ಜಿಬಿಎ ಕಚೇರಿಯಲ್ಲಿ 800 ವರ್ಷದ ಹಳೆ ದೇವಾಲಯ ಜೀರ್ಣೋದ್ಧಾರ: ನೌಕರರಿಂದ ದೇಣಿಗೆ
ಬೆಂಗಳೂರಿನ ಜಿಬಿಎ ಕೇಂದ್ರ ಕಚೇರಿಯಲ್ಲಿರುವ 800 ವರ್ಷಗಳ ಇತಿಹಾಸವಿರುವ ಶ್ರೀ ಆದಿಶಕ್ತಿ ದೇವಾಲಯವು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಕಾರದೊಂದಿಗೆ 1.6 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದೆ. ನೌಕರರ ದೇಣಿಗೆಯಿಂದ ಪುನರುಜ್ಜೀವನಗೊಂಡ ಈ ದೇವಾಲಯದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉದ್ಘಾಟನೆ ಮಾಡಲಾಗಿದೆ.

ಬೆಂಗಳೂರು, ಜನವರಿ 23: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೇಂದ್ರ ಕಚೇರಿಯಲ್ಲಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಶ್ರೀ ಆದಿಶಕ್ತಿ ದೇವಾಲಯ ಇಂದು ಲೋಕಾರ್ಪಣೆಗೊಂಡಿದೆ. ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಆದಿಶಕ್ತಿ ದೇವಾಲಯ ಜೀರ್ಣೋದ್ಧಾರ ಮಾಡಲಾಗಿದ್ದು, ಕಳೆದ ಮೂರು ದಿನಗಳಿಂದ ಜಿಬಿಎ ಕೇಂದ್ರ ಕಚೇರಿ ಕಂಗೊಳಿಸಿತು.
800 ವರ್ಷಗಳ ಸುದೀರ್ಘ ಇತಿಹಾಸ
ಉದ್ಯಾನನಗರಿ ಬೆಂಗಳೂರಿನ ಜಿಬಿಎ ಕೇಂದ್ರ ಕಚೇರಿಯಲ್ಲಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಶ್ರೀ ಆದಿಶಕ್ತಿ ದೇವಾಲಯ ಸರಿ ಸಮಾರು 800 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಬೆಂಗಳೂರಿನ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದೆಂದು ಪ್ರಸಿದ್ಧಿ ಪಡೆದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಾಯ, ಸಹಕಾರ ಮತ್ತು ಬೆಂಬಲಗಳಿಂದ ಜೀರ್ಣೋದ್ಧಾರಗೊಂಡಿರುವ ಏಳು ಸುತ್ತಿನ ಕೋಟೆ ಸಪ್ತಮಾತೃಕಾ ಸಹಿತ ಶ್ರೀ ಆದಿಶಕ್ತಿ ದೇವಾಲಯದ ಉದ್ಘಾಟನೆ ಮತ್ತು ದೇವತಾ ಪೂಜಾ ಕಾರ್ಯಕ್ರಮಕ್ಕೆ ಮೂರು ದಿನಗಳವರೆಗೂ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: 8ನೇ ದಿನ ಉತ್ಖನನದಲ್ಲಿ ಅಪರೂಪದ ವಸ್ತು ಪತ್ತೆ: ಲಕ್ಕುಂಡಿ ನೈಜ ಗತವೈಭವ ಈಗ ಆರಂಭ
ಕಾರ್ಯಕ್ರಮದಲ್ಲಿ ವಿವಿಧ ರೀತಿಯ ದೇವರ ಪ್ರತಿಷ್ಠಾಪನೆ ಮಾಡಲಾಗಿದ್ದು, ಜೊತೆಗೆ ಸಪ್ತಮಾತೃಕಾ ದುರ್ಗಾ, ಶ್ರೀ ಲಕ್ಷ್ಮೀ ಸರಸ್ವತಿ ಹೋಮ, ತತ್ವನ್ಯಾಸ ಕಾಲನ್ಯಾಸ ಹೋಮ, ಕಲಾ ಹೋಮ, ನವ ಚಂಡಿಕಾಯಾಗ, ನವ ಚಂಡಿಕಾ ಹೋಮ, ಕುಂಭಾಭಿಷೇಕ, ವಿಶೇಷ ದುರ್ಗಾ ದೀಪ ನಮಸ್ಕಾರ ಹಾಗೂ ದೇವತಾ ಕಾರ್ಯಕ್ರಮ ನಡೆಯಿತು.
ದೇವಾಲಯದ ಜೀರ್ಣೋದ್ದಾರದ ಮಹತ್ಕಾರ್ಯಕ್ಕಾಗಿ ಸಂಘದ ವತಿಯಿಂದ ಪ್ರತಿ ನೌಕರರಿಂದ ತಲಾ ಒಂದು ಸಾವಿರ ರೂ. ಕಟಾವಣೆ ಮಾಡಲಾಯಿತು ಮತ್ತು ಆರ್ಥಿಕವಾಗಿ ಸಹಾಯ ನೀಡಿ ಅಂದಾಜು 1 ಕೋಟಿ 60 ಲಕ್ಷ ರೂ. ಜೀರ್ಣೋದ್ಧಾರಕ್ಕೆ ನೌಕರರ ವರ್ಗದಿಂದ ದೇಣಿಗೆ ನೀಡಲಾಗಿದೆ. ಜೊತೆಗೆ ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ 20 ಲಕ್ಷ ರೂ ಉದಾರ ದೇಣಿಗೆ ನೀಡಿ ದೇವಸ್ಥಾನದ ನವೀಕರಣಕ್ಕೆ ಕೈಜೋಡಿಸಲಾಗಿದೆ.
ಇದನ್ನೂ ಓದಿ: Gadag: ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್ ಪ್ರವಾಸಿಗರು!
ಒಟ್ಟಾರೆಯಾಗಿ ಹಲವು ವರ್ಷಗಳಿಂದ ದೇವಸ್ಥಾನದ ಶಿಥಿಲಾ ವ್ಯವಸ್ಥೆ ಇಲ್ಲದೆ ಹಳೆ ದೇವಸ್ಥಾನ ಹಾಳಾಗಿತ್ತು. ಪ್ರತಿ ನೌಕರರಿಂದ ತಲಾ ಇಂತಿಷ್ಟು ಹಣವನ್ನು ನೀಡುವ ಮೂಲಕ ಆರ್ಥಿಕವಾಗಿ ಸಹಾಯ ನೀಡುವ ಮೂಲಕ ದೇವಸ್ಥಾನದ ನವೀಕರಣಕ್ಕೆ ಕೈಜೋಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:47 pm, Fri, 23 January 26
