ಬೆಂಗಳೂರು: 22 ಬ್ಯಾಂಕ್​ನಲ್ಲಿ ಹತ್ತು ಕೋಟಿ ಲೋನ್ ಪಡೆದ ಪ್ರಕರಣ; ಒಂದೇ ಕುಟುಂಬದ ಐವರು ಸೇರಿ ಆರು ಜನ ಅರೆಸ್ಟ್

ವಂಚನೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಎಷ್ಟೇ ಮುತುವರ್ಜಿವಹಿಸಿದರೂ ಒಮ್ಮೊಮ್ಮೆ ಮೋಸ ಹೋಗಬೇಕಾಗುತ್ತದೆ. ಅದರಂತೆ ಇದೀಗ 22 ಬ್ಯಾಂಕ್​​ನಲ್ಲಿ ಹತ್ತು ಕೋಟಿ ಲೋನ್(loan) ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿ ಒಟ್ಟು ಆರು ಜನರನ್ನು ಅರೆಸ್ಟ್ ಮಾಡಲಾಗಿದೆ.

ಬೆಂಗಳೂರು: 22 ಬ್ಯಾಂಕ್​ನಲ್ಲಿ ಹತ್ತು ಕೋಟಿ ಲೋನ್ ಪಡೆದ ಪ್ರಕರಣ; ಒಂದೇ ಕುಟುಂಬದ ಐವರು ಸೇರಿ ಆರು ಜನ ಅರೆಸ್ಟ್
ಬಂಧಿತ ಆರೋಪಿಗಳು
Follow us
Prajwal Kumar NY
| Updated By: ಕಿರಣ್ ಹನುಮಂತ್​ ಮಾದಾರ್

Updated on:Apr 19, 2024 | 4:01 PM

ಬೆಂಗಳೂರು, ಏ.19: ಕಟ್ಟಡವಿದೆ ಎಂದು ನಂಬಿಸಿ 22 ಬ್ಯಾಂಕ್​​ನಲ್ಲಿ ಹತ್ತು ಕೋಟಿ ಲೋನ್(loan) ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರು ಸೇರಿ ಒಟ್ಟು ಆರು ಜನರನ್ನು ಅರೆಸ್ಟ್ ಮಾಡಲಾಗಿದೆ. ನಾಗೇಶ್ ಭಾರದ್ವಾಜ್ ,ಬಿ ಎಸ್ ಸುಮಾ, ಸತೀಶ್, ವೇದಾ, ಆರ್ ವಿ ಶೇಷಗಿರಿ, ಆರ್​ಎಸ್ ಶೋಭಾ ಬಂಧಿತ ಆರೋಪಿಗಳು. ಬೇಗೂರಿನಲ್ಲಿ ನಿವಾಸವಿದೆ ಎಂದು ನಂಬಿಸಿ ಅದರ ಮೇಲೆ ಲೋನ್ ಪಡೆಯಲಾಗಿತ್ತು, ಈ ಕುರಿತು ಜಯನಗರ ಪೊಲೀಸ್ ಠಾಣೆ(Jayanagar Police Station)ಯಲ್ಲಿ 2022 ರಲ್ಲಿ ಕೇಸ್ ಕೂಡ ದಾಖಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಆರೋಪಿಗಳು ನಾಪತ್ತೆಯಾಗಿದ್ದರು.

ಕಟ್ಟಡವಿದೆ ಎಂದು ನಂಬಿಸಿ ಹಲವು ಬ್ಯಾಂಕ್​ಗಳಲ್ಲಿ ಲೋನ್​

ಸಹಕಾರಿ ಬ್ಯಾಂಕ್, ರಾಷ್ಟೀಕೃತ ಬ್ಯಾಂಕ್, ಕೋ ಅಪರೇಟಿವ್ ಬ್ಯಾಂಕ್ ಸೇರಿ ಹಲವಾರು ಕಡೆಗಳಲ್ಲಿ ಬೇಗೂರಿನಲ್ಲಿ 2100 ಅಡಿ ವಿಸ್ತೀರ್ಣದಲ್ಲಿ ನಮ್ಮ ಕಟ್ಟಡ  ಇದೆ ಎಂದು ನಂಬಿಸಿದ್ದರು. ಜೊತೆಗೆ ಅದಕ್ಕೆ ಬೇಕಾದ ದಾಖಲಾತಿಗಳನ್ನು ಕೂಡ ಸೃಷ್ಟಿಸಿ, ಅದನ್ನು ಕುಟುಂಬದ ಬೇರೆ ಬೇರೆ ವ್ಯಕ್ತಿಗಳ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದರು. ನಂತರ ಅದಕ್ಕೆ ಬೇಕಾದ ದಾಖಲಾತಿಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು 2014 ರಿಂದ 2015ರ ಅವಧಿಯಲ್ಲಿ ವಂಚನೆ ಮಾಡಿದ್ದರು. ಅಷ್ಟೇ ಅಲ್ಲ, ಪಡೆದ ಲೋನ್ ಹಣದಲ್ಲಿ ಒಂದು ಸೈಟ್ ಕೂಡ ಪಡೆದುಕೊಂಡಿದ್ದರು. ಸದ್ಯ ಅದನ್ನು ಕೇಸ್​ನಲ್ಲಿ ಅಟ್ಯಾಚ್ ಮಾಡಲಾಗಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಮತ್ತೊಂದು ವಂಚನೆ ಜಾಲ: ಕುವೈತ್​ನಲ್ಲಿ ಕುಳಿತು ಕೋಟಿ ಕೋಟಿ ವಂಚಿಸಿದವ ಅರೆಸ್ಟ್

ಬೈಕ್​​ಗೆ ಟಿಪ್ಪರ್​ ಲಾರಿ ಡಿಕ್ಕಿ; ಬೈಕ್​ ಸವಾರನ ಬಲಗೈ ಛಿದ್ರ ಛಿದ್ರ

ಆನೇಕಲ್: ಪಟ್ಟಣದ ರಾಘವೇಂದ್ರ ಭವನ ಮುಂಭಾಗದಲ್ಲಿ ಬೈಕ್​​ಗೆ ಟಿಪ್ಪರ್​ ಲಾರಿ ಡಿಕ್ಕಿಯಾಗಿ ಬೈಕ್​ ಸವಾರನ ಬಲಗೈ ಛಿದ್ರವಾಗಿದೆ. ವಣಕನಹಳ್ಳಿ ವಾಸಿ ಗ್ರಾಮದ ಗಾಯಾಳು ಗೋಪಾಲರೆಡ್ಡಿ(60). ಮುಂದೆ ಸಾಗುತ್ತಿದ್ದ ಬೈಕ್​​ಗೆ ಹಿಂಬದಿಯಿಂದ ಟಿಪ್ಪರ್​ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಬಿದ್ದಿದ್ದ ಬೈಕ್​ ಸವಾರನ ಬಲಗೈ ಮೇಲೆ ಟಿಪ್ಪರ್ ಲಾರಿ ಚಕ್ರ ಹರಿದಿದೆ. ಇನ್ನು ಇದೇ ರೀತಿ ಲಾರಿಗಳ ಅತಿ ವೇಗದಿಂದ ತಿಂಗಳಲ್ಲಿ ಮೂರು ಬಲಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Fri, 19 April 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ