ಬೆಂಗಳೂರಿನಲ್ಲಿ ವರ್ಲ್ಡ್ಕಪ್ ಮ್ಯಾಚ್: ಕ್ರಿಕೆಟ್ ಪ್ರೇಮಿಗಳಿಗಾಗಿ ಬಿಎಂಟಿಸಿ ಹೆಚ್ಚವರಿ ಬಸ್ ಸಂಚಾರ; ಇಲ್ಲಿದೆ ವಿವರ
ನಮ್ಮ ಕರುನಾಡಿನ ಹೆಮ್ಮಯ, ರಾಜ್ಯ ರಾಜಧಾನಿಯಲ್ಲಿರುವ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಕ್ಟೋಬರ್ 20, 26 ಮತ್ತು ನವೆಂಬರ್ 04, 09 ಹಾಗೂ 12 ರಂದು ಕ್ರಿಕೆಟ್ ವರ್ಲ್ಡ್ಕಪ್ ನಡೆಯಲಿದೆ. ಈ ಹಿನ್ನೆಯಲ್ಲಿ ಬಿಎಂಟಿಸಿ ಹೆಚ್ಚು ಬಸ್ಗಳನ್ನು ರಸ್ತೆಗೆ ಇಳಿಸಲಿದೆ.
ಬೆಂಗಳೂರು ಅ.19: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 (Cricket World Cup 2023) ಅಕ್ಟೋಬರ್ 5ರಿಂದ ಆರಂಭವಾಗಿದೆ. ಒಂದು ದಶಕದ ನಂತರ ಭಾರತ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿದೆ. ದೇಶಾದ್ಯಂತ ವರ್ಲ್ಡ್ಕಪ್ ಮೇನಿಯಾ ಶುರುವಾಗಿದೆ. ಪಂದ್ಯಗಳು ಅಹಮದಾಬಾದ್, ಪುಣೆ, ಮುಂಬೈ, ದೆಹಲಿ, ಲಕ್ನೋ, ಹೈದರಾಬಾದ್, ಧರ್ಮಶಾಲಾ, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತಾ ಸೇರಿದಂತೆ ಭಾರತದ 10 ನಗರಗಳಲ್ಲಿ ಪಂದ್ಯಾವಳಿ ನಡೆಯುತ್ತಿವೆ. ನಮ್ಮ ಕರುನಾಡಿನ ಹೆಮ್ಮಯ, ರಾಜ್ಯ ರಾಜಧಾನಿಯಲ್ಲಿರುವ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ (Chinnaswamy Stadium) ಒಟ್ಟು ಐದು ಪಂದ್ಯಗಳು ನಡೆಯಲಿವೆ.
ವರ್ಲ್ಡ್ಕಪ್ ಪಂದ್ಯಕ್ಕೆ ಬಿಎಂಟಿಸಿ ಬಸ್ | ||
ಎಲ್ಲಿಂದ | ಮಾರ್ಗ | ಎಲ್ಲಿಗೆ |
ಚಿನ್ನಸ್ವಾಮಿ ಸ್ಟೇಡಿಯಂ | ಹೆಚ್ ಎಎಲ್ ರೋಡ್ | ಕಾಡುಗೋಡಿ |
ಚಿನ್ನಸ್ವಾಮಿ ಸ್ಟೇಡಿಯಂ | ಹೂಡಿ ರಸ್ತೆ | ಕಾಡುಗೋಡಿ |
ಚಿನ್ನಸ್ವಾಮಿ ಕ್ರೀಡಾಂಗಣ | ಅಗರ ದೊಮ್ಮಸಂದ್ರ | ಸರ್ಜಾಪುರ |
ಚಿನ್ನಸ್ವಾಮಿ ಸ್ಟೇಡಿಯಂ | ಹೊಸೂರು ರಸ್ತೆ | ಎಲೆಕ್ಟ್ರಾನಿಕ್ ಸಿಟಿ |
ಚಿನ್ನಸ್ವಾಮಿ ಸ್ಟೇಡಿಯಂ | ಜಯದೇವ ಆಸ್ಪತ್ರೆ | ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ |
ಚಿನ್ನಸ್ವಾಮಿ ಕ್ರೀಡಾಂಗಣ | ಎಂಸಿಟಿಸಿ & ನಾಯಂಡಹಳ್ಲಿ | ಹೆಚ್ ಬಿ ಕ್ವಾರ್ಟರ್ಸ್ |
ಚಿನ್ನಸ್ವಾಮಿ ಸ್ಟೇಡಿಯಂ | ಯಶವಂತಪುರ | ನೆಲಮಂಗಲ |
ಚಿನ್ನಸ್ವಾಮಿ ಸ್ಟೇಡಿಯಂ | ಮಾಗಡಿ ರೋಡ್ | ಜನಪ್ರಿಯ ಟೌನ್ ಶಿಪ್ |
ಚಿನ್ನಸ್ವಾಮಿ ಸ್ಟೇಡಿಯಂ | ಹೆಬ್ಬಾಳ | ಯಲಹಂಕ 5ನೇ ಹಂತ |
ಚಿನ್ನಸ್ವಾಮಿ ಸ್ಟೇಡಿಯಂ | ನಾಗವಾರ & ಟ್ಯಾನರಿ ರೋಡ್ | ಹೆಗ್ಗಡೆ ನಗರ,ಯಲಹಂಕ |
ಚಿನ್ನಸ್ವಾಮಿ ಸ್ಟೇಡಿಯಂ | ಹೆಣ್ಣೂರು ರಸ್ತೆ | ಬಾಗಲೂರು |
ಚಿನ್ನಸ್ವಾಮಿ ಸ್ಟೇಡಿಯಂ | ಟಿನ್ ಪ್ಯಾಕ್ಟರಿ | ಹೊಸಕೋಟೆ |
ಅಕ್ಟೋಬರ್ 20, 26 ಮತ್ತು ನವೆಂಬರ್ 04, 09 ಹಾಗೂ 12 ರಂದು ನಡೆಯಲಿರುವ ಪಂದ್ಯಗಳು ನಡೆಯಲಿವೆ. ಪಂದ್ಯಗಳನ್ನು ಲೈವ್ ಆಗಿ ವೀಕ್ಷಿಸಲು ಬರುವ ಕ್ರಿಕೆಟ್ ಅಭಿಮಾನಿಗಳಿಗೆ ಬಿಎಂಟಿಸಿ ಗುಡ್ ನ್ಯೂಸ್ ನೀಡಿದೆ. ಹೌದು ಕ್ರಿಕೆಟ್ ವೀಕ್ಷಣೆಗೆ ಬರುವ ಕ್ರೀಡಾಭಿಮಾನಿಗಳಿಗಾಗಿ ಬಿಎಂಟಿಸಿ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ಗಳನ್ನು ಬಿಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Thu, 19 October 23