AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು:ಮೂರು ವರ್ಷದ ಬಳಿಕ ಬನಶಂಕರಿ ದೇವಸ್ಥಾನದಲ್ಲಿ ಅಂಜನೇಯ ದೇಗುಲ ನಿರ್ಮಾಣ ಅಸ್ತು

ಬನಶಂಕರಿ ದೇವಸ್ಥಾನದಲ್ಲಿನ ಆಂಜನೇಯ ದೇಗುಲ ತುಂಬಾ ಪ್ರಾಮುಖ್ಯತೆ ಹೊಂದಿದೆ.‌ ಈ ದೇವಸ್ಥಾನವನ್ನ ಅಭಿವೃದ್ಧಿ ಪಡಿಸುವ ಸಲುವಾಗಿ ಡೆಮಾಲಿಶ್ ಮಾಡಲಾಗಿತ್ತು.‌ ಇದೀಗ ಬಹುದಿನಗಳ ನಂತರ ಭಕ್ತರ ಬೇಡಿಕೆಯಂತೆ ಕಾಮಗಾರಿ ಆರಂಭವಾಗಿದೆ. ಆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಬೆಂಗಳೂರು:ಮೂರು ವರ್ಷದ ಬಳಿಕ ಬನಶಂಕರಿ ದೇವಸ್ಥಾನದಲ್ಲಿ ಅಂಜನೇಯ ದೇಗುಲ ನಿರ್ಮಾಣ ಅಸ್ತು
ಬನಶಂಕರಿ ದೇವಸ್ಥಾನದಲ್ಲಿ ಅಂಜನೇಯ ದೇಗುಲ ನಿರ್ಮಾಣ ಅಸ್ತು
Poornima Agali Nagaraj
| Edited By: |

Updated on: Feb 18, 2024 | 7:51 AM

Share

ಬೆಂಗಳೂರು, ಫೆ.18: ನಗರದ ಬನಶಂಕರಿ ದೇವಸ್ಥಾನ (Banashankari Temple) ಎಂದರೆ ಭಕ್ತಾದಿಗಳಿಗೆ ಎಲ್ಲಿಲ್ಲದ ಪ್ರೀತಿ ಹಾಗೂ ಭಕ್ತಿ.‌ ಹೀಗಾಗಿ ಬೆಂಗಳೂರು ಅಷ್ಟೇ ಅಲ್ಲದೇ ಬೇರೆ – ಬೇರೆ ಭಾಗಗಳಿಂದ ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಇನ್ನು ಬನಶಂಕರಿ ದೇವಸ್ಥಾನದಲ್ಲಿ ಅಮ್ಮನವರ ದೇವಸ್ಥಾನ ಎಷ್ಟು ಪ್ರಸಿದ್ದಿ ಪಡೆದಿದಿಯೋ ಅಷ್ಟೇ ದೇವಸ್ಥಾನದಲ್ಲಿರುವ ಅಂಜನೇಯ ದೇವಸ್ಥಾನವು ಕೂಡ ಅಷ್ಟೇ ಪ್ರಸಿದ್ದಿ ಪಡೆದಿದೆ‌. ಸಧ್ಯ ಅಂಜನೇಯ ದೇವಸ್ಥಾನವನ್ನ ಅಭಿವೃದ್ಧಿ ಪಡಿಸುವ ಸಲುವಾಗಿ ಕಳೆದ 9 ತಿಂಗಳ ಹಿಂದೆ ಅಂಜನೇಯ ದೇವಸ್ಥಾನವನ್ನ ಡೆಮಾಲೀಷನ್ ಮಾಡಲಾಗಿತ್ತು. ಇದೀಗ ಹಲವು ತಿಂಗಳ ಬಳಿಕ ದೇವಸ್ಥಾನದ ಕೆಲಸ ಆರಂಭವಾಗಿದೆ.

9 ಕೋಟಿ 96 ಲಕ್ಷದಷ್ಟು ಖರ್ಚು ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ

ಅಂಜನೇಯ ದೇವಸ್ಥಾನವನ್ನ ಕಳೆದ 8 ತಿಂಗಳ ಹಿಂದೆ ಡೆಮಾಲಿಶ್ ಮಾಡಲಾಗಿತ್ತು. ಆದಾದ ಬಳಿಕ ದೇವಸ್ಥಾನ ನಿರ್ಮಾಣಕ್ಕೆ ಮುಜುರಾಯಿ ಇಲಾಖೆಯಿಂದ ಹಣ ಸ್ಯಾಂಕ್ಷನ್​ ಆಗಿರ್ಲಿಲ್ಲ.‌ ಇದೀಗ ದೇವಸ್ಥಾನ ಕಾಮಗಾರಿ ಮುಜುರಾಯಿ ಇಲಾಖೆ ಪರ್ಮಿಷನ್ ನೀಡಿದ್ದು, ಒಟ್ಟು 9 ಕೋಟಿ 96 ಲಕ್ಷದಷ್ಟು ಹಣದಿಂದ ದೇವಸ್ಥಾನ ನಿರ್ಮಾಣದ ಕೆಲಸ ನಡೆಯುತ್ತಿದೆ. ಇನ್ನು ದೇವಸ್ಥಾನವು ದ್ರಾವಿಡ ಶೈಲಿಯಲ್ಲಿ ಮೂಡಿ ಬರುತ್ತಿದ್ದು, ವಿಶೇಷವಾಗಿ 38 ವಿಶೇಷ ಕಂಬಗಳನ್ನ ನಿರ್ಮಿಸಲಾಗುತ್ತಿದೆಯಂತೆ. ಈ ಅಂಜನೇಯ ಪ್ರತಿಮೆಯನ್ನ ಬದಲಿಸಿ ದೊಡ್ಡ ಮಟ್ಟದ ಪ್ರತಿಮೆಯನ್ನ ಕೆತ್ತಿಸಲು ಚಿಂತನೆ ನಡೆದಿದ್ದು, ಈ ಪ್ರತಿಮೆಯನ್ನ ರಾಮಮಂದಿರದ ಬಾಲರಾಮನನ್ನ ಕೆತ್ತಿರುವ ಅರುಣ್ ಯೋಗರಾಜ್ ರಿಂದಲೇ ಮೂರ್ತಿ ಕೆತ್ತಿಸಲೂ ದೇವಸ್ಥಾನದ ಆಡಳಿತ ಮಂಡಳಿ ಒಂದು ಸುತ್ತಿನ ಮಾತುಕತೆ ನಡೆಸಿದೆ. ಈಗಾಗಲೇ ದೇವಸ್ಥಾನದ ಕೆಲಸವು ಆರಂಭ ಮಾಡಿದೆ. ಇನ್ನು ಒಂದು ವರ್ಷದಲ್ಲಿ ದೇವಸ್ಥಾನ ನಿರ್ಮಾಣದ ಕಲಸ ಮುಗಿಯಲಿದ್ದು, ದೊಡ್ಡ ಮಟ್ಟದಲ್ಲಿ ದೇವಸ್ಥಾನ ನಿರ್ಮಿಸಲು ಆಡಳಿತ ಮಂಡಳಿ ಸಜ್ಜಾಗಿದೆ.

ಇದನ್ನೂ ಓದಿ:4 ಲಕ್ಷ ದೇವಸ್ಥಾನಗಳಿವೆ, ಅವುಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸಲು ಸಂಘಟಿತರಾಗಬೇಕು- ಉಡುಪಿ ಸಮಾವೇಶ

ಇನ್ನು ಈ ಕುರಿತು ಮಾತನಾಡಿದ ಭಕ್ತಾದಿಗಳು, ‘ಬನಶಂಕರಿ ದೇವಸ್ಥಾನ ಅಂದರೆ ನಮಗೆ ತುಂಬ ನಂಬಿಕೆ.‌ ಅದೇ ರೀತಿ ಅಂಜನೇಯನ ಮೇಲೂ ಇದೆ. ಬನಶಂಕರಿ ದರ್ಶನ ಮಾಡಿ ಅಂಜನೇಯನ ದರ್ಶನ ಮಾಡುತ್ತಿದ್ವಿ‌. ಆದ್ರೆ, ದೇವಸ್ಥಾನದ ಡೆಮಾಲಿಷನ್ ಆದಾ ನಂತರ ನಾವು ದರ್ಶನ ಮಾಡುವುದಕ್ಕೆ ಸಾಧ್ಯ ಆಗಿರಲಿಲ್ಲ. ಈಗ ದೇವಸ್ಥಾನದ ಕೆಲಸ ಆರಂಭವಾಗಿದೆ. ತುಂಬ ಖುಷಿಯಾಗುತ್ತಿದೆ ಎಂದು ಹೇಳಿದರು. ಒಟ್ನಲ್ಲಿ, ಎಂಟು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ದೇವಸ್ಥಾನದ ಕೆಲಸ ಸಧ್ಯ ಆರಂಭವಾಗಿದ್ದು, ಇನ್ನು ಒಂದು ವರ್ಷದ ಒಳಗೆ ಕೆಲಸ ಮುಗಿಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್