಾಯಿ.

ಬದಲಾಗುತ್ತಿರುವ ಕಾಲಮಾನದಲ್ಲಿ ಹಾಗೂ ಪ್ರಸ್ತುತದ ಪರಿಸ್ಥಿತಿಯಲ್ಲಿ ಅನುಭವಿಸಿದ ಭಯವನ್ನು ಮತ್ತು ತನ್ನ ಕಲಿಕೆಯನ್ನು ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾಳೆ. ಜಿಯಾಳ ಸಂತೋಷದ ದಿನಗಳ ಮತ್ತು ಮನೆಯಲ್ಲಿಯೇ ಕಲಿತ ಆನ್​ಲೈನ್​ ಸಮಯದ ಕುರಿತಾಗಿ ವಿವರಿಸಿದ್ದಾಳೆ.

ಜಿಯಾಳ ತಾಯಿ ಮಾರ್ಕೆಟಿಂಗ್ ಪ್ರೊಫೆಷನಲ್​ ಆಗಿದ್ದವರು. ಪುಟ್ಟ ಮಗುವಿನ ದೈನಂದಿನ ದಿನಚರಿಯ ಪುಸ್ತಕವನ್ನು ಓದಿದ ಬಳಿಕ ಒಂದೊಳ್ಳೆಯ ಪುಸ್ತಕ ಬರೆಯುವ ಅವಳ ಆಸೆಯನ್ನು ಪ್ರೋತ್ಸಾಹಿಸಿದರು. ಪುಸ್ತಕದಲ್ಲಿ 7 ವರ್ಷದಲ್ಲಿರುವ ಮಗು ಮನೆಯಲ್ಲಿರುವಾಗ ಕಳೆದ ಕ್ಷಣದ ಬಗ್ಗೆ ವಿವರಿಸುತ್ತದೆ. ಸಂವಹನ, ಆನ್ಲೈನ್ ತರಗತಿ, ಆಟ, ಕಲಿಕೆಯ ಬಗ್ಗೆ ವಿವರಿಸಲಾಗಿದೆ.

ಲಾಕ್​ಡೌನ್​ ಜಾರಿಗೆ ಬಂದ ಕೂಡಲೆ ಆನ್ಲೈನ್ ಶಿಕ್ಷಣ ಜಾರಿಗೆ ಬಂದಿತು. ತರಗತಿಗಳೆಲ್ಲವೂ ಆನ್ಲೈನ್ ನಲ್ಲಿ ಪ್ರಾರಂಭವಾದವು. ಮನೆಯಲ್ಲಿ ತಂದೆ- ತಾಯಿ ಜತೆ ಇದ್ದದುದರಿಂದ ಅವರು ನನಗೆ ಸಹಾಯ ಮಾಡಿದರು ಎಂದು ಜಿಯಾ ಹೇಳಿದ್ದಾಳೆ. ಈ ಕುರಿತಂತೆ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಇದನ್ನೂ ಓದಿ:

Bookmark : ಅಕ್ಷರ ಪ್ರಕಾಶನ ; ‘ಪುಸ್ತಕ ಪ್ರೀತಿ, ಓದುಗಪ್ರಜ್ಞೆ ಪೋಷಿಸುವುದೇ ನಮ್ಮ ಗುರಿ‘

Bookmark: ‘ಪುಸ್ತಕೋದ್ಯಮ ಪೂರ್ಣಪ್ರಮಾಣದ ಉದ್ಯಮವಾಗಿಲ್ಲ ಎನ್ನುವುದು ಅಭಿನಂದನೀಯ’

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ